Advertisement
ಈಗಾಗಲೇ ಆರೋಪ-ಪ್ರತ್ಯಾರೋಪ, ಆಡಿಯೋ- ವೀಡಿಯೋ ಟೇಪ್‌ಗ್ಳ ಗಲಾಟೆ, ಹಲ್ಲೆ ಆರೋಪ ಇತ್ಯಾದಿ ಎಲ್ಲವೂ ಮುಗಿದು ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ. ಎಪ್ರಿಲ್ ಒಂದರಂದು ಮತದಾನ.
Related Articles
Advertisement
ಇದರಂತೆಯೇ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ಸಹ ತಾಲಿಗಂಜ್ ಕ್ಷೇತ್ರ ದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರಕ್ಕೂ ಬಬುಲ್‌ಗೂ ಸಂಬಂಧವಿಲ್ಲ. ಯಾಕೆಂದ ರೆ, ಅವರು ಲೋಕಸಭೆಗೆ ಆಯ್ಕೆಯಾಗಿದ್ದು ಪಶ್ಚಿಮ್ ಬರ್ಧಮಾನ್ ಜಿಲ್ಲೆಯ ಅಸಂಸೋಲ್ ಕ್ಷೇತ್ರದಿಂದ. 2 ಬಾರಿ ಲೋಕಸಭೆಗೆ ಆಯ್ಕೆಯಾದವರು. ಈಗ ವಿಧಾನ ಸಭೆಗೆ ಸ್ಪರ್ಧಿಸಿರುವುದು ಕೋಲ್ಕತ್ತಾದ ತಾಲಿಗಂಜ್ ಕ್ಷೇತ್ರದಿಂದ. ಈ ಕ್ಷೇತ್ರದ ವಿಶೇಷವೆಂದರೆ ಇಲ್ಲಿಂದ ಟಿಎಂಸಿಯ ಸಚಿವ ಅರೂಪ್ ಬಿಸ್ವಾಸ್ 2006ರಿಂದ ನಿರಂತರವಾಗಿ ಗೆಲ್ಲುತ್ತಿದ್ದಾರೆ. ಇಲ್ಲಿಯೂ ಬಿಜೆಪಿ 2016, 2011ರಲ್ಲಿ ಮೂರನೇ ಸ್ಥಾನ ಪಡೆದಿತ್ತು. ಆದರೂ ಬಬುಲ್ ಸುಪ್ರಿಯೋ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಪ್ರೊಫೆಸರ್ !: ಈ ವ್ಯಕ್ತಿ ಇಡೀ ಕ್ಷೇತ್ರದಲ್ಲಿ ಪರಿಚಯವಾಗಿರುವುದೇ ಪ್ರೊಫೆಸರ್ ಎಂದೇ. ನಿವೃತ್ತ ಶಿಕ್ಷಕ ರಬಿಂದ್ರನಾಥ ಭಟ್ಟಾಚಾರ್ಯ ಸಿಂಗೂರ್ ವಿಧಾನಸಭೆ ಕ್ಷೇತ್ರದಿಂದ ನಾಲ್ಕು ಬಾರಿ ತೃಣಮೂಲ ಕಾಂಗ್ರೆಸ್‌ನಿಂದ ಆಯ್ಕೆಯಾದವರು. ಸಿಂಗೂರ್ ಭೂ ಸ್ವಾಧೀನ ವಿರೋಧಿ ಚಳವಳಿ ನಡೆದ ಪ್ರದೇಶ. ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷಕ್ಕೆ ವರ್ಚಸ್ಸು ತಂದ ಚಳವಳಿ.
ರಬಿಂದ್ರನಾಥ ಭಟ್ಟಾಚಾರ್ಯ ಸಹ ಈ ಚಳವಳಿಯ ನೇತೃತ್ವ ವಹಿಸಿದವರು. ಈ ಬಾರಿ ಚುನಾವಣೆಗಿಂತ ಕೆಲವು ದಿನಗಳ ಹಿಂದೆ ಬಿಜೆಪಿಗೆ ವಲಸೆ ಬಂದವರು (ತೃಣಮೂಲದಲ್ಲಿ ಈ ಬಾರಿ ಅವಕಾಶ ಸಿಗುವುದು ಸಂಶಯವಿತ್ತು). ಬಿಜೆಪಿಯಲ್ಲೇನೋ ಅವ ಕಾಶ ಸಿಕ್ಕಿತು. ಆದರೆ ಬಿಜೆಪಿಯ ಕಾರ್ಯಕರ್ತರೇ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಹೈಕಮಾಂಡ್ ನಿಲುವು ಸರಿಯಿಲ್ಲ ಎಂದು ರಸ್ತೆ ತಡೆ ನಡೆಸಿ ಪ್ರತಿಭಟಿ ಸಿದರು. ಆದರೆ ಯಾವುದೇ ಬದಲಾವಣೆ ಆಗಿಲ್ಲ. ವಿಚಿತ್ರವೆಂದರೆ ಸಿಂಗೂರ್ ಚಳವಳಿಯಲ್ಲಿ ಒಟ್ಟಿಗೇ ಶ್ರಮಿಸಿದ್ದ ಗೆಳೆಯನೇ ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿ, ಪ್ರತಿಸ್ಪರ್ಧಿ. ಮತ್ತೆ ಪ್ರೊಫೆಸರ್ ಗೆಲ್ಲುತಾರಾ ಎಂಬುದು ಕುತೂಹಲದ ಸಂಗತಿ.
ಮತ್ತೂಂದು ಆಸಕ್ತಿಕರ ಕ್ಷೇತ್ರವೆಂದರೆ ತಾರಕೇಶ್ವರಿ. ರಾಜ್ಯಸಭೆ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಸ್ವಪನ್ ದಾಸ್ ಗುಪ್ತಾ ಇಲ್ಲಿನ ಬಿಜೆಪಿ ಆಭ್ಯರ್ಥಿ. ಈ ಕ್ಷೇತ್ರ ದಿಂದ 2 ಬಾರಿ ಗೆದ್ದ ತೃಣಮೂಲ ಕಾಂಗ್ರೆಸ್‌ನ ರಚಾ³ಲ್ ಸಿಂಗ್‌ಗೆ ಈ ಬಾರಿ ಅವಕಾಶ ಸಿಕ್ಕಿಲ್ಲ. ರಾಮೇಂಧು ಸಿಂಘ ಎನ್ನುವವರು ಟಿಎಂಸಿ ಅಭ್ಯರ್ಥಿ. ಇಲ್ಲಿಯೂ ಬಿಜೆಪಿ 3ನೇ ಸ್ಥಾನದಲ್ಲೇ ಇದೆ. ಆದರೆ 2011ರಿಂದ 2016ಕ್ಕೆ ಮತ ಪ್ರಮಾಣ ಹೆಚ್ಚಿಸಿಕೊಂಡಿದೆ ಎಂಬುದೊಂದೇ ಸಮಾಧಾನದ ಸಂಗತಿ.