Advertisement
ಹರಿಯಾಣದಲ್ಲಿ ಶನಿವಾರ ಚುನಾವಣ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಪಾಕಿಸ್ಥಾನಕ್ಕೆ ಈ ರೀತಿ ಕುಟುಕಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು 400 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ 4 ಹಂತದ ಲೋಕಸಭೆ ಚುನಾವಣೆಗಳು ಈಗಾಗಲೇ ಮುಗಿದಿದ್ದು, ಕಾಂಗ್ರೆಸ್ ಮತ್ತು ಐಎನ್‌ಡಿಐಎ ಒಕ್ಕೂಟ ಸಂಪೂರ್ಣವಾಗಿ ನೆಲಕಚ್ಚಿವೆ. ಜೂ. 4ಕ್ಕೆ ಇನ್ನು 17 ದಿನ ಬಾಕಿ ಇದ್ದು, ಆ ಬಳಿಕ ಕೇಂದ್ರದಲ್ಲಿ ಮತ್ತೆ ಪ್ರಬಲ ಎನ್‌ಡಿಎ ಸರಕಾರ ರಚನೆಯಾಗಲಿದೆ ಎಂದಿದ್ದಾರೆ. ಪಾಕಿಸ್ಥಾನದ ವಿಚಾರ ಪ್ರಸ್ತಾವಿಸಿ ದೇಶದಲ್ಲಿ ಪ್ರಬಲ ಸರಕಾರ ನಿರ್ಮಾಣದ ಅಗತ್ಯವನ್ನು ಮೋದಿ ಒತ್ತಿ ಹೇಳಿದ್ದಾರೆ. ದೇಶದಲ್ಲಿ ಐಎನ್‌ಡಿಐಎ ಒಕ್ಕೂಟ ಪ್ರಯೋಗಿಸುತ್ತಿರುವ ತಂತ್ರಗಳನ್ನು ಸಾರ್ವಜನಿಕರೇ ಸೋಲಿಸುತ್ತಿದ್ದಾರೆ. ವಿಶೇಷವಾಗಿ ಹರಿಯಾಣದ ಜನತೆಗೆ ದೇಶವಿರೋಧಿಗಳನ್ನು ಗುರುತಿಸುವ ಸಾಮರ್ಥ್ಯವಿದೆ. ಈ ರಾಜ್ಯದ ನರನಾಡಿಗಳಲ್ಲೂ ದೇಶಭಕ್ತಿ ತುಂಬಿದೆ ಎಂದಿದ್ದಾರೆ. ಇದೇ ವೇಳೆ ಇಲ್ಲಿನ ಪ್ರತೀ ಮನೆಯೂ “ಫಿರ್ ಏಕ್ ಬಾರ್’ ಎನ್ನುತ್ತಿವೆ ಎಂದು ಪ್ರಧಾನಿ ಹೇಳುತ್ತಿದ್ದಂತೆ ಜನಸಮೂಹ “ಮೋದಿ ಸರಕಾರ್’ ಎಂದು ಘೋಷಣೆ ಮೊಳಗಿಸುವ ಮೂಲಕ ಪ್ರಧಾನಿಗೆ ಬೆಂಬಲ ವ್ಯಕ್ತಪಡಿಸಿತು.
ಕಾಂಗ್ರೆಸ್ ಹಗರಣ
ದೇಶದಲ್ಲಿ ಕಾಂಗ್ರೆಸ್ ನಡೆಸಿದ ಮೊದಲ ಹಗರಣವೇ ಭದ್ರತ ಪಡೆಗಳಿಗೆ ಸಂಬಂಧಿಸಿದ್ದಾಗಿದೆ. ಅಧಿಕಾರದಲ್ಲಿ ಇರುವವರೆಗೂ ಇದೇ ಪ್ರವೃತ್ತಿಯನ್ನು ಕಾಂಗ್ರೆಸ್ ಮುಂದುವರಿಸಿತು. ಬೋಫೋರ್ಸ್, ಸಬ್‌ಮರೀನ್, ಹೆಲಿಕಾಪ್ಟರ್ ಹೀಗೆ ಸಾಲು ಸಾಲು ಹಗರಣ ನಡೆಸಿ ಭದ್ರತ ಪಡೆಗಳನ್ನು ಕಾಂಗ್ರೆಸ್ ದುರ್ಬಲಗೊಳಿಸಿತ್ತು ಎಂದು ಪ್ರಧಾನಿ ಆರೋಪಿಸಿದ್ದಾರೆ. ವಿದೇಶಗಳಿಂದ ಶಸ್ತ್ರಾಸ್ತ್ರ ಆಮದು ಹೆಸರಿನಲ್ಲಿ ಹಣ ದೋಚುವುದಕ್ಕಾಗಿ ಕಾಂಗ್ರೆಸ್ ಇಂಥ ಕೃತ್ಯಗಳನ್ನು ಎಸಗಿದೆ. ಆದರೆ ನಾವು ಭಾರತದ ಸಶಸ್ತ್ರ ಪಡೆಗಳನ್ನು ಆತ್ಮನಿರ್ಭರಗೊಳಿಸಲು ಯೋಜನೆ ರೂಪಿಸಿದೆವು ಎಂದಿದ್ದಾರೆ.