Advertisement

ಅಭಿವೃದ್ಧಿ ಮಾಡಿ ತೋರಿಸುವ ಪಕ್ಷ ಬಿಜೆಪಿ

02:45 PM Oct 22, 2020 | Suhan S |

ಚಿಂತಾಮಣಿ: ಈ ಹಿಂದೆ ಎಂಎಲ್‌ಸಿ ಆಗಿದ್ದ ಅಭ್ಯರ್ಥಿ ಸಾಧನೆ ಕೊಡುಗೆ ಏನೆಂದು ಪ್ರಶ್ನಿಸಿ. ಕೆಲವು ರಾಜಕಾರಣಿಗಳು ಚುನಾವಣೆ ಸಮಯದಲ್ಲಿ ವಿವಿಧ ಆಶ್ವಾಸನೆ ನೀಡುತ್ತಾರೆ.ಆದರೆ, ಅದನ್ನು ಅವರು ಬಗೆಹರಿಸಲ್ಲ. ನಮ್ಮ ಪಕ್ಷದಲ್ಲಿ ಆಶ್ವಾಸನೆ ನೀಡುವುದಕ್ಕಿಂತ ಅಭಿವೃದ್ಧಿ ಮಾಡಿ ತೋರಿಸುವ ಶಕ್ತಿಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ನಗರದ ಕೆಎಂಡಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಆಗ್ನೇಯ ಪದವೀಧರಕ್ಷೇತ್ರದ ಅಭ್ಯರ್ಥಿ ಚಿದಾನಂದ ಎಂ.ಗೌಡ ಪರವಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. 5 ಜಿಲ್ಲೆಗಳಲ್ಲಿ 35 ಎಂಎಲ್‌ಎ ಕ್ಷೇತ್ರ ವ್ಯಾಪ್ತಿಯಿದ್ದು ಈ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪದವೀಧರರು ಉತ್ತಮ ಅಭ್ಯರ್ಥಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು. ಜಿಲ್ಲೆಯಲ್ಲಿ ನಿರುದ್ಯೋಗ ವಿದ್ಯಾವಂತರಿಗಾಗಿ ಆಯಾ ತಾಲೂಕುಗಳಲ್ಲಿ ಸರ್ಕಾರಿ ಜಮೀನು ಗುರ್ತಿಸಿ ಕೈಗಾರಿಕೆ ಸ್ಥಾಪನೆಗೆ ಮುಂದಾಗಿದ್ದೇವೆಂದರು.

ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ತೆನೆಬಿದ್ದುಹೋಗಿದೆ(ಜೆಡಿಎಸ್‌), ಕೈ ಮುರಿದು ಹೋಗಿದೆ (ಕಾಂಗ್ರೆಸ್‌). ಮುಂ ದಿನದಿನಗಳಲ್ಲಿ ಸ್ಥಳೀಯ ಶಾಸಕರಆಯ್ಕೆಯೂ ಬಿಜೆಪಿಯತ್ತ ಇರುತ್ತದೆ. ಕೋವಿಡ್‌19 ನಿಂದ ಪ್ರಪಂಚವೇ ತತ್ತರಿಸುತ್ತಿರುವ ಸಂದರ್ಭದಲ್ಲಿ ಶಿಕ್ಷಕರು ಸೇರಿದಂತೆ ಎಲ್ಲಾ ಇಲಾಖೆ ಸರ್ಕಾರಿ ಅಧಿಕಾರಿಗಳಿಗೆ ಸಂಬಳ ನೀಡುವ ಮೂಲಕ ಪಕ್ಷ ಮೆಚ್ಚುಗೆ ಪಡೆದಿದೆ ಎಂದರು.  ಸತ್ಯ ನಾರಾಯಣ ಮಹೇಶ್‌ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರು ಆಯಾ ಹೋಬಳಿ ಪದವೀಧರರ ಮತದಾರರನ್ನು ಗುರ್ತಿಸಿ ಮತಚಲಾಯಿಸುವಂತೆ ತಿಳಿಸಿ ಎಂದರು.

ಬಿಜೆಪಿ ಉಪಾಧ್ಯಕ್ಷಅರುಣ್‌ಬಾಬು, ರಾಜ್ಯ ಕಾರ್ಯದರ್ಶಿ ಕೇಶವಮೂರ್ತಿ, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿದರು. ಕಾಂತ ರಾಜ್‌, ಕೃಷ್ಣಮೂರ್ತಿ, ಶಂಕರ್‌, ಬಟ್ಲಹಳ್ಳಿ ಶಿವಾರೆಡ್ಡಿ, ಮಹೇಶ್‌ಬೈ, ಸಿ.ಆರ್‌.ವೆಂಕಟೇಶ್‌, ರಾಜಣ್ಣ, ಗಾಜಲಶಿವ, ಪ್ರಕಾಶ್‌, ಪ್ರತಾಪ್‌, ಮೋಹನ್‌ ಉಪಸ್ಥಿತರಿದ್ದರು.

ಶಾಂತಿ ಸುವ್ಯವಸ್ಥೆಗೆ ನಾಗರಿಕರೂ ಸಹಕರಿಸಲಿ :

Advertisement

ಚಿಕ್ಕಬಳ್ಳಾಪುರ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸುತ್ತಿದ್ದು ನಾಗರಿಕರೂ ಪೊಲೀಸರಿಗೆ ಸಹಕಾರ ನೀಡಬೇಕೆಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಬೈರಪ್ಪ ಶಿವಲಿಂಗ್‌ ನಾಯಿಕ್‌ ಹೇಳಿದರು.

ನಗರ ಹೊರವಲಯದ ಜಿಲ್ಲಾ ಪೊಲೀಸ್‌ ಕಚೇರಿ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್‌ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮರಾದ ಪೊಲೀಸರಿಗೆ ಪುಷ್ಟ ನಮನ ಸಲ್ಲಿಸಿಮಾತನಾಡಿದರು. ಪೊಲೀಸರು ತಮ್ಮ ಜವಾ ಬ್ದಾರಿ ಅರಿತು ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿರುವುದರಿಂದ ಜನಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದರು.

ರಕ್ಷಿಸುವ ಕೆಲಸ: ಕಾನೂನು ಮತ್ತು ಸುವ್ಯವಸ್ಥೆ ಮೊದಲಾದ ಗಂಭೀರ ಸಮಸ್ಯೆಗಳ ವೇಳೆ ಜೀವ ಪಣಕ್ಕಿಟ್ಟು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿ ನಾಗರಿಕರಿಗೆ ಕಾನೂನಿನ ಅರಿವು ಮೂಡಿಸುತ್ತಿದ್ದಾರೆಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸಲು ಆರೋಗ್ಯ ಇಲಾಖೆಯೊಂದಿಗೆ ಪೊಲೀಸ್‌ ಇಲಾಖೆ ಸಿಬ್ಬಂದಿ ವಾರಿಯರ್ಗಳಂತೆ ಕಾರ್ಯನಿರ್ವಹಿಸಿದ್ದು ಸಾರ್ವಜನಿಕರ ಆಸ್ತಿಪಾಸ್ತಿಗಳ ಜತೆಗೆ ಆರೋಗ್ಯ ರಕ್ಷಣೆ ಮಾಡಲು ಇಲಾಖೆಯಿಂದಲೂ ಅರಿವು ಮತ್ತು ಜಾಗೃತಿ ಮೂಡಿಸಲಾಗಿದೆ ಎಂದರು.

ಅಲ್ಲದೇ, ಹುತಾತ್ಮರಾದ ಪೊಲೀಸರನ್ನು ಸ್ಮರಿಸಿದರು. ಜಿಲ್ಲಾಧಿಕಾರಿ ಆರ್‌.ಲತಾ, ಜಿಪಂ ಸಿಇಒ ಪಿ.ಶಿವಶಂಕರ್‌, ಉಪ ವಿಭಾಗಾಧಿಕಾರಿ ರಘು ನಂದನ್‌, ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿಶಂಕರ್‌, ಚಿಂತಾಮಣಿ ಡಿವೈಎಸ್ಪಿ ಲಕ್ಷ ¾ಯ್ಯ, ಪೊಲೀಸ್‌ಅಧಿಕಾರಿಗಳು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next