Advertisement

ಗಿರಿಯಾಪುರ ಗ್ರಾಮಸ್ಥರಿಂದ ಲೋಕಸಭಾ ಚುನಾವಣೆ ಬಹಿಷ್ಕಾರ

05:24 PM Apr 08, 2019 | Team Udayavani |

ಕಡೂರು: ಅಜ್ಜಂಪುರ ತಾಲೂಕು ಕೇಂದ್ರಕ್ಕೆ ತಮ್ಮ ಗ್ರಾಮವನ್ನು ಸೇರ್ಪಡೆ ಮಾಡಿರುವುದನ್ನು ವಿರೋಧಿ ಸಿ ಗಿರಿಯಾಪುರ ಗ್ರಾಮಸ್ಥರು ಲೋಕಸಭೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಭಾನುವಾರ ಶ್ರೀ
ವೃಷಭೇಂದ್ರಸ್ವಾಮಿ ಗ್ರಾಮ ಸಮಿತಿ ಅಧ್ಯಕ್ಷ ಜಿ.ಸಿ. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಗ್ರಾಮಸ್ಥರು, ಸಮಸ್ಯೆ ಇತ್ಯರ್ಥವಾಗುವವರೆಗೆ ಹೋರಾಟ ಮುಂದುವರೆಸಲಾಗುವುದು.

Advertisement

ಚುನಾವಣಾ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ನಿರ್ಣಯ ಕೈಗೊಂಡರು. ಸಮಿತಿ ಅಧ್ಯಕ್ಷ ಜಿ.ಸಿ. ಬಸವರಾಜು ಮಾತನಾಡಿ, ಅಜ್ಜಂಪುರ ತಾಲೂಕು ಕೇಂದ್ರ ರಚನೆಯಾದಾಗ ಹಿರೇನಲ್ಲೂರು ನಾಡಕಚೇರಿ ವ್ಯಾಪ್ತಿಗೆ ಸೇರಿದ್ದ
ಗಿರಿಯಾಪುರ ಗ್ರಾಮವನ್ನು ಅಜ್ಜಂಪುರ ತಾಲೂಕಿಗೆ ಸೇರ್ಪಡೆ ಮಾಡಿದ್ದರಿಂದ ಕೇವಲ 1 ಕಿ.ಮೀ ದೂರ ಕ್ರಮಿಸಿ ಕಚೇರಿ ಕೆಲಸ ಮಾಡಿಕೊಳ್ಳುತ್ತಿದ್ದ ಜನರು 10 ಕಿ.ಮೀ ದೂರ ಹೋಗಬೇಕಾಗಿದೆ ಎಂದರು.

ಗಿರಿಯಾಪುರ ಗ್ರಾಮದ ಜನರ ಶೇ.70 ಭಾಗ ಕೃಷಿ ಭೂಮಿ ಹಿರೇನಲ್ಲೂರು, ಕೇದಿಗೆರೆ, ಎಂ. ಚೋಮನಹಳ್ಳಿ, ಮೇಲನಹಲ್ಳಿ,
ಆಡಿಗೆರೆ ಬಾಸೂರು, ಅರೇಹಳ್ಳಿ ಗ್ರಾಮಗಳಲ್ಲಿ ಹರಡಿಕೊಂಡಿದೆ. ಜಮೀನು ಪ್ರದೇಶವೆಲ್ಲಾ ಕಡೂರು ತಾಲೂಕಿಗೆ ಸೇರಿದ್ದರೆ, ಕಚೇರಿ ಕೆಲಸಕ್ಕಷ್ಟೇ ಅಜ್ಜಂಪುರಕ್ಕೆ ತೆರಳಬೇಕಾಗಿದೆ ಎಂದರು.

ಈ ಬದಲಾವಣೆಯಿಂದಾಗಿ ಗ್ರಾಮದ 876 ಮತದಾರರು ಹಾಗೂ ಒಟ್ಟಾರೆ 1200 ಜನರ ಆಧಾರ್‌ ಕಾರ್ಡ್‌, ಪಾನ್‌ಕಾರ್ಡ್‌, ಮತದಾರರ ಗುರುತಿನ ಚೀಟಿ, ಪಡಿತರಚೀಟಿ ಮತ್ತಿತರ ಸರಕಾರಿ ದಾಖಲೆಗಳನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಕೃಷಿ ಇಲಾಖೆ, ವಿದ್ಯುತ್‌, ಬ್ಯಾಂಕುಗಳು ಮುಂತಾದ ಪ್ರತಿಯೊಂದು ಸೌಲಭ್ಯಕ್ಕೂ ಅಜ್ಜಂಪುರ
ತಾಲೂಕು ಕೇಂದ್ರವನ್ನು ನೋಡಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಬಹಳಷ್ಟು ಕಂದಾಯ ಇಲಾಖೆಗೆ ಸೇರಿದ ವ್ಯಾಜ್ಯಗಳು ಈಗಲೂ ಕಡೂರು ನ್ಯಾಯಾಲಯದಲ್ಲಿ ಇವೆ ಎಂದು ಹೇಳಿದರು.

Advertisement

ಗಿರಿಯಾಪುರ ಮತ್ತು ಹಿರೇನಲ್ಲೂರು ಅವಳಿ ಗ್ರಾಮಗಳಾಗಿದ್ದು, ಕೇವಲ 1 ಕಿ.ಮೀ ದೂರದಲ್ಲಿದ್ದು, ಪ್ರತಿಯೊಂದಕ್ಕೂ ಹಿರೇನಲ್ಲೂರು ಗ್ರಾಮದ ಜತೆ ತಮ್ಮ ಸಂಪರ್ಕ ಹೊಂದಿದ್ದ
ಗಿರಿಯಾಪುರದ ಜನರನ್ನು ಏಕಾಏಕಿ ತಾಲೂಕು ಕೇಂದ್ರ ರಚನೆ ನೆಪದಲ್ಲಿ ಒಕ್ಕಲೆಬ್ಬಿಸಿ ಅವರ ಹಕ್ಕನ್ನು ಮೊಟಕು ಮಾಡಲಾಗಿದೆ ಎಂದರು.

ಈ ಬಗ್ಗೆ ಈ ಹಿಂದಿನ ಶಾಸಕರು, ಮುಖ್ಯಮಂತ್ರಿಗಳು, ಸರಕಾರದ ಸಂಬಂಧಪಟ್ಟ ಸಚಿವರು ಹಾಗೂ ಅಧಿ ಕಾರಿಗಳು ಸೇರಿದಂತೆ
ಎಲ್ಲರಿಗೂ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಹಿಂದಿನ ಜಿಲ್ಲಾ ಧಿಕಾರಿಗಳೂ ಕೂಡ ಈ ಬಗ್ಗೆ ಯಾವ ಸ್ಪಂದನೆಯನ್ನೂ ಮಾಡಿಲ್ಲ ಎಂದು ದೂರಿದರು.

ಯುವಜನಕೂಟದ ಅಧ್ಯಕ್ಷ ಶಿವಲಿಂಗಸ್ವಾಮಿ, ಅರುಣಕುಮಾರ್‌, ಗುರುಕೃಪಾ ಪ್ರೌಢಶಾಲೆಯ ಕಾರ್ಯದರ್ಶಿ ಮಹೇಶ್‌, ಗ್ರಾಮದ ಹಿರಿಯ ಮುಖಂಡ ಜಿ.ಪಿ.ಪ್ರಭುಕುಮಾರ್‌ ಗ್ರಾಪಂ ಮಾಜಿ ಸದಸ್ಯ ಉಮಾಮಹೇಶ್‌ ಸೇರಿದಂತೆ ಹಲವಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next