Advertisement

2ನೇ ಬಾರಿಯೂ ಗ್ರಾಪಂ ಚುನಾವಣೆ ಬಹಿಷ್ಕಾರ

05:51 PM Mar 20, 2021 | Team Udayavani |

ತಿಪಟೂರು: ತಾಲೂಕಿನ ಹೊನ್ನವಳ್ಳಿ ಗ್ರಾಪಂ ಚುನಾವಣೆಯನ್ನು ಈಗ 2ನೇ ಬಾರಿಗೂ ಬಹಿಷ್ಕರಿಸುವ ಮೂಲಕ ಗ್ರಾಮಸ್ಥರು ಪಕ್ಷಭೇದ ಮರೆತು ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.

Advertisement

ಕಳೆದ ನಾಲ್ಕೈದು ತಿಂಗಳ ಹಿಂದೆ ಸಾರ್ವ ತ್ರಿಕವಾಗಿ ನಡೆದ ಗ್ರಾಪಂಗಳ ಚುನಾವಣಾ ಸಂದರ್ಭದಲ್ಲೂ ಸಹ ತಾಲೂಕಿನ ಹೋಬಳಿ ಕೇಂದ್ರವಾಗಿರುವ ಹೊನ್ನವಳ್ಳಿ ಗ್ರಾಪಂ ಚುನಾವಣೆಯನ್ನು ಗ್ರಾಮಸ್ಥರು ಪಕ್ಷ ಭೇದವಿಲ್ಲದೆ ಒಗ್ಗಟ್ಟಿನಿಂದ ನೀರಿಗಾಗಿ ಬೇಡಿಕೆ ಇಟ್ಟು ಬಹಿಷ್ಕರಿಸಿದ್ದರಿಂದ ಚುನಾ ವಣೆ ನಡೆದಿರಲಿಲ್ಲ. ಆದರೆ ಈಗ ಉಪ ಚುನಾವಣೆ ಗಳು ಘೋಷಣೆಯಾಗಿರುವ ಈ ಸಂದರ್ಭದಲ್ಲಿ ಹೊನ್ನವಳ್ಳಿ ಗ್ರಾಪಂ ಚುನಾವಣೆಯೂ ಘೋಷಣೆಯಾಗಿ ಮಾ.29ಕ್ಕೆ ಮತದಾನ ನಡೆಬೇಕಾ ಗಿತ್ತು. ಆದರೆ ಈ ಬಾರಿಯೂ ಗ್ರಾಮಸ್ಥರು ಸಭೆ ಸೇರಿ ನಮ್ಮ ಹೊನ್ನವಳ್ಳಿಯ ಎರಡೂ ಕಡೆರೆಗಳಿಗೆ ತಾಲೂಕು ಹಾಗೂ ಜಿಲ್ಲಾಡಳಿತ ನೀರು ತುಂಬಿಸುವವರೆಗೂ ನಮ್ಮ ಗ್ರಾಪಂ ಸೇರಿದಂತೆ ಮುಂಬರಲಿರುವ ತಾಪಂ ಹಾಗೂ ಜಿಪಂ ಮತ್ತು ಮುಂದಿನ ವಿಧಾ ಸಭಾ ಚುನಾವಣೆಯನ್ನು ಒಗ್ಗಟ್ಟಿನಿಂದಲೇ ಬಹಿಷ್ಕರಿಸುತ್ತೇವೆ ಎಂದು ತೀರ್ಮಾನಿಸಿದ್ದಾರೆ.

ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಅರ್ಜಿ ಸಲ್ಲಿಸಲು ಮಾ.19ರಂದು ಮಧ್ಯಾಹ್ನ 3 ಗಂಟೆಗೆ ಕೊನೆಯ ಸಮಯವಾಗಿದ್ದರೂ ಯಾವೊಬ್ಬ ಆಕಾಂಕ್ಷಿಯೂ ಚುನಾವಣಾ ಕಚೇರಿಗೆ ಆಗಮಿಸಿ ಅರ್ಜಿಯನ್ನೂ ಪಡೆ ದಿಲ್ಲ. ಹಾಗಾಗಿ ಈ ಬಾರಿಯೂ ಗ್ರಾಪಂಗೆ ಚುನಾವಣೆ ನಡೆಯುವುದಿಲ್ಲ ಎಂಬುದು ಖಚಿತವಾಗಿದೆ.

ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ತಾಲೂಕಿಗೆ ಆಗಮಿಸು ತ್ತಿದ್ದು ಅವರಿಗೂ ನೀರು ಹರಿಸುವ ಬಗ್ಗೆ ಮನವಿ ಪತ್ರ ಸಲ್ಲಿಸಲು ಹೊನ್ನವಳ್ಳಿ ನೀರಾವರಿ ಹೊರಾಟ ಸಮಿತಿಯವರು ಉಪವಿಭಾಗಾಧಿಕಾರಿಗಳಿಂದ ಅನುಮತಿ ಪಡೆದಿದ್ದಾರೆ. ಒಟ್ಟಾರೆ ಈ ಪಂಚಾಯಿತಿಗೆ ಸೇರುವ 5 ಗ್ರಾಮಗಳಿಂದ ಒಟ್ಟು 14 ಸದಸ್ಯ ಬಲದ ಹೊನ್ನವಳ್ಳಿ ಗ್ರಾಪಂಗೆ 2ನೇ ಬಾರಿಯೂ ಚುನಾವಣೆ ಬಹಿಷ್ಕಾರಗೊಂಡಿದ್ದು ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆ ಯುತ್ತದೆಯೋ ಕಾಯ್ದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next