Advertisement

Election: ಚುನಾವಣೆಗಾಗಿ ಮದುವೆಯಾದ ಭೂಪ!

07:46 PM Apr 14, 2023 | Team Udayavani |

ಲಕ್ನೋ: ಜೀವನದಲ್ಲಿ ಬ್ರಹ್ಮಚಾರಿಯಾಗಿಯೇ ಇರಬೇಕೆಂದುಕೊಂಡಿದ್ದ 45 ವರ್ಷದ ಉತ್ತರಪ್ರದೇಶದ ರಾಜಕಾರಣಿಯೊಬ್ಬರು ರಾಮ್‌ಪುರ ಪುರಸಭೆಯ ಅಧ್ಯಕ್ಷೀಯ ಚುನಾವಣೆಗಾಗಿ ಕೇವಲ 45 ಗಂಟೆಗಳ ಅವಧಿಯಲ್ಲೇ ಮದುವೆ ನಿಗದಿಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.

Advertisement

ಪುರಸಭೆಯ ಪ್ರಸಕ್ತ ಅಧ್ಯಕ್ಷ ಮಮುನ್‌ ಖಾನ್‌ ರಾಜಕೀಯ ಜೀವನದಲ್ಲೇ ಮಂದುವರಿಯಲು ಬಯಸಿದ್ದು, ಈ ಬಾರಿಯೂ ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ಜನ ಒತ್ತಾಯಿಸಿದ್ದರು. ಆದರೆ, ಮಮುನ್‌ ಸ್ಪರ್ಧಿಸಬೇಕಾಗಿದ್ದ ಸ್ಥಾನ “ಮಹಿಳೆಯರಿಗೆ ಮೀಸಲು” ಎಂಬುದು ತಿಳಿಯುತ್ತಿದ್ದಂತೆ ಅವರಿಗೆ ಶಾಕ್‌ ಆಗಿದೆ. 45 ವರ್ಷಗಳಿಂದ ಒಂಟಿಯಾಗಿದ್ದ ಮಮುನ್‌ ಈ ವಿಚಾರ ತಿಳಿದ 45 ಗಂಟೆಗಳ ಒಳಗೆಯೇ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ. ಎ.17ರಂದು ನಾಮಪತ್ರ ಸಲ್ಲಿಸಬೇಕಿದ್ದು, ಏ.15ರಂದೇ ವಿವಾಹ ನಿಗದಿಯಾಗಿದೆ. ಆ ನಂತರ ಅವರ ಪತ್ನಿಯೇ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next