ಚುನಾವಣೆ ಹಿನ್ನೆಲೆಯಲ್ಲಿ ರೌಡಿ ಲಿಸ್ಟ್ ನಲ್ಲಿರುವ ಆರೋಪಿಗಳನ್ನು ಬೇರೆಡೆಗೆ ಗಡಿಪಾರು ಮಾಡಲಾಗುತ್ತಿದ್ದು, ಮಡಿಕೇರಿ ನಿವಾಸಿಗಳಾದ ಲೋಕೇಶ್ ಹಾಗೂ ಸುಜಿತ್ ಎಂಬಿಬ್ಬರನ್ನು ಗಡಿಪಾರು ಮಾಡಲಾಗಿದೆ.
Advertisement
ಈ ಹಿಂದೆ ಗುಂಡು ಹಾರಿಸಿ ವ್ಯಕ್ತಿಗಳನ್ನು ಹತ್ಯೆ ಮಾಡಲು ಯತ್ನಿಸಿದ್ದ ಪ್ರಕರಣ ಸೇರಿದಂತೆ ಲೋಕೇಶ್ ಮೇಲೆ ಆರು ಪ್ರಕರಣ ಹಾಗೂ ಸುಜಿತ್ ಮೇಲೆ ಐದು ಪ್ರಕರಣಗಳಿದ್ದು, ಈ ಹಿನ್ನೆಲೆಯಲ್ಲಿ ಲೋಕೇಶ್‌ನನ್ನು ಉಡುಪಿ ಜಿಲ್ಲೆಗೆ ಹಾಗೂ ಸುಜಿತ್‌ನನ್ನು ಚಾಮರಾಜನಗರಕ್ಕೆ ಮೂರು ತಿಂಗಳವರೆಗೆ ಗಡಿಪಾರು ಮಾಡಲಾಗಿದೆ ಎಂದು ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.