ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳು ಮತದಾರರಿಗೆ ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಮಾಡಲು ಚುನಾವಣಾ ಆಯೋಗ “ಚುನಾವಣಾ ಆ್ಯಪ್’ ಅಭಿವೃದ್ಧಿ ಪಡಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. ಈಗ ಅದರ ಸುಧಾರಿತ ಆವೃತ್ತಿ ಹೊರತರಲಾಗಿದ್ದು, ಕರ್ನಾಟಕದಲ್ಲೇ ಈ ಆ್ಯಪ್ ಅಭಿವೃದಿಟಛಿಪಡಿಸಲಾಗಿದೆ. ಜಿಐಎಸ್ ಆಧಾರಿತ ದೇಶದ ಮೊದಲ ಮೊಬೈಲ್ ಆ್ಯಪ್ ಇದಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಮಂಗಳವಾರ ಈ ಆ್ಯಪ್ ಬಿಡುಗಡೆಗೊಳಿಸಿದರು. ಈ “ಚುನಾವಣಾ ಆ್ಯಪ್’ ಬಳಸಿ ಮತದಾರರು ತಮ್ಮ ಎಪಿಕ್ ಸಂಖ್ಯೆ ಮತ್ತು ಹೆಸರು ಹಾಕಿ ಮತಗಟ್ಟೆ, ಕ್ಷೇತ್ರದ ವಿವರಗಳನ್ನು ಪಡೆದುಕೊಳ್ಳಬಹುದು. ಹಿರಿಯ ನಾಗರಿಕರು, ಅಂಗವಿಕಲರು ಮತಗಟ್ಟೆಗೆ ಹೋಗಲು ಸಾರಿಗೆ ಸೌಲಭ್ಯ ಹಾಗೂ ಗಾಲಿ ಕುರ್ಚಿಯನ್ನು ಮುಂಗಡವಾಗಿ ಕಾಯ್ದಿರಿಸಬಹುದು.
ನಗರ ಪ್ರದೇಶದ ಮತಗಟ್ಟೆಗಳಲ್ಲಿ ಇರುವ ಕ್ಯೂ (ಸರತಿ ಸಾಲು) ಬಗ್ಗೆಯೂ ಮಾಹಿತಿ ಪಡೆದುಕೊಳ್ಳಬಹುದು. ಕ್ಷೇತ್ರವಾರು ಮತದಾನದ ವಿವರಗಳನ್ನು ಪ್ರತಿ 2 ಗಂಟೆಗೆ ಆ್ಯಪ್‌ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ. ಜೊತೆಗೆ ಪ್ರತಿ ಸುತ್ತಿನ ಮತ ಎಣಿಕೆ ವಿವರ ಪ್ರಕಟಿಸಲಾಗುತ್ತದೆ. ಚುನಾವಣೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿ ಫೋಟೋ ಸಹಿತಿ ಸಂಪೂರ್ಣ ವಿವರಗಳು ಇದರಲ್ಲಿ ಸಿಗಲಿವೆ.
ಹತ್ತಿರದ ಪೊಲೀಸ್ ಠಾಣೆ, ಆಸ್ಪತ್ರೆ ಮತ್ತಿತರರ ಸಾರ್ವಜನಿಕರಿಗೆ ಬೇಕಾಗುವ ತುರ್ತು ನಾಗರಿಕ ಸೇವೆ ಮತ್ತು ಸೌಲಭ್ಯಗಳ ಮಾಹಿತಿ ಲಭ್ಯವಿರುತ್ತದೆ. ಈ ಆಪ್ ಬಳಸಿ ಮತದಾರರು ಮಾಹಿತಿ ಹಾಗೂ ಸೇವೆಗಳನ್ನು ಪಡೆದುಕೊಳ್ಳಬಹುದು. ಈವರೆಗೆ 2 ಲಕ್ಷ ಮಂದಿ”ಚುನಾವಣಾ ಆ್ಯಪ್’ ಬಳಸಿದ್ದಾರೆ. ಇದನ್ನು ಕನ್ನಡ ಮತ್ತು ಇಂಗ್ಲಿಷ್
ಭಾಷೆಯಲ್ಲಿ ಅಭಿವೃದಿಟಛಿಪಡಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.