Advertisement
ಆಕ್ಷೇಪಣೆ ಸಲ್ಲಿಸಲು ದುಂಬಾಲು: ಈ ಹಿಂದೆ 40ಕ್ಷೇತ್ರಗಳಿದ್ದ ಹಾಸನ ಜಿಲ್ಲಾ ಪಂಚಾಯತಿಯಲ್ಲಿ ಈಗ4 ಕ್ಷೇತ್ರಗಳು ಹೆಚ್ಚುವರಿಯಾಗಿ ಸೃಷ್ಟಿಯಾಗಿ ಕ್ಷೇತ್ರಗಳಸಂಖ್ಯೆ 44 ಕ್ಕೇರಿದೆ. ಆದರೆ ತಾಪಂ ಕ್ಷೇತ್ರಗಳ ಸಂಖ್ಯೆಮಾತ್ರ 153 ರಿಂದ 120 ಕ್ಕೆ ಇಳಿದಿವೆ. ಮಹಿಳೆಯರಿಗೆಶೇ.50 ಕ್ಷೇತ್ರಗಳು ಮೀಸಲಾಗಿವೆ.
Related Articles
Advertisement
ಮೀಸಲು ನಿಗದಿಯಲ್ಲಿ ಶಾಸಕರ ಪ್ರಭಾವ:ಅರಸೀಕೆರೆ ಮತ್ತು ಅರಕಲಗೂಡು ವಿಧಾನಸಭಾಕ್ಷೇತ್ರ ಹೊರತುಪಡಿಸಿ ಇನ್ನುಳಿದ ವಿಧಾನಸಭಾಕ್ಷೇತ್ರಗಳಲ್ಲಿ ಆಯಾಯ ಕ್ಷೇತ್ರಗಳ ಶಾಸಕರು ಪ್ರಭಾವಬೀರಿ ಕೆಲ ಜಿಪಂ ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆಮೀಸಲಿಡುವಂತೆ ನೋಡಿಕೊಂಡು ತಮ್ಮ ಆಪ್ತಬೆಂಬಲಿಗರ ಸ್ಪರ್ಧೆಗೆ ಅನುವು ಮಾಡಿಕೊಟ್ಟಿದ್ದಾರೆ ಎಂಬ ದೂರುಗಳೂ ಆಯಾಯ ಪಕ್ಷಗಳ ಕೆಲಮುಖಂಡರಿಂದ ಕೇಳಿ ಬರುತ್ತಿವೆ.
ಭವಾನಿ ಸ್ಪರ್ಧೆ ಹಾದಿ ಸುಗಮ: ಹೊಳೆನರಸೀಪುರಕ್ಷೇತ್ರದ ಹಳೆಕೋಟೆ ಜಿಪಂ ಕ್ಷೇತ್ರ ಸಾಮಾನ್ಯ ಮಹಿಳೆಗೆಮೀಸಲಾಗಿದೆ. ಕಳೆದ ಬಾರಿ ಈ ಕ್ಷೇತ್ರದಿಂದ ಮಾಜಿಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣಅವರು ಆಯ್ಕೆಯಾಗಿದ್ದರು.ಈಬಾರಿಯೂ ಭವಾನಿಅವರ ಸ್ಪರ್ಧೆಗೆ ಹಳೆಕೋಟೆ ಕ್ಷೇತ್ರದ ಮೀಸಲಾತಿನಿಗದಿ ಸುಗಮ ಹಾದಿ ಮಾಡಿಕೊಟ್ಟಿದೆ.
ಅತ್ಯಾಪ್ತರ ಸ್ಪರ್ಧೆಗೆ ಅವಕಾಶ: ದುದ್ದ ಕ್ಷೇತ್ರಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಹಾಸನ ಕ್ಷೇತ್ರದಸಾಲಗಾಮೆ ಕ್ಷೇತ್ರದ ಮೀಸಲಾತಿ ಸಾಮಾನ್ಯ ವರ್ಗಕ್ಕೆಮೀಸಲಾಗಲು ಶಾಸಕ ಪ್ರೀತಂ ಜೆ.ಗೌಡ ಅವರುಪ್ರಭಾವ ಬೀರಿದ್ದಾರೆ ಎನ್ನಲಾಗಿದೆ.ಹಾಗೆಯೇ ಆಯಾಯ ವಿಧಾನಸಭಾ ಕ್ಷೇತ್ರಗಳಲ್ಲಿಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕàತ ೆÒ Åಗಳಲ್ಲಿಶಾಸಕರು ಪ್ರಭಾವ ಬೀರಿ ತಮ್ಮ ಅತ್ಯಾ±ರ ¤ ಸ್ಪರ್ಧೆಗೆಅವಕಾಶ ಕಲ್ಪಿಸಿದ್ದಾರೆ ಎನ್ನಲಾಗಿದೆ.
ವಿಧಾನಸಭಾ ಚುನಾವಣೆಗೆ ದಿಕ್ಸೂಚಿ: ಜಿಪಂ ಮತ್ತುತಾಪಂ ಚುನಾವಣಾ ಫಲಿತಾಂಶವು ಮುಂಬರುವವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ದಿಕ್ಸೂಚಿಎಂದೇ ಭಾವಿಸುವ ಶಾಸಕರು ಹಾಗೂ ವಿಧಾನಸಭೆಚುನಾವಣೆಯ ಸ್ಪರ್ಧಾಕಾಂಕ್ಷಿಗಳಿಗೆ ತಮ್ಮ ಪಕ್ಷದಅಭ್ಯರ್ಥಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳುವಅನಿವಾರ್ಯತೆ ಎದುರಾಗಿದೆ. ಹಾಗಾಗಿಯೇಕ್ಷೇತ್ರಗಳ ಮೀಸಲಾತಿ ನಿಗದಿ ಹಾಗೂ ಮೀಸಲಾತಿಬದಲಾವಣೆಗೆ ಪ್ರಯತ್ನ ನಡೆಸುತ್ತಿದ್ದಾರೆ.
ಹಿಂದಿನಬಾರಿ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯುತ್ತಿತ್ತು. ಈಬಾರಿ ರಾಜ್ಯದಲ್ಲಿ ಬಿಜೆಪಿಸರ್ಕಾರಅಧಿಕಾರದಲ್ಲಿರುವುದರಿಂದ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೂನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ.ಶ್ರವಣಬೆಳಗೊಳ ಕ್ಷೇತ್ರದ ಶಾಸಕಸಿ.ಎನ್.ಬಾಲಕೃಷ್ಣಅವರಕುಟುಂಬದವರ ಸ್ಪರ್ಧೆಗೆಈ ಬಾರಿಮೀಸಲಾತಿ ತೊಡಕಾಗಿದೆ. ಗೌಡಗೆರೆ ಹಾಗೂ ಡಿಂಡಗೂರುಕ್ಷೇತ್ರಗಳು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದಮಹಿಳೆಗೆ ಮೀಸಲಾಗಿವೆ. ಹಾಗಾಗಿ ಅವರ ಕುಟುಂಬದವರು ಈ ಬಾರಿ ಚುನಾವಣೆಯಿಂದ ಹಿಂದೆ ಸರಿಯಬಹುದೆಂದು ಹೇಳಲಾಗುತ್ತಿದೆ.
ಎನ್. ನಂಜುಂಡೇಗೌಡ