Advertisement

ಸ್ಥಳೀಯ ಸಂಸ್ಥೆ ಚುನಾವಣೆ ನಿಗದಿಯಂತೆ ನಡೆಯಲಿದೆ: ಆಯೋಗ

10:47 PM Apr 26, 2021 | Team Udayavani |

ಬೆಂಗಳೂರು : ಮಂಗಳವಾರ ನಡೆಯುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಯು ನಿಗದಿಯಂತೆ ನಡೆಯಲಿದೆ ಎಂದು ರಾಜ್ಯ ಚುನಾವಣ ಆಯೋಗ ಸ್ಪಷ್ಟಪಡಿಸಿದೆ.

Advertisement

ಬಳ್ಳಾರಿ ಮಹಾನಗರಪಾಲಿಕೆ, ರಾಮನಗರ, ಚನ್ನಪಟ್ಟಣ, ಬೀದರ್‌, ಮಡಿಕೇರಿ ಹಾಗೂ ಭದ್ರಾವತಿ ನಗರಸಭೆಗಳು, ಬೆಂಗಳೂರು ಗ್ರಾಮಾಂತರ ವಿಜಯಪರು, ಬೇಲೂರು ಪುರಸಭೆ ಹಾಗೂ ಗುಡಿಬಂಡೆ, ತೀರ್ಥಹಳ್ಳಿ, ಹಿರೆಕೇರೂರು ಹಾಗೂ ಹಳ್ಳಿಖೇಡ ಪಟ್ಟಣ ಪಂಚಾಯತ್‌ಗಳು ಸಹಿ ತ 11 ನಗರಸ್ಥಳೀಯ ಸಂಸ್ಥೆಗಳಿಗೆ ಮಂಗಳವಾರ ನಿಗದಿಯಂತೆ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆ‌ಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮತದಾನ ಮುಕ್ತಾಯಕ್ಕೆ ಒಂದು ಗಂಟೆ ಮುಂಚಿತವಾಗಿ ಕೋವಿಡ್‌ ಸೋಂಕಿತರಿಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ :ಬಾಗಲಕೋಟೆ: ಕಾರಾಗೃಹಕ್ಕೂ ಒಕ್ಕರಿಸಿದ ಕೋವಿಡ್; ಓರ್ವ ಸಿಬಂದಿ ಸೇರಿ 39 ಕೈದಿಗಳಿಗೆ ಸೋಂಕು

Advertisement

Udayavani is now on Telegram. Click here to join our channel and stay updated with the latest news.

Next