Advertisement
ಅಧ್ಯಕ್ಷ ಗದ್ದುಗೆಗಾಗಿ ತೆರೆ ಮೆರೆಯಲ್ಲಿ ಕಸರತ್ತುಗಳು ಶುರುವಾಗಿವೆ. ಹಾಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅವ ಧಿ ಬರುವ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಅಷ್ಟರ ಒಳಗಾಗಿ ಚುನಾವಣೆ ಆಗಬೇಕಿದೆ. ಅದರಂತೆ ಚುನಾವಣೆ ಇನ್ನೂ ಮೂರು ತಿಂಗಳು ಬಾಕಿ ಉಳಿದಿದ್ದು, ಅದಾಗಲೇ ಆಕಾಂಕ್ಷಿಗಳು ಸ್ಪರ್ಧೆಗೆ ಸಜ್ಜಾಗಿ ನಿಂತಿದ್ದಾರೆ. ತಮ್ಮ-ತಮ್ಮ ಬೆಂಬಲಿಗರ ಜತೆ ಸರಣಿ ಸಭೆಗಳು ನಡೆಸುವ ಮೂಲಕ ತಮ್ಮ ಸ್ಪರ್ಧೆ ಬಗ್ಗೆ ಖಚಿತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಸದಸ್ಯ ಮತದಾರರರಿಗೆ ನೇರ ಮತ್ತು ಮೊಬೈಲ್ ಮೂಲಕ ಸಂಪರ್ಕಿಸಿ ಪ್ರಚಾರಕ್ಕೂ ಸಹ ಚಾಲನೆ ಕೊಟ್ಟಿದ್ದಾರೆ. ಹಾಗಾಗಿ ಈ ಸಲ ಕಸಾಪ ಸಾರಥಿ ಯಾರು ಆಗಬಹುದು ಎಂಬ ಕುತೂಹಲ ಹೆಚ್ಚಿಸಿದೆ.
Related Articles
Advertisement
ಇದನ್ನೂ ಓದಿ:ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಸುಮಲತಾ ಅಂಬರೀಶ್
ಕನ್ನಡ ಸಾಹಿತ್ಯ ಪರಿಷತ್ ಯಾರೊಬ್ಬರ ಸ್ವತ್ತಾಗಬಾರದು. ಅಧ್ಯಕ್ಷ ಸ್ಥಾನಕ್ಕೆ ಹೊಸ ಮುಖಗಳಿಗೆ ಅವಕಾಶ ಸಿಗುವಂತಾಗಬೇಕು. ಇದು ಹೆಚ್ಚಿನ ಸದಸ್ಯರ ಅಪೇಕ್ಷೆ ಸಹ ಇದೆ. ಬೀದರ ಗಡಿ ಜಿಲ್ಲೆಯಾಗಿರುವ ಹಿನ್ನೆಲೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು, ಪರಿಣಾಮಕಾರಿಯಾಗಿ ನಡೆಯಬೇಕಿದೆ. ಮತದಾರರು ಅವಕಾಶ ನೀಡಿದರೆ ಕನ್ನಡದ ತೇರನ್ನು ಎಳೆದುಕೊಂಡು ಹೋಗುತ್ತೇವೆ. ಸದಸ್ಯರ ಜತೆಗೆ ಶೀಘ್ರ ಸಭೆ ಸೇರಿ ನನ್ನ ಸ್ಪರ್ಧೆಯ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುತ್ತೇನೆ.
ಡಾ| ಸಂಜೀವಕುಮಾರ ಅತಿವಾಳೆ,ಹಿರಿಯ ಸಾಹಿತಿ
ಶಶಿಕಾಂತ ಬಂಬುಳಗೆ