Advertisement

Election 2023: ಹೀಗೂ ಉಂಟು –ಭದ್ರಕೋಟೆಯಲ್ಲೂ ಆಗುವುದು ತಲ್ಲಣ !

11:17 PM Apr 05, 2023 | Team Udayavani |

ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಕೊಟ್ಟ ಕಾರ್ಕಳ- ಹೆಬ್ರಿ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಕಾಂಗ್ರೆಸ್‌ ಹೇಳಿದರೆ, ಇತ್ತೀಚಿನ ವರ್ಷಗಳಲ್ಲಿ ತನ್ನ ಪ್ರಾಬಲ್ಯ ವಿಸ್ತರಿಸಿರುವ ಬಿಜೆಪಿ ಕೂಡ ಈ ಕ್ಷೇತ್ರ ತನ್ನದೇ ಭದ್ರಕೋಟೆ ಎಂದು ಬೀಗುತ್ತಿದೆ. ಆದರೆ ಇಲ್ಲಿನ ಮತದಾರರು ಈ ಎರಡು ಪಕ್ಷಗಳಿಗೆ ಮಾತ್ರವಲ್ಲ ಇತರ ಪಕ್ಷದ ಅಭ್ಯರ್ಥಿಗಳತ್ತಲೂ ತಮ್ಮ ಒಲವು ತೋರಿರುವ ಇತಿಹಾಸ ಕಾರ್ಕಳ ಕ್ಷೇತ್ರದ ರಾಜಕಾರಣದಲ್ಲಿದೆ.

Advertisement

1952ರಲ್ಲಿ ಮದ್ರಾಸ್‌ ಸರಕಾರದಿಂದ ನಾಮ ನಿರ್ದೇಶನಗೊಂಡ ಕಾಂಗ್ರೆಸ್‌ನ ಎ.ಬಿ. ಶೆಟ್ಟಿ ಕಾರ್ಕಳದ ಶಾಸಕರಾದರು. 1957ರಲ್ಲಿ ಇದೇ ಕಾಂಗ್ರೆಸ್‌ನ ಡಾ| ಕೆ.ಕೆ. ಹೆಗ್ಡೆ ಶಾಸಕರಾಗಿದ್ದರು. 1967ರಲ್ಲಿ ಜನಸಂಘದ ಬೋಳ ರಘುರಾಮ ಶೆಟ್ಟಿ ಶಾಸಕರಾಗಿ ಆಯ್ಕೆಯಾಗಿ ಅಚ್ಚರಿಯ ಫ‌ಲಿತಾಂಶ ನೀಡಿದ್ದರು. ಅನಂತರದಲ್ಲಿ 1972ರಿಂದ 1994ರ ನಡುವಿನ ಆರು ಅವಧಿಗೆ ಕಾಂಗ್ರೆಸ್‌ನಿಂದ ಡಾ| ಎಂ. ವೀರಪ್ಪ ಮೊಯ್ಲಿ ಚುನಾಯಿತರಾಗಿದ್ದರು. 1999ರಲ್ಲಿ ಕಾಂಗ್ರೆಸ್‌ನ ಎಚ್‌. ಗೋಪಾಲ ಭಂಡಾರಿ ಗೆದ್ದಿದ್ದರು. ಬಳಿಕ ಬಿಜೆಪಿ ಪಕ್ಷದ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌ ಗೆಲುವು ಸಾಧಿಸಿದ್ದರು. ಬಳಿಕ 2013 ಹಾಗೂ 2018ರಲ್ಲಿ ಸುನಿಲ್‌ ಕುಮಾರ್‌ ಅವರೇ ಮತ್ತೂಮ್ಮೆ ಆಯ್ಕೆಯಾಗಿದ್ದರು. ಹೀಗೆ ಕಾರ್ಕಳ ಕ್ಷೇತ್ರದ ಮತದಾರರ ಒಲವು ಕಾಲಕ್ಕೆ ತಕ್ಕಂತೆ ಬದಲಾಗುವುದನ್ನು ಇಲ್ಲಿನ ರಾಜಕೀಯ ಇತಿಹಾಸವೇ ಹೇಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next