Advertisement

Election 2023: ಹೀಗೂ ಉಂಟು –ಶಾಸಕನಾದರೂ ಕೂಲಿ ಕೆಲಸ ಮಾಡಿದ್ದರು!

12:11 AM Apr 06, 2023 | Team Udayavani |

ಪುತ್ತೂರು: ಸುಳ್ಯ ಕ್ಷೇತ್ರದಲ್ಲಿ ಶಾಸಕರಾಗಿದ್ದ ದಿವಂಗತ ಬಾಕಿಲ ಹುಕ್ರಪ್ಪ ಮಾಜಿ ಶಾಸಕರಾದ ಬಳಿಕ ಜೀವನ ನಿರ್ವಹಣೆಗೆ ಕೂಲಿ ಕೆಲಸವನ್ನೇ ನಂಬಿದ್ದರು. ಅಧಿಕಾರ ಸಿಕ್ಕರೂ ಕಡು ಬಡತನದಲ್ಲೇ ಬದುಕಿದ ರಾಜಕಾರಣಿ ದ.ಕ. ಜಿಲ್ಲೆಯಲ್ಲಿ ಬೇರೆಲ್ಲೂ ಕಾಣಸಿಗಲಾರದು.

Advertisement

1983ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಳ್ಯದ ಶಾಸಕರಾಗಿ ಆಯ್ಕೆಯಾಗಿದ್ದರು. 19 ತಿಂಗಳು ಶಾಸಕರಾಗಿದ್ದರು. ಬಳಿಕ ಸರಕಾರ ಪತನಗೊಂಡು ಮರು ಚುನಾವಣೆ ನಿಗದಿಯಾಗಿತ್ತು. ತನ್ನ ಶಾಸಕಾವಧಿಯಲ್ಲಿ ಸರಕಾರದ ಪರವಾಗಿ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್‌ ಗೇಮ್ಸ್‌ ಅನ್ನು ಪ್ರತಿನಿಧಿಸಿದ್ದರು.

ಮಾಜಿ ಶಾಸಕರಾದ ಅನಂತರ ಬೇರೆ ಬೇರೆ ರಾಜಕೀಯ ಪಕ್ಷ ಸೇರಿ ಅದೃಷ್ಟ ಪರೀಕ್ಷೆಗೆ ಒಡ್ಡಿದ್ದರೂ ಗೆಲುವು ದಕ್ಕಲಿಲ್ಲ. ಹುಕ್ರಪ್ಪ ಕೇವಲ ಶಾಸಕನಾದದ್ದು ಮಾತ್ರವಲ್ಲ. ಮಾಜಿ ಶಾಸಕನಾದ ಬಳಿಕ ಗುತ್ತಿಗಾರು ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿ ಸದಸ್ಯರಾಗಿ, ಎರಡೂವರೆ ವರ್ಷ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. ಅಚ್ಚರಿಯೆಂದರೆ ಶಾಸಕನಾದ ಬಳಿಕವೂ ಕೂಲಿ ಕೆಲಸ ಮಾಡಿಕೊಂಡು ಸಂಸಾರ ಸಾಗಿಸಿದ್ದರು. ಹುಕ್ರಪ್ಪ 1990ರ ಚುನಾವಣೆಯಲ್ಲಿ ಸ್ಪರ್ಧಿಸಿ ದಾಗ ಆಸ್ತಿ ಘೋಷಣೆ ಮಾಡುವಾಗ ಅವರಲ್ಲಿದ್ದದ್ದು 250 ರೂ. ಬ್ಯಾಂಕ್‌ ಬ್ಯಾಲೆನ್ಸ್‌, ಪತ್ನಿಯ ಚಿನ್ನದ ಕಿವಿಯೋಲೆ ಮೌಲ್ಯ 4,000 ರೂ. ಮತ್ತು ಸಣ್ಣದಾದ ಕೃಷಿ ಜಮೀನು.

Advertisement

Udayavani is now on Telegram. Click here to join our channel and stay updated with the latest news.

Next