Advertisement
ಬ್ರಿಟಿಷರ ಆಡಳಿತಾವಧಿಯಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿದ್ದ “ಮಂಗಳೂರು’ ಬಳಿಕ 1956 ರಲ್ಲಿ ಮೈಸೂರು ರಾಜ್ಯದ ಅಧೀನಕ್ಕೆ ಬಂತು. 1957ರಲ್ಲಿ “ಮಂಗಳೂರು-1′, ಅನಂತರ “ಮಂಗಳೂರು’ ಕ್ಷೇತ್ರವಾಗಿ ಚುನಾವಣೆ ಎದುರಿಸುತ್ತಾ ಬಂದಿದ್ದು, 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯ ಬಳಿಕ “ಮಂಗಳೂರು ನಗರ ದಕ್ಷಿಣ’ ವಿಧಾನಸಭಾ ಕ್ಷೇತ್ರವಾಯಿತು. ಆರಂಭದಲ್ಲಿ ಇದು ಕಾಂಗ್ರೆಸ್ ಭದ್ರಕೋಟೆಯಾಗಿದ್ದರೂ ಬಳಿಕ ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸ್ಥಾಪಿಸಿತು.1994ರಿಂದ ನಾಲ್ಕು ಅವಧಿ ಗಳಲ್ಲಿ ಸತತವಾಗಿ ಬಿಜೆಪಿ ವಶದಲ್ಲಿದ್ದ ಕ್ಷೇತ್ರವನ್ನು 2013ರ ಚುನಾ ವಣೆಯಲ್ಲಿ ಕಾಂಗ್ರೆಸ್ ಮರಳಿ ತನ್ನ ತೆಕ್ಕೆಗೆ ಸೆಳೆದುಕೊಂಡಿತು. 2018ರಲ್ಲಿ ಇದು ಮತ್ತೆ ಬಿಜೆಪಿ ಪಾಲಾಯಿತು. 1957ರಿಂದ 2018 ರವರೆಗೆ ನಡೆದಿರುವ ಒಟ್ಟು 14 ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ 8 ಬಾರಿ ಕಾಂಗ್ರೆಸ್ ಹಾಗೂ 6 ಬಾರಿ ಬಿಜೆಪಿ ಜಯಗಳಿಸಿವೆ.
ಈ ಕ್ಷೇತ್ರದಲ್ಲಿ ಆಯ್ಕೆಯಾದ ಶಾಸಕರಲ್ಲಿ ಹಲವರಿಗೆ ಉನ್ನತ ರಾಜಕೀಯ ಸ್ಥಾನಮಾನಗಳು ಸಂದಿವೆ. ಎಂ. ವೈಕುಂಠ ಬಾಳಿಗ ವಿಧಾನಸಭೆಯ ಸ್ಪೀಕರ್, ಸಚಿವರಾಗಿದ್ದರು. ಪಿ.ಎಫ್. ರೊಡ್ರಿ ಗಸ್, ಬ್ಲೇಸಿಯಸ್ ಎಂ. ಡಿ’ಸೋಜಾ ಸಚಿವ ರಾಗಿದ್ದರು. ಎನ್. ಯೋಗೀಶ್ ಭಟ್ ಅವರು ವಿಧಾನಸಭೆಯ ಉಪ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು. 1983ರಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿ. ಧನಂಜಯ ಕುಮಾರ್ ಬಳಿಕ ಸಂಸದರಾಗಿ ಕೇಂದ್ರ ಸಚಿವರಾಗಿದ್ದರು.
Related Articles
ಈ ಬಾರಿ ಇದುವರೆಗೂ ಕಾಂಗ್ರೆಸ್, ಬಿಜೆಪಿಯ ಅಭ್ಯರ್ಥಿಗಳು ನಿಗದಿ ಯಾಗಿಲ್ಲ. ಆದರೂ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಜೆ.ಆರ್. ಲೋಬೋ ಮುಂಚೂಣಿಯಲ್ಲಿದ್ದರೆ, ಬಿಜೆಪಿಯಿಂದ ಹಾಲಿ ಶಾಸಕ ವೇದವ್ಯಾಸ ಕಾಮತ್ ಹೆಸರು ಮುನ್ನೆಲೆಯಲ್ಲಿದೆ. ಇತರ ಪಕ್ಷಗಳು, ಪಕ್ಷೇತರರು ಕಣದಲ್ಲಿರುವ ಸಂಭವವಿದೆ.
Advertisement
~ ದಿನೇಶ್ ಇರಾ