Advertisement
“ನಿನ್ನ ಮಾತೇನೋ ಸರಿ. ಆದರೆ ಈ ಕಲ್ಪನೆ (ಕಾನ್ಸೆಪ್ಟ್), ಆಲೋಚನೆ ಎಲ್ಲ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಅಂತಾರೆ ಈ ಮ್ಯಾನೇಜ್‌ಮೆಂಟ್ ಗುರುಗಳು. ಪಾಲಿಟಿಕ್ಸ್ ಗೂ ಅನ್ವಯವಾಗಬೇಕಲ್ಲಪ್ಪಾ?” ಎಂದರು ಶೀನಪ್ಪ.
ರಾಮು ಪ್ರಶ್ನೆ ಇಟ್ಟ. “ಅದು ಬಹಳ ಸುಲಭ. ನೋಡಯ್ನಾ, ನೀನು ಸಾಲಿನಲ್ಲಿ ನಿಂತಿದ್ದೀಯಾ ಅಂದುಕೊ. ನಿನ್ನ ಮುಂದಿನವ ಮುಂದಕ್ಕೆ ಹೆಜ್ಜೆ ಇಟ್ಟರೆ ನೀನು ಏನು ಮಾಡ್ತೀಯಾ? ಒಂದು ಹೆಜ್ಜೆ ಮುಂದಕ್ಕೆ ಹೋಗ್ತಿಯಾ. ಸಾಲಿನ ಕೊನೆಯವನು ಏನು ಮಾಡ್ತಾನೆ, ಅವನೂ ಒಂದು ಹೆಜ್ಜೆ ಮುಂದೆ ಬರ್ತಾನೆ. ಅಷ್ಟೇ” ಎಂದರು ಶೀನಪ್ಪ.
Related Articles
Advertisement
“ಆದ್ರೆ ಇಷ್ಟೊಂದು ಮಂದಿ ಚೀಫ್ ಮಿನಿಸ್ಟರ್, ಡೆಪ್ಯೂಟಿ ಚೀಫ್ ಮಿನಿಸ್ಟರ್, ಕ್ಯಾಬಿನೆಟ್ ಮಿನಿಸ್ಟರ್ ಇದ್ದರೆ ಯಾರ ಮಾತು ಯಾರು ಕೇಳ್ತಾರೆ? ಎಲ್ಲರೂ ಮೇರಾ ಗೋಡಾ, ಮೇರಾ ಮೈದಾನ್ ಅಂತ ಓಡಿಸ್ತಾ ಇದ್ರೆ ಆಡಳಿತ ಹಳ್ಳ ಹಿಡಿಯೋದಿಲ್ಲವಾ” ಎಂದು ಕೇಳಿದ ಸೀತಾರಾಮು.
“ಹಾಗಾದ್ರೆ ಒಂದು ಕೆಲಸ ಮಾಡೋಣ. ಇಷ್ಟೊಂದು ಸಿಎಂ, ಡೆಪ್ಯೂಟಿ ಸಿಎಂಗಳ ಉಸ್ತುವಾರಿಗೆ ಒಬ್ಬ ಗ್ರೂಪ್ ಸಿಎಂ ಅನ್ನ ತಂದುಬಿಡೋಣ. ಎಲ್ಲ ಸರಿ ಹೋಗುತ್ತೆ” ಅಂದರು ಶೀನಪ್ಪ. ಕಣ್ಣಿನ ಹುಬ್ಬು ಹಾರಿಸಿ ಒಪ್ಪಿಗೆ ಕೊಟ್ಟ ಸೀತಾರಾಮು.