Advertisement
ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆಯನ್ನು ಇನ್ನಷ್ಟು ಬಿಗುಗೊಳಿಸಲು ಸಿಬಂದಿಗೆ ನಿರ್ದೇಶನ ನೀಡಲಾಯಿತು. ಜತೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.
ಈ ಬಗ್ಗೆ ಬಿ.ಸಿ. ರೋಡಿನಲ್ಲಿ ಪತ್ರಕರ್ತರ ಜತೆ ಎಸ್‌ಪಿ ವಿಕ್ರಮ್ ಅಮಟೆ ಮಾತನಾಡಿ, ಚೆಕ್‌ಪೋಸ್ಟ್‌ಗಳಲ್ಲಿ ಯಾವುದೇ ರೀತಿಯ ಅಕ್ರಮ ಸಾಗಣೆ ನಡೆಯದಂತೆ ನಿಗಾವಹಿಸಲು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಆಗಮಿಸಿರುವ ಸಿಆರ್‌ಪಿಎಫ್‌ನ ಪಥ ಸಂಚಲನ ಆರಂಭಗೊಂಡಿದ್ದು, ಪ್ರತೀ ಕ್ಷೇತ್ರದ ಆಯ ಕಟ್ಟಿನ ಜಾಗ ಗಳಲ್ಲಿ ಮುಂದಿನ ಒಂದು ವಾರಗಳ ಕಾಲ ಪಥಸಂಚಲನ ಕೈಗೊಳ್ಳುವರು. ಬಳಿಕ ಅವರನ್ನು ಚೆಕ್‌ಪೋಸ್ಟ್, ಫ್ಲೆಯಿಂಗ್ ಸ್ಕ್ವಾಡ್‌ಗಳಿಗೆ ನಿಯೋಜಿಸಲಾಗುವುದು. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಸದ್ಯಕ್ಕೆ ಸಿಆರ್‌ಪಿಎಫ್ ನ 4 ತಂಡಗಳು ಆಗಮಿಸಿದ್ದು, ಮುಂದೆ ಒಟ್ಟು 15 ತಂಡಗಳು ಆಗಮಿಸಲಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಇಲಾಖೆ ಸನ್ನದ್ಧವಾಗಿದೆ ಎಂದರು.