ಶುಭ ಸಮಾರಂಭಗಳಲ್ಲಿ ಊಟೋಪ ಚಾರ, ಉಡುಗೊರೆಗಳ ನೆಪದಲ್ಲಿ ಮತ ದಾರರಿಗೆ ಆಮಿಷ ಒಡ್ಡುವ ಸಾಧ್ಯತೆ ಗಳು ಅಧಿಕವಾಗಿರುವುದರಿಂದ ಫ್ಲೈಯಿಂಗ್ ಸ್ಕ್ವಾಡ್ ಟೀಮ್, ಸ್ಟಾಟಿಕ್ ಸರ್ವೆಲೆನ್ಸ್ ಟೀಮ್, ವೀಡಿಯೋ ಸರ್ವೆಲೆನ್ಸ್ ಟೀಮ್, ಸೆಕ್ಟರ್ ಆಫೀಸರ್ ಟೀಮ್, ವೀಡಿಯೋ ವ್ಹೀವಿಂಗ್ ಟೀಮ್, ಎಂಸಿಸಿ ನೋಡಲ್ ಆಫೀಸರ್, ಅಕೌಂಟ್ ಎಕ್ಸ್ ಪೆಂಡಿಚರ್ ಟೀಮ್‌ಗಳು ಈ ಬಗ್ಗೆ ಕಾರ್ಯೋನ್ಮುಖವಾಗಿದೆ.
Advertisement
ಅಲ್ಲಲ್ಲಿ ನಡೆಯುವ ಶುಭ ಕಾರ್ಯ ಕ್ರಮಗಳಿಗೆ ಆಯೋಗದ ತಂಡ ದಿಢೀರ್ ಭೇಟಿ ನೀಡಿ ಪರಿಶೀಲಿಸಬಹುದು. ಅಗತ್ಯ ಬಿದ್ದಲ್ಲಿ ವೀಡಿಯೋ ಚಿತ್ರೀಕರಣವನ್ನು ಮಾಡಲಿದ್ದು, ಮತಯಾಚನೆ, ರಾಜಕೀಯ ಚಟುವಟಿಕೆ, ಮತ ಪ್ರಚಾರ ಪ್ರಕ್ರಿಯೆಗಳು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕುಟುಂಬದೊಳಗಿನ ಕಾರ್ಯಕ್ರಮಕ್ಕೆ ಅನುಮತಿ ಬೇಕಿಲ್ಲ ಕುಟುಂಬದೊಳಗೆ ಮನೆಗಳಲ್ಲಿ ನಡೆ ಯುವ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯವಿಲ್ಲ. ವೈಯಕ್ತಿಕ ಕಾರ್ಯ ಕ್ರಮಗಳನ್ನು ಆಯೋಜಿಸಲು ಯಾವುದೇ ಆತಂಕ, ಗೊಂದಲ ಪಡುವ ಅಗತ್ಯವಿಲ್ಲ. ಈ ಕಾರ್ಯಕ್ರಮಗಳು ರಾಜಕೀಯ ಚಟುವಟಿಕೆಯಿಂದ ಮುಕ್ತವಾಗಿರಬೇಕು ಎಂದು ಚುನಾವಣೆ ಆಯೋಗ ತಿಳಿಸಿದೆ.