Advertisement

Election 2023: ಮತಗಳಿಕೆಗೆ ಲೆಕ್ಕಾಚಾರ, ಹಳ್ಳಿಗಳಲ್ಲಿ ಪ್ರಚಾರಕರ ಬಿಡಾರ !

11:05 PM Apr 05, 2023 | Team Udayavani |

ಕಾರ್ಕಳ: ವಿಧಾನಸಭಾ ಚುನಾ ವಣೆ ನಡೆಯುವ ದಿನಗಳು ಹತ್ತಿರ ಬರುತ್ತಿದ್ದಂತೆ ಪಕ್ಷ ಹಾಗೂ ಪಕ್ಷೇತರ ಸಂಭಾವ್ಯ ಅಭ್ಯರ್ಥಿಗಳು ಸಹಿತ ಪ್ರಬಲ ಏಜೆಂಟರು, ಸ್ಥಳೀಯ ಮಟ್ಟದ ನಾಯಕರು, ವಿವಿಧ ಪಕ್ಷಗಳ ಕಾರ್ಯ ಕರ್ತರು ಪ್ರಚಾರಕ್ಕಾಗಿ ಹಳ್ಳಿಗಳಲ್ಲಿ ಬಿಡಾರ ಹೂಡಿದ್ದಾರೆ. ಈ ಮೂಲಕ ಮತ ಗಳಿಕೆಯ ಪ್ರಯತ್ನ ನಡೆಸುತ್ತಿದ್ದಾರೆ.

Advertisement

ಕಾರ್ಕಳ, ಹೆಬ್ರಿ ಒಳಗೊಂಡ ಕಾರ್ಕಳ ವಿಧಾನ ಸಭಾ ಕ್ಷೇತ್ರದಾದ್ಯಂತ ಈ ಚಿತ್ರಣ ಸರ್ವೆ ಸಾಮಾನ್ಯವಾಗಿದ್ದು, ಗೆಲುವಿಗಾಗಿ ಗ್ರಾಮ ವಾಸ್ತವ್ಯವನ್ನೇ ನಡೆಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಒಂದು ಹೆಜ್ಜೆ ಮುಂದಿದ್ದರೆ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಎರಡನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಅಂತಿಮವಾಗದೆ ಇರುವುದು ಕೊಂಚ ಹಿನ್ನಡೆಯಾಗಿದ್ದರೂ ಅದರ ಸಂಭವನೀಯ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಮೂಲಕ ತಮ್ಮದೇ ಆದ ರೀತಿಯಲ್ಲಿ ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ನಡೆಸುತ್ತ ನಾವೇನೂ ಕಮ್ಮಿಇಲ್ಲ ಎನ್ನುವುದನ್ನು ತೋರಿಸುತ್ತಿದ್ದಾರೆ. ಪಕ್ಷದೆಡೆ ಒಲವು ಇರುವ ಮತಗಳನ್ನು ಗಟ್ಟಿಗೊಳಿಸಿಕೊಳ್ಳುವುದರ ಜತೆಗೆ ಹೊಸ ಮತದಾರರನ್ನು ಸೆಳೆದುಕೊಳ್ಳುವ ಕೆಲಸ ನಡೆಸುತ್ತಿದ್ದಾರೆ.

ಹೆಬ್ರಿ, ಅಜೆಕಾರು, ನೂರಾಲ್‌ ಬೆಟ್ಟು, ಈದು ಸಹಿತ ಹಳ್ಳಿಗಳಲ್ಲಿ ಪಕ್ಷಗಳ ದೂತರನ್ನು ಬಿಡಲಾಗಿದ್ದು, ಹಗಲು-ರಾತ್ರಿ ಪ್ರಚಾರದ ತಂತ್ರಗಾರಿಕೆ ನಡೆಸಲಾಗುತ್ತಿದೆ. ಎದುರಾಳಿ ಪಕ್ಷಗಳ ಬಲಾಬಲ-ದುರ್ಬಲಗಳನ್ನು ಮತ ದಾರರಿಗೆ ಮನ ಮುಟ್ಟುವಂತೆ ತಿಳಿಸುವ ಕಾರ್ಯಗಳು ನಡೆಯುತ್ತಿವೆ. ಅಬ್ಬರದ ಪ್ರಚಾರದ ವೇಳೆ ಬಣ್ಣಬಣ್ಣದ ಮಾತುಗಳಿಂದ ಮತದಾರರನ್ನು ತನ್ನತ್ತ ಸೆಳೆಯುವ ವಿವಿಧ ಪ್ರಯತ್ನಗಳು ವಿವಿಧ ಶೈಲಿಯಲ್ಲಿ ನಡೆಯುತ್ತಿವೆ. ಪ್ರಮುಖ ನಾಯಕರು, ಸಂಭಾವ್ಯ ಅಭ್ಯರ್ಥಿಗಳು ಚುನಾವಣೆ ದಿನ ನಿಗದಿಯಾದ ದಿನದಿಂದ ಗ್ರಾಮಗಳಲ್ಲೇ ಠಿಕಾಣಿ ಹೂಡಿದ್ದು ತಮ್ಮ ವಿವಿಧ ರೀತಿಯ ಯೋಜನೆಗಳನ್ನು ಜನರಿಗೆ ತಿಳಿಸುವಲ್ಲಿ ನಿರತರಾಗಿದ್ದಾರೆ.

ಪ್ರತೀ ಮನೆಯನ್ನು ಮುಟ್ಟುವ ಗರಿಷ್ಠ ಪ್ರಯತ್ನ ಅವರದ್ದಾಗಿದ್ದು, ಇನ್ನೊಂದೆಡೆ ಪ್ರಚಾರಕ್ಕೆಂದು ತೆರಳಿದ ಸಂದರ್ಭದಲ್ಲಿ ಕ್ರಿಕೆಟ್‌ ಆಟವಾಡುವುದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಊಟ, ತಿಂಡಿ ಬಡಿಸುವುದು, ಮನೆ ನಿರ್ಮಾಣ ಕಾರ್ಯ ನಡೆಸುವಲ್ಲಿ ಕೂಲಿ ಕಾರ್ಮಿಕರ ರೀತಿ ಕೆಲಸಕ್ಕೆ ನೆರವಾಗುವುದು… ಹೀಗೆ ವಿವಿಧ ರೀತಿಯಲ್ಲಿ ಮತದಾರರನ್ನು ಆಕರ್ಷಿ ಸುವ ಯತ್ನ ನಡೆಸುತ್ತಿದ್ದಾರೆ. ದಿನ ದಿಂದ ದಿನಕ್ಕೆ ಪ್ರಚಾರ ಕಾರ್ಯ ಅಬ್ಬರ ಪಡೆಯುತ್ತಿದ್ದು, ಅತೃಪ್ತರ ಮನವೊಲಿಸುವಲ್ಲಿಯೂ ವಿವಿಧ ಪಕ್ಷಗಳ ನಾಯಕರು ಶತಾಯಗತಾಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next