ರಬಕವಿ-ಬನಹಟ್ಟಿ: ಭದ್ರವಾದ ದೇಶ ಕಟ್ಟುವಲ್ಲಿ ಮತದಾರರ ಪಾತ್ರ ಮುಖ್ಯವಾಗಿದೆ. ಆದ್ದರಿಂದ ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪವಿತ್ರವಾದ ಕಾರ್ಯವಾಗಿದೆ. ಮತದಾನದ
ಸಂದರ್ಭದಲ್ಲಿ ಮತದಾರರು ಯಾವುದೆ ಆಸೆ ಅಮಿಷಗಳಿಗೆ ಒಳಗಾಗಬಾರದು ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್ ಸಂಜಯ ಇಂಗಳೆ ಹೇಳಿದರು.
ನಗರದ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತವಾಗಿ ನಡೆದ ರಂಗೋಲಿ ಸ್ಪರ್ಧೆ ವೀಕ್ಷಣೆ ಮಾಡಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಾದ ಲೀಲಾದೇವಿ ಮಾವರಕರ್ ಮಾತನಾಡಿ, ಮತದಾನದಲ್ಲಿ ಯಾವುದ ಲಿಂಗ ತಾರತಮ್ಯವಿಲ್ಲದೆ, ಯಾವುದೆ ಜಾತಿ, ಮತ, ಪಂಥದ ಬೇಧ ಭಾವವಿಲ್ಲದೆ ಪ್ರತಿಯೊಬ್ಬರು ಮತದಾನದಲ್ಲಿ ಭಾಗವಹಿಸಬೇಕು ಎಂದರು.
ಸೋನಾಲಿ ಕಾರ್ವೇಕರ್, ದಾನಮ್ಮ ಶಿರಗೂರ ರಂಗೋಲಿ ಸ್ಪರ್ಧೆಯ ಮೂಲಕ ಮತದಾನದ ಮಹತ್ವ ವಿವರಿಸಿದರು.
ಪ್ರೊ| ವೈ.ಬಿ.ಕೊರಡೂರ, ಡಾ| ಮನೋಹರ ಶಿರಹಟ್ಟಿ, ಡಾ| ರೇಶ್ಮಾ ಗಜಾಕೋಶ, ಪ್ರೊ| ಗೀತಾ ಸಜ್ಜನ, ಡಾ| ಪ್ರಕಾಶ ಕೆಂಗನಾಳೆ, ಡಾ| ರಮೇಶ ಮಾಗುರಿ, ಚೇತನ ಮುಳೆಗಾವಿ, ವೆಂಕಟೇಶ ಕುಲಕರ್ಣಿ, ಗೀತಾ ಕುಂಬಾರ, ಭಾಗ್ಯಶ್ರೀ ಮಂಡಿ, ಶ್ರೀದೇವಿ ಕುಲಕರ್ಣಿ, ಅಂಜಿಲಿ ಕೊಪ್ಪದ, ತೇಜಸ್ವಿನಿ ಕೋಪರ್ಡೆ, ಅಂಕಿತಾ ಗುರುವ ಮತ್ತು ರೂಪಾ ಮುಗಲ್ಯಾಳ ಭಾಗವಹಿಸಿದ್ದರು.
ಇದನ್ನೂ ಓದಿ : ಉತ್ತರಪ್ರದೇಶ ಚುನಾವಣೆ 2022; ಕರ್ತಾಲ್ ಕ್ಷೇತ್ರದಿಂದ ಅಖಿಲೇಶ್ ಯಾದವ್ ಸ್ಪರ್ಧೆ