Advertisement
ಹೊಸಕೋಟೆ ತಾಲೂಕಿನಲ್ಲಿ 29 ಮತಗಟ್ಟೆ, ದೇವನಹಳ್ಳಿ ತಾಲೂಕಿನಲ್ಲಿ 24 ಮತಗಟ್ಟೆ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 28 ಮತಗಟ್ಟೆ ಹಾಗೂ ನೆಲಮಂಗಲ ತಾಲೂಕಿನಲ್ಲಿ 21 ಮತಗಟ್ಟೆಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 102 ಮತಗಟ್ಟೆಗಳಲ್ಲಿ ಮತದಾನದ ದಿನದಂದು ಕಾರ್ಯನಿರ್ವಹಿಸಲು 116 ಪಿಆರ್‌ಒಗಳು, 116 ಪಿಒಗಳು, 102 ಎಂಒಗಳು, 102 ವಿಡಿಯೋ ಗ್ರಾಫರ್ ಗಳನ್ನು ನಿಯೋಜಿಸಲಾಗಿದೆ ಎಂದರು.
ಮಾಗಡಿ ತಾಲೂಕಿನಲ್ಲಿ 33 ಮತಗಟ್ಟೆ, ರಾಮನಗರ ತಾಲೂಕಿನಲ್ಲಿ 21 ಮತಗಟ್ಟೆ, ಕನಕಪುರ ತಾಲೂಕಿನಲ್ಲಿ 39 ಮತಗಟ್ಟೆ ಹಾಗೂ ಚನ್ನಪಟ್ಟಣ ತಾಲೂಕಿನಲ್ಲಿ 33 ಮತಗಟ್ಟೆ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ಒಟ್ಟು 126 ಮತಗಟ್ಟೆಗಳಲ್ಲಿ ಮತದಾನದ ದಿನದಂದು ಕಾರ್ಯನಿರ್ವಹಿಸಲು 145 ಪಿ.ಆರ್.ಓ.ಗಳು, 145 ಪಿ.ಓ.ಗಳು, 126 ಎಂ.ಓ.ಗಳು, 126 ವಿಡಿಯೋ ಗ್ರಾಫರ್‌ಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು. ಒಟ್ಟಾರೆ ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗಾಗಿ ತೆರೆಯಲಾದ ಒಟ್ಟು 228 ಮತಗಟ್ಟೆಗಳಲ್ಲಿ 264 ಪಿ.ಆರ್.ಓ.ಗಳು, 264 ಪಿ.ಓ.ಗಳು, 228 ಎಂ.ಓ.ಗಳು, 228 ವಿಡಿಯೋ ಗ್ರಾಫರ್‌ಗಳನ್ನು ನಿಯೋಜಿಸಲಾಗಿದೆ.
Related Articles
Advertisement
ಮತದಾರರ ವಿವರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 902 ಪುರುಷ ಮತದಾರರು, 962 ಮಹಿಳಾ ಮತದಾರರು ಸೇರಿದಂತೆ ಒಟ್ಟು 1864 ಮತದಾರರಿದ್ದು, ಈ ಪೈಕಿ, ದೊಡ್ಡಬಳ್ಳಾಪುರತಾಲೂಕಿನಲ್ಲಿ 250 ಪುರುಷ ಮತದಾರರು, 265 ಮಹಿಳಾ ಮತದಾರರು ಸೇರಿದಂತೆ ಒಟ್ಟು 515 ಮತದಾರರಿದ್ದಾರೆ. ದೇವನಹಳ್ಳಿ ತಾಲೂಕಿನಲ್ಲಿ 194 ಪುರುಷ ಮತದಾರರು, 202 ಮಹಿಳಾ ಮತದಾರರು ಸೇರಿ ದಂತೆ ಒಟ್ಟು 396 ಮತದಾರರಿದ್ದಾರೆ. ಹೊಸಕೋಟೆ ತಾಲೂಕಿನಲ್ಲಿ 282 ಪುರುಷ ಮತದಾರರು, 300 ಮಹಿಳಾ ಮತದಾರರು ಸೇರಿದಂತೆ ಒಟ್ಟು 582 ಮತದಾರರಿದ್ದಾರೆ. ನೆಲಮಂಗಲ ತಾಲೂಕಿನಲ್ಲಿ 176 ಪುರುಷ ಮತದಾರರು, 195 ಮಹಿಳಾ ಮತದಾರರು ಸೇರಿದಂತೆ ಒಟ್ಟು 371 ಮತದಾರರಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 960 ಪುರುಷ ಮತದಾರರು, 1099 ಮಹಿಳಾ ಮತದಾರರು ಸೇರಿದಂತೆ ಒಟ್ಟು 2059 ಮತದಾರರಿದ್ದು, ಈ ಪೈಕಿ, ಮಾಗಡಿ ತಾಲೂಕಿನಲ್ಲಿ 221 ಪುರುಷ ಮತದಾರರು,
258 ಮಹಿಳಾ ಮತದಾರರು ಸೇರಿದಂತೆ ಒಟ್ಟು 479 ಮತದಾರರಿದ್ದಾರೆ. ಚನ್ನಪಟ್ಟಣ ತಾಲೂಕಿನಲ್ಲಿ 233 ಪುರುಷ ಮತದಾರರು, 280 ಮಹಿಳಾ ಮತದಾರರು ಸೇರಿದಂತೆ ಒಟ್ಟು 513 ಮತದಾರರಿದ್ದಾರೆ. ರಾಮನಗರ ತಾಲೂಕಿನಲ್ಲಿ 181 ಪುರುಷ ಮತದಾರರು, 209 ಮಹಿಳಾ ಮತದಾರರು ಸೇರಿದಂತೆ ಒಟ್ಟು 390 ಮತದಾರರಿದ್ದಾರೆ. ಕನಕಪುರ ತಾಲೂಕಿನಲ್ಲಿ 325 ಪುರುಷ ಮತದಾರರು, 352 ಮಹಿಳಾ ಮತದಾರರು ಸೇರಿದಂತೆ ಒಟ್ಟು 677 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಒಟ್ಟು 3923 ಮತದಾರರು: ಒಟ್ಟಾರೆ ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ 1862 ಪುರುಷ ಮತದಾರರು, 2061 ಮಹಿಳಾ ಮತದಾರರು ಸೇರಿದಂತೆ ಒಟ್ಟು 3923 ಮತದಾರರಿದ್ದಾರೆ.