ದಾವಣಗೆರೆ: ನಾನು ಯಾವುದೇ ಚುನಾವಣೆ ಎದುರಿಸಲು ದಿನದ 24 ಗಂಟೆಯೂ ಸದಾ ಸಿದ್ಧನಿದ್ದೇನೆಎನ್ನುವ ಮೂಲಕ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್ ಪಾಳೆಯ ಮಾತ್ರವಲ್ಲ, ಅವರ ಅಭಿಮಾನಿಗಳಲ್ಲೂ ಮಿಂಚಿನ ಸಂಚಲನಕ್ಕೆ ಕಾರಣರಾಗಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ನಾನು ಯಾವಾಗಲೂರಾಜಕಾರಣದಲ್ಲಿದ್ದೇನೆ. ಚುನಾವಣೆಗೂ ಸದಾಸಿದ್ಧನಿದ್ದೇನೆ ಎನ್ನುವ ಮೂಲಕ ಅಭಿಮಾನಿಗಳಪುಳಕಕ್ಕೆ ಕಾರಣರಾಗಿದ್ದಾರೆ.
ಕಳೆದ ಲೋಕಸಭಾಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಸ್ಪರ್ಧಿಸಿರಲಿಲ್ಲ.ಈ ಸಂದರ್ಭದಲ್ಲಿ ಅವರ ಹೇಳಿಕೆ ಜಿಲ್ಲೆಯ ರಾಜಕೀಯದಲ್ಲಿ ಭಾರೀ ಕುತೂಹಲ, ನಿರೀಕ್ಷೆಮೂಡಿಸಿದೆ.ದಾವಣಗೆರೆಯಲ್ಲಿ ನಡೆದ ರಾಜ್ಯಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಅವರುಬಹಳ ಸರಿಯಾಗಿ ಸತ್ಯವನ್ನೇ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮೋದಿಹೆಸರಿನಲ್ಲಿ ಗೆಲ್ಲಬಹುದು. ವಿಧಾನಸಭಾಚುನಾವಣೆಯಲ್ಲಿ ಮೋದಿ ಅಲೆ ಹೆಚ್ಚುಸಹಾಯ ಆಗುವುದಿಲ್ಲ ಎಂದು ಯಡಿಯೂರಪ್ಪಸತ್ಯವನ್ನೇ ಹೇಳಿದ್ದಾರೆ ಎಂದರು.ಬಿಜೆಪಿಯವರು ಎರಡು ದಿನ ರಾಜ್ಯ ಕಾರ್ಯಕಾರಿಣಿ ಮಾಡಿದರು.
ಆದರೆ ಅದರಿಂದ ಜನರಿಗೆ ಯಾವುದೇಪ್ರಯೋಜನ ಆಗಲೇ ಇಲ್ಲ. ರೈತರಿಗೆ ಅನುಕೂಲಆಗುವ ಯಾವ ನಿರ್ಣಯಗಳನ್ನೂ ತೆಗೆದುಕೊಂಡಿಲ್ಲ.ಕೇವಲ ಸಭೆ ಮಾಡಿದರು. ದುಡ್ಡಿತ್ತು, ಬಂದರು.ಊಟ ಮಾಡಿದರು, ಖರ್ಚು ಮಾಡಿದರು. ಬಂದಂತೆಹೋದರು. ಕಾರ್ಯಕಾರಿಣಿಯಿಂದ ಯಾವುದೇಪ್ರಯೋಜನವೇ ಇಲ್ಲ ಎಂದು ಟೀಕಿಸಿದರು.