Advertisement

ಅನುಕೂಲಸಿಂಧುಗಳು ತೆರೆಮರೆಗೆ; ವಿಪಕ್ಷಗಳ ಮುಖಂಡರತ್ತ ಪಿಎಂ ಟೀಕೆ

12:08 AM Feb 24, 2022 | Team Udayavani |

ಬಾರಾಬಂಕಿ/ಲಕ್ನೋ: ಉತ್ತರ ಪ್ರದೇಶದಲ್ಲಿನ ಅನುಕೂಲ ಸಿಂಧು ರಾಜಕಾರಣಿಗಳು ಮಾ. 10ರ ಬಳಿಕ ತೆರೆಯ ಮರೆಗೆ ಸರಿಯಲಿದ್ದಾರೆ. ವಿಪಕ್ಷಗಳು ಮುಸ್ಲಿಂ ಸಮುದಾಯದ ಮಹಿಳೆಯರ ಸಮಸ್ಯೆಗಳನ್ನು ಮರೆತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

Advertisement

ಉತ್ತರ ಪ್ರದೇಶದ ಬಾರಾಬಂಕಿ ಮತ್ತು ಕೌಶಾಂಬಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳು ಕೇವಲ ಓಟ್‌ ಬ್ಯಾಂಕ್‌ ರಾಜಕಾರಣದಲ್ಲಿ ತೊಡಗಿವೆ. ಮುಸ್ಲಿಂ ಸಮುದಾಯದ ಮಹಿಳೆ ಯರ ಮೇಲೆ ಬೆಟ್ಟದಂಥ ಸಮಸ್ಯೆಗಳು ಇದ್ದರೂ ಅವುಗಳ ಬಗ್ಗೆ ಗಮನ ಹರಿಸದೆ ಕ್ಷುಲ್ಲಕ ರಾಜ ಕಾರಣ ಮಾಡುತ್ತಿವೆ ಎಂದು ದೂರಿದ್ದಾರೆ.

ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಇದ್ದಾಗ ವಿಪಕ್ಷಗಳಲ್ಲಿನ ಕೆಲವು ಅನುಕೂಲಸಿಂಧು ರಾಜಕಾರಣಿಗಳು ಮಾ. 10ರ ಫ‌ಲಿತಾಂಶದ ಬಳಿಕ ತೆರೆಯ ಮರೆಗೆ ಸರಿಯಲಿದ್ದಾರೆ ಎಂದು ಪ್ರಧಾನಿ ಮೋದಿ ಭವಿಷ್ಯ ನುಡಿದಿದ್ದಾರೆ. ಉತ್ತರ ಪ್ರದೇಶ ಮತ್ತು ದೇಶದ ಇತರ ಭಾಗಗಳಲ್ಲಿ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿದ್ದಾಗ ರಾಜಕೀಯ ಕ್ಷೇತ್ರದ ಕೆಲವು ಮುಖಂಡರು ಮರೆಯಾಗಿದ್ದರು. ಜತೆಗೆ ಜನರಿಗೆ ಲಸಿಕೆ ತೆಗೆದುಕೊಳ್ಳಬಾರದೆಂದು ಭೀತಿ ಹುಟ್ಟಿಸಿ, ರಹಸ್ಯವಾಗಿ ತಾವು ಅದನ್ನು ಪಡೆದು  ಕೊಂಡರು ಎಂದು ಲೇವಡಿ ಮಾಡಿದ್ದಾರೆ ಪ್ರಧಾನಿ. ಅವರೆಲ್ಲರೂ ಕೆಲವೇ ದಿನಗಳಲ್ಲಿ ಮರೆಯಾಗಲಿದ್ದಾರೆ ಎಂದರು.

ಮೌನವೇಕೆ?: ಅಹ್ಮದಾಬಾದ್‌ನಲ್ಲಿ 2008ರಲ್ಲಿ ಸಂಭ ವಿಸಿದ್ದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಶೇಷ ಕೋರ್ಟ್‌ 38 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಸಮಾಜವಾದಿ ಪಕ್ಷ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂಥ ಮೌನವೇಕೆ ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ. ಪ್ರಕರಣದ ಬಗ್ಗೆ ಸಮರ್ಪಕ ತನಿಖೆ ನಡೆದ ಬಗ್ಗೆ ದೇಶವೇ ತೃಪ್ತಿ ವ್ಯಕ್ತಪಡಿಸಿತ್ತು. ಆದರೆ ಸಮಾಜವಾದಿ ಪಕ್ಷ ಮಾತ್ರ ಮೌನ ತಾಳಿದೆ ಮತ್ತು ತೀರ್ಪನ್ನು ಸ್ವಾಗತಿಸಲೇ ಇಲ್ಲ ಎಂದು ಟೀಕಿಸಿದರು. ಆ ಪಕ್ಷದ ನಾಯಕರು ಉಗ್ರರಿಗೆ ಪೋಷಣೆ ನೀಡುತ್ತಿದೆ ಎನ್ನುವು ದಕ್ಕೆ ಇದು ಉದಾಹರಣೆ ಎಂದು ಹೇಳಿದ್ದಾರೆ.

ಬರಾಬಂಕಿಯಲ್ಲಿ ಮಾತನಾಡಿದ ಪ್ರಧಾನಿ ಕೊರೊನಾ ಅವಧಿಯಲ್ಲಿ ಬಡವರಿಗೆ ಸೂಕ್ತ‌ ರೀತಿಯಲ್ಲಿ ಆಹಾರ ಧಾನ್ಯ ವಿತರಣೆ ಸೇರಿದಂತೆ ಹಲವು ಪರಿಹಾರ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಇದರಿಂದಾಗಿ ವಿಪಕ್ಷ ಗಳ ಮುಖಂಡರು ಆಘಾತಕ್ಕೆ ಒಳಗಾಗಿದ್ದಾರೆ. ಉತ್ತರ ಪ್ರದೇಶದ ಜನರು ಬಿಜೆಪಿಯ ಧ್ವಜವನ್ನು ಹಿಡಿದುಕೊಂಡು ಓಡಾಡುತ್ತಿರು ವುದು ಅವರಿಗೆ ಚಿಂತೆ ತಂದೊಡ್ಡಿದೆ ಎಂದು ಲೇವಡಿ ಮಾಡಿದ್ದಾರೆ.

Advertisement

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಮತ್ತು ಪೊಲೀಸ್‌ ಇಲಾಖೆಗಳಲ್ಲಿ ದುಡಿಯಲಾ ರಂಭಿಸಿದ್ದಾರೆ. 6-7 ವರ್ಷಗಳ ಹಿಂದೆ ಪೊಲೀಸ್‌ ಪಡೆಯಲ್ಲಿ ಮಹಿಳೆಯರ ಸಂಖ್ಯೆ 1.10 ಲಕ್ಷ ಆಗಿತ್ತು. ಸದ್ಯ ಅವರ ಸಂಖ್ಯೆ 2.25ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶದ ಜನರೇ ನನ್ನ ಕುಟುಂಬಸ್ಥರು. ಆದರೆ ಕುಟುಂಬಸ್ಥರಿಗೆ ಜನರ ನೋವು ಅರಿವಾಗುತ್ತಿಲ್ಲವೆಂದು ಸಮಾಜವಾದಿ ಪಕ್ಷದ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿ ಟಾಂಗ್‌ ನೀಡಿದ್ದಾರೆ.

ಕುಕಿ ಉಗ್ರ ಸಮಸ್ಯೆ ಐದು ವರ್ಷದಲ್ಲಿ ಅಂತ್ಯ: ಅಮಿತ್‌ ಶಾ
ಮಣಿಪುರದಲ್ಲಿ ಬುಡಮೇಲು ಕೃತ್ಯದಲ್ಲಿ ತೊಡಗಿರುವ ಕುಕಿ ಸಂಘಟನೆಯ ಜತೆಗೆ ಮಾತು ಕತೆ ನಡೆಸಲಾಗುತ್ತದೆ. ಈ ಮೂಲಕ ಮುಂದಿನ ಐದು ವರ್ಷಗಳಲ್ಲಿ ಸಮ ಸ್ಯೆಗೆ ಪರಿಹಾರ ಕಂಡುಕೊಳ್ಳ ಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಮಣಿಪುರದ ಚುರಚಾಂದ್‌ಪುರದಲ್ಲಿ ಬುಧವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಸ್ಸಾಂನಲ್ಲಿ ಸಮಸ್ಯೆಗೆ ಕಾರಣವಾಗಿದ್ದ ಬೋಡೋ ಉಗ್ರಗಾಮಿ ಸಂಘಟನೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿತ್ತು. ಅದೇ ರೀತಿ ಕುಕಿ ಸಮುದಾಯದಯುವಕರು ಮುಂದಿನ ಐದು ವರ್ಷಗಳಲ್ಲಿ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳದಂತೆ ಮಾಡಲಾಗುತ್ತದೆ ಎಂದರು.

“ನಮ್ಮ ಮೇಲೆ ವಿಶ್ವಾಸವಿಡಿ. ಕುಕಿ ಸಂಘಟನೆಯ ಜತೆಗೆ ಮಾತುಕತೆ ನಡೆಸುತ್ತೇವೆ. ರಾಜ್ಯದಲ್ಲಿ ಎರಡನೇ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು’ ಎಂದು ಮನವಿ ಮಾಡಿಕೊಂಡರು.

ಬಿಗಿ ಬಂದೋಬಸ್ತ್ ನಲ್ಲಿ ಬಂದ ಸಚಿವ
ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ ಕುಮಾರ್‌ ಮಿಶ್ರಾ ಬಿಗಿ ಬಂದೋಬಸ್ತ್ ನಲ್ಲಿ ಲಖೀಂಪುರಖೇರಿ ಯಲ್ಲಿ ಮತದಾನ ಮಾಡಿದ್ದಾರೆ. ಕೇಂದ್ರ ಅರೆಸೇನಾ ಪಡೆಯ ಸಿಬಂದಿ ಮತ್ತು ಉತ್ತರ ಪ್ರದೇಶ ಪೊಲೀಸರ ಸರ್ಪಗಾವಲಿನಲ್ಲಿ ಅವರು ನಿಘಾಸನ್‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಭವಾನಿಪುರದಲ್ಲಿರುವ
ಮತಗಟ್ಟೆಗೆ ಆಗಮಿಸಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ಲಖೀಂಪುರಖೇರಿಯಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿಯ ಸಾವಿಗೆ ಸಚಿವರ ಪುತ್ರ ಕಾರಣ ಎಂಬ ಆರೋಪವಿದೆ. ಬಂಧಿತರಾಗಿದ್ದ ಸಚಿವರ ಪುತ್ರನನ್ನು ಸದ್ಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಮಿಶ್ರಾ ಮತಗಟ್ಟೆಗೆ ಆಗಮಿಸಲು ಸರ್ಪಗಾವಲು ಒದಗಿಸಲಾಗಿತ್ತು.

4ನೇ ಹಂತದ
ಮತದಾನ ಮುಕ್ತಾಯ
ಫಿಲಿಭೀತ್‌ ಸೇರಿದಂತೆ ಒಂಬತ್ತು ಜಿಲ್ಲೆಗಳ 59 ಕ್ಷೇತ್ರಗಳಿಗೆ ನಡೆದ ನಾಲ್ಕನೇ ಹಂತದ ಮತದಾನ ಮುಕ್ತಾಯವಾಗಿದೆ. ಚುನಾವಣ ಆಯೋಗದ ಮಾಹಿತಿ ಪ್ರಕಾರ ಶೇ. 57. 45ರಷ್ಟು ಹಕ್ಕು ಚಲಾವಣೆಯಾಗಿದೆ. ಈ ಪೈಕಿ ಫಿಲಿಭೀತ್‌ನಲ್ಲಿ ಅತ್ಯಧಿಕ ಎಂದರೆ ಶೇ.61.33 ಹಕ್ಕು ಚಲಾವಣೆ ಯಾಗಿದೆ. ಲಕ್ನೋದಲ್ಲಿ ಡಿಸಿಎಂ ದಿನೇಶ್‌ ಶರ್ಮಾ, ಬಿಎಸ್‌ಪಿ ನಾಯಕಿ ಮಾಯಾವತಿ, ಸಚಿವ ಬೃಜೇಶ್‌ ಪಾಠಕ್‌ ಸೇರಿದಂತೆ ಪ್ರಮುಖರು ಮತ ಹಾಕಿದ್ದಾರೆ. ಸಣ್ಣಪುಟ್ಟ ತಾಂತ್ರಿಕ ತೊಂದರೆ ಹೊರತುಪಡಿಸಿ ದರೆ, ಒಟ್ಟಾರೆ ಮತದಾನ ಶಾಂತಿಯುತ ವಾಗಿತ್ತು ಎಂದು ಉ.ಪ್ರ. ಚುನಾವಣ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್‌ಪಿ ಮತ್ತು ಮೈತ್ರಿಕೂಟ ನಾಲ್ಕನೇ ಹಂತವೂ ಸೇರಿದಂತೆ 200ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಬಿಜೆಪಿ ವಿರುದ್ಧ ಉತ್ತರ ಪ್ರದೇಶದ ಜನರು ಆಕ್ರೋಶಗೊಂಡಿದ್ದಾರೆ ಎನ್ನುವುದು ಸತ್ಯ.
-ಅಖಿಲೇಶ್ ಯಾದವ್‌, ಎಸ್‌ಪಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next