Advertisement
ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕಿನ ಗಡಿ ಭಾಗದ ಡಿ.ನಾಗೇನಹಳ್ಳಿ ಗ್ರಾಮವನ್ನು 2010ರಲ್ಲಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ನಿಕ್ರಾ ಯೋಜನೆಯಡಿ ಅಂತರ್ಜಲ ವೃದ್ಧಿಗೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರ ಫಲವಾಗಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡ ಕಾರಣದಿಂದಾಗಿ ಗ್ರಾಮಕ್ಕೆ ‘ರಾಷ್ಟ್ರೀಯ ನೀರು ಅಭಿವೃದ್ಧಿ ಪ್ರಶಸ್ತಿ ಲಭಿಸಿದೆ.
Related Articles
Advertisement
ದೇಶದಲ್ಲಿ ಇದೇ ರೀತಿ ನಿಕ್ರಾ ಯೋಜನೆಯಡಿ 100 ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ರಾಜ್ಯದಲ್ಲಿ 4 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಕಳೆದ 11 ವರ್ಷಗಳಿಂದ ಗ್ರಾಮದಲ್ಲಿ ಯೋಜನೆ ಅನುಷ್ಠಾನಗೊಂಡು ಈಗ ಅದು ಸಫಲವಾದ್ದರಿಂದ ಮಾದರಿ ಗ್ರಾಮವಾಗಿ
ಹೊರಹೊಮ್ಮಿದೆ. ರಾಷ್ಟ್ರಪತಿ ಪ್ರಶಸ್ತಿ ಪ್ರದಾನ
ತಾಲೂಕಿನ ಎಲೆರಾಂಪುರ ಗ್ರಾಮ ಪಂಚಾಯಿತಿಗೆ ರಾಷ್ಟ್ರಮಟ್ಟದ ನೀರು ಸದ್ಬಳಕೆ ಮತ್ತು ಉಳಿತಾಯದ ಪ್ರಶಸ್ತಿಗೆ ಗರಿ ಮುಡಿಗೇರಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ ಮೂರನೇ ರಾಷ್ಟ್ರೀಯ ಜಲ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಪ್ರಧಾನ ಮಾಡಿದರು ಅಧ್ಯಕ್ಷರು ಉಪಾಧ್ಯಕ್ಷರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳೊಂದಿಗೆ ಪ್ರಶಸ್ತಿ ಸ್ವೀಕರಿಸಿದರು. ಕೊಳವೆ ಬಾವಿ ಮರುಪೂರ್ಣ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಸುಮಾರು 25 ಕೊಳವೆಬಾವಿಗಳು ಪೂರ್ಣಗೊಂಡಿವೆ ಒಣಗಿದ ಬಾವಿಗಳ ನೀರು ನಿಂತಿದೆ ಸಂಪೂರ್ಣವಾದ ಬೆಟ್ಟ-ಗುಡ್ಡ ಪ್ರದೇಶವಾದ ಈ ಭಾಗದಲ್ಲಿ ಮೊದಲು ಮಳೆನೀರು ವ್ಯರ್ಥವಾಗುತ್ತಿತ್ತು ಇದನ್ನು ಮನಗಂಡ ಕೃಷಿ ವಿಜ್ಞಾನ ಕೇಂದ್ರ ಡಿ ನಾಗೇನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿತು. ನಿಕ್ರಾ ಯೋಜನೆಯಡಿ ಗಡಿಗ್ರಾಮ ಡಿ ನಾಗೇನಹಳ್ಳಿ ಸೇರಿದಂತೆ ಮೂರು ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು ನಾಲಾಬದು ಕೃಷಿಹೊಂಡ ಸೇರಿದಂತೆ ಮಳೆ ನೀರು ಸಂಗ್ರಹಕ್ಕೆ ಅನುಕೂಲವಾಗುವ ಕಾಮಗಾರಿಗಳನ್ನು ಸತತ 11 ವರ್ಷಗಳ ಕಾಲ ಅವಿರತ ಪರಿಶ್ರಮದಿಂದ ಅನುಷ್ಠಾನಗೊಳಿಸಿದ ಪರಿಣಾಮ ಇಂದು ರಾಷ್ಟ್ರಪ್ರಶಸ್ತಿ ಸಿಗಲು ಕಾರಣವಾಗಿದೆ ಅತ್ಯಂತ ಸಂತೋಷವಾಗಿದೆ. -ದೊಡ್ಡ ಸಿದ್ದಯ್ಯ ತಾ ಪಂ. ಕಾರ್ಯನಿರ್ವಹಣಾಧಿಕಾರಿ. ಸಿದ್ದರಾಜು.ಕೆ