Advertisement

Video Viral ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಕಸ ಆಯುತ್ತಿದ್ದ ವೃದ್ಧ

01:02 AM Jun 25, 2024 | Team Udayavani |

ಜೈಪುರ: ಕಸ ಆರಿಸುತ್ತಿದ್ದ ವೃದ್ಧ ವ್ಯಕ್ತಿಯೊಬ್ಬ ತನ್ನ ವೀಡಿಯೋ ವೈರಲ್‌ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಪ್ರತಾಪ್‌ ಸಿಂಗ್‌ ಎಂಬ ವೃದ್ಧ ಪ್ಲಾಸ್ಟಿಕ್‌ ಬಾಟಲ್‌, ಇತರೆ ಕಸವನ್ನು ಆಯ್ದು, ಮಾರುತ್ತಿದ್ದ. ಅದರಿಂದ ಬರುವ ಸ್ವಲ್ಪ ಹಣದಲ್ಲೇ ಜೀವನ ಸಾಗಿಸುತ್ತಿದ್ದ. ಈತ ಓಡಾಡುವಾಗೆಲ್ಲ ಲೋಹಾವಟ್‌ ಗ್ರಾಮದ ಯುವಕರು ವೃದ್ಧನನ್ನು ಪದೇ ಪದೆ ಅಣುಕಿಸುತ್ತಿದ್ದರು. ಅದರ ವೀಡಿಯೋ ಮಾಡಿ ಜಾಲತಾಣದಲ್ಲೂ ಹರಿಬಿಟ್ಟಿದ್ದರು.

Advertisement

ಈ ವೀಡಿಯೋ ವೈರಲ್‌ ಆದ ಮೇಲೆ ಬಹಳ ಜನ ಪ್ರತಾಪ್‌ನನ್ನು ಗುರುತಿಸಿ, ಮತ್ತಷ್ಟು ಅಣುಕಿಸಲು ಆರಂಭಿಸಿದರು. ಇದರಿಂದ ಮನನೊಂದ ಪ್ರತಾಪ್‌ ಹೆದ್ದಾರಿ ಬಳಿಯೊಂದರ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next