Advertisement
ಸ್ವತ್ಛತೆ ಹಾಗೂ ನೈರ್ಮಲ್ಯಕ್ಕೆ ಪ್ರತೀ ಪಂ.ಗೂ 20 ಲಕ್ಷ ರೂ. ಅನುದಾನ ಕಾದಿರಿಸಲಾಗಿದೆ. ಸರಕಾರದ ಮಟ್ಟ ದಲ್ಲಿ ಪೆರ್ಮುದೆ ಪಂ.ಗೆ ಸಮೀಪದಲ್ಲೇ ಸೂರಿಂಜೆ ಗ್ರಾಮದ ಖಾಲಿ ಸ್ಥಳಾವಕಾಶವಿದ್ದು, ಪಂಚಾಯತ್ ಹೆಸರಿನಲ್ಲಿ 44 ಜಾಗ ಸೆಂಟ್ಸ್ ಗುರುತಿಸಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ ಸ್ಥಳೀಯ ವ್ಯಕ್ತಿಯೋರ್ವರು ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡಿದ್ದರಿಂದ ಘಟಕ ನಿರ್ಮಾಣ ವಿಳಂಬವಾಗಿದೆ. ಪಂ. ವತಿ ಯಿಂದಲೂ ಕೇಸು ತೆರವಿಗೆ ಸತತ ಪ್ರಯತ್ನ ನಡೆದಿದ್ದು, ಬೆಳೆಯುತ್ತಿರುವ ಗ್ರಾಮಕ್ಕೆ ತ್ಯಾಜ್ಯ ವಿಲೇವಾರಿ ಘಟಕದ ಅಗತ್ಯ ಹೆಚ್ಚೇ ಇದೆ ಎನ್ನುತ್ತಾರೆ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್.
ಇಲ್ಲಿ ಮನೆ ಮನೆ ತ್ಯಾಜ್ಯ ಸಂಗ್ರಹಕ್ಕೆ ಗುತ್ತಿಗೆ ನೀಡಲಾಗಿದೆ. ಆದರೆ ವಿಲೇವಾರಿಗೆ ಸ್ಥಳಾವಕಾಶದ ಕೊರತೆಯಿದೆ. ತೊಟ್ಟಿಯಿದ್ದರೂ ಕೆಲವು ಬಾರಿ ರಸ್ತೆ ಬದಿ ತ್ಯಾಜ್ಯ
ಕಸ ಹಾಕಲು ತೊಟ್ಟಿಯಿದ್ದರೂ ಕೆಲವು ಬಾರಿ ರಸ್ತೆ ಬದಿ ತ್ಯಾಜ್ಯ ಕಂಡು ಬರುತ್ತದೆ. ಸೂರಿಂಜೆ, ಶಿಬರೂರು, ಕಿನ್ನಿಗೋಳಿ ಸಂಪರ್ಕ ರಸ್ತೆಯ ನಂದಿನಿ ಸೇತುವೆ ಬಳಿ ಬಹುತೇಕ ತ್ಯಾಜ್ಯ ಉಚಿತವಾಗಿ ಬೆಳ್ಳಂಬೆಳಗ್ಗೆ ವಿಲೇವಾರಿಯಾಗುತ್ತದೆ. ಹೆಚ್ಚಿನ ವಸತಿ ಬಡಾವಣೆ, ಅಂಗಡಿ, ಮಾಂಸದ ಅಂಗಡಿಗಳು ಇರುವುದರಿಂದ ನಿತ್ಯ ಕೆ.ಜಿ. ಗಟ್ಟಲೆ ತ್ಯಾಜ್ಯ ಸಂಗ್ರಹವಾಗುತ್ತದೆ. ಪಂಚಾಯತ್‌ನಲ್ಲಿ ಈ ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಿದಲ್ಲಿ ಪಂಚಾಯತ್ ಭಾಗದಲ್ಲಿ ಸ್ವತ್ಛತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.