Advertisement

ಹಿರಿಯರು ಮಕ್ಕಳಿಗೆ ಪ್ರೀತಿ ನೀಡಿ: ರಮಾನಂದ ಹೆಗ್ಡೆ

12:56 PM Apr 27, 2019 | Suhan S |

ಹೆಬ್ರಿ, ಎ. 26: ಮನೆಯಲ್ಲಿ ಮಕ್ಕಳನ್ನು ಪ್ರೀತಿಯಿಂದ ಕಾಣುವುದರ ಜತೆಗೆ ಅವರನ್ನು ಮುದ್ದು ಮಾಡಿದಾಗ ಅವರು ಹಿರಿಯರ ಮೇಲೆ ಗೌರವಾದರಗಳನ್ನು ಬೆಳೆಸಿಕೊಳ್ಳುತ್ತಾರೆ ಎಂದು ಬೇಳಂಜೆ ರಮಾನಂದ ಹೆಗ್ಡೆ ಹೇಳಿದರು.

Advertisement

ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಆಶ್ರಯಲ್ಲಿ ಹೆಬ್ರಿ ಸೂಪರ್‌ ಮಾರ್ಕೆಟ್‌ನ ಸಹಯೋಗದೊಂದಿಗೆ ಹೆಬ್ರಿ ದುರ್ಗಾ ಆರ್ಕೆಡ್‌ನ‌ ಶಾರದ ನಂದಪ್ಪ ಶೆಟ್ಟಿ ಸಭಾಭವನದಲ್ಲಿ ಒಂದು ತಿಂಗಳುಗಳ ಕಾಲ ನಡೆಯುತ್ತಿರುವ ನಲಿಕಲಿ-2019 ಬೇಸಗೆ ಶಿಬಿರದ ಅಜ್ಜ ಅಜ್ಜಿಯಂದಿರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಕಟುಂಬ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪ್ರೀತಿ ಕಡಿಮೆಯಾಗಿದೆ. ಹೆಚ್ಚಿನ ಮನೆಯಲ್ಲಿ ತಂದೆತಾಯಿಯರಿಗೆ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿ ಸಲು ಸಮಯವಿಲ್ಲ ಇದರಿಂದಾಗಿ ಮಕ್ಕಳು ಪ್ರೀತಿ ಸಿಗುವ ಕಡೆ ಅಥವಾ ಟಿವಿ ಮೊಬೈಲ್ ದಾಸರಾಗುತ್ತಾರೆ. ದರಿಂದಾಗಿ ಅವರು ಸಂಬಂಧಗಳ ಮಹತ್ವ ಅರಿಯಲು ಸಾಧ್ಯವಾಗುತ್ತಿಲ್ಲ ಎಂದರು.

ನಿವೃತ್ತ ಶಿಕ್ಷಕಿ ಅಹಲ್ಯಾ, ಪತ್ರಕರ್ತ ಬಾಲಚಂದ್ರ ಮುದ್ರಾಡಿ ಮಾತ ನಾಡಿದರು. ಸೂಪರ್‌ ಮಾರ್ಕೆಟ್‌ನ ಆಡಳಿತ ನಿರ್ದೇಶಕ ಚಾರ ವಾದಿರಾಜ್‌ ಶೆಟ್ಟಿ, ಸವಿತಾ ಆರ್‌.ಹೆಗ್ಡೆ , ವನಜಾ,ರಮಾ ಜೋಯಿಸ್‌, ಸುಮಿತ್ರಾ, ಜಯಶ್ರಿ, ಕೀರ್ತಿ, ಸುಶೀಲಾ, ರತ್ನಾ, ಪ್ರದೀಪ್‌ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶು ಪಾಲೆ ವೀಣಾ ಯು. ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಶೆಟ್ಟಿ ನಿರೂಪಿಸಿ, ಪ್ರಜ್ಞಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next