Advertisement

ಆಸ್ತಿ ವಿವಾದ:ಅಜ್ಜ-ಅಜ್ಜಿಯ ಮೇಲೆ ಸಿಟ್ಟಿನ ಭರದಲ್ಲಿ ಗುಂಡೆಸೆದ ಮೊಮ್ಮಗ

11:43 AM Jul 24, 2018 | Team Udayavani |

ಮುಜಫ‌ರನಗರ : ಆಸ್ತಿ ವಿವಾದಕ್ಕೆ ಸಂಬಂಧಿಸಿ 80 ವರ್ಷ ಪ್ರಾಯದ ರೈತ ಮತ್ತು ಆತನ ಪತ್ನಿಯ ಮೇಲೆ ಅವರ ಮೊಮ್ಮಗನೇ ಗುಂಡೆಸೆದ ಘಟನೆ ಜಿಲ್ಲೆಯ ಜಾತ್‌ನಗ್ಲಾ  ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಕುಟುಂಬದ ಆಸ್ತಿಯಲ್ಲಿ ತನ್ನ ತಂದೆಯ ಪಾಲಿನ ಬಗ್ಗೆ ಮಾತನಾಡಲು ಮೊಮ್ಮಗ ಮೋನು ನಿನ್ನೆ  ಸೋಮವಾರ ರಾತ್ರಿ ತನ್ನ ಅಜ್ಜನ ಮನೆಗೆ ಬಂದಿದ್ದ.  ಅಜ್ಜ ಮತ್ತು ಮೊಮ್ಮೊಗನ ನಡುವೆ ಮಾತಿನ ಚಕಮಕಿ ನಡೆದು ದೊಡ್ಡ ಜಗಳಕ್ಕೆ ಕಾರಣವಾದಾಗ ಕೋಪೋದ್ರಿಕ್ತನಾದ ಮೊಮ್ಮಗ ಮೋನು, ಅಜ್ಜ -ಅಜ್ಜಿಯ ಮೇಲೆ ಗುಂಡೆಸೆದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ  ಬಳಿಕ ಮೊಮ್ಮಗ ಮೋನು ಪರಾರಿಯಾಗಿ ತಲೆ ಮರೆಸಿಕೊಂಡಿದ್ದಾನೆ. ಆತನನ್ನು ಹುಡುಕಾಡುವ ಕಾರ್ಯಾಚರಣೆಯನ್ನು ಆರಂಭಿಸಿರುವ ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next