Advertisement

ಎಳನೀರಿನಲ್ಲಿ ಅಭಿವೃದ್ಧಿ ಪಥ : 11.20 ಕೋ.ರೂ.ನಲ್ಲಿ ಅಭಿವೃದ್ಧಿ ಕಾಮಗಾರಿ

03:21 PM Mar 02, 2022 | Team Udayavani |

ಬೆಳ್ತಂಗಡಿ : ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದ ಅಭಿವೃದ್ಧಿಯ ಶಕೆ ಆರಂಭವಾಗಿದ್ದು, ಬಂಗಾರಪಲ್ಕೆ ಪರಿಸರದ ಅನುಕೂಲಕ್ಕಾಗಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಸೇತುವೆ ಸಹಿತ ಕಿಂಡಿ ಅಣೆ ಕಟ್ಟಿನ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆದಿದೆ.

Advertisement

ಎಳನೀರು ಪ್ರದೇಶದ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಮೀಸಲಿರಿಸಿದ್ದು ಇದರ ಕಾಮಗಾರಿ ಸದ್ಯವೇ ಆರಂಭವಾಗಲಿದೆ. ಚಿಕ್ಕ ಮಗಳೂರು ಜಿÇÉೆಯ ಕಳಸ ಹಾಗೂ ಸಂಸೆಗೆ ತೀರಾ ಹತ್ತಿರದಲ್ಲಿರುವ ಬಂಗಾರಪಲ್ಕೆ ಪ್ರದೇಶ ದೂರದ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಇರುವ ಕಾರಣ ಇಲ್ಲಿನ ಅಭಿವೃದ್ಧಿಗೆ ಅನೇಕ ತೊಡಕುಗಳಿತ್ತು.

5 ಕೋಟಿ ರೂ. ಯೋಜನೆ
ಬಂಗಾರಪಲ್ಕೆಯಲ್ಲಿ 5 ಕೋಟಿ ರೂ. ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದೆ. 23.40 ಮೀ.ಉದ್ದ, 3.75ಮೀ. ಅಗಲದ 3ಮೀ. ನೀರು ಸಂಗ್ರಹ ಸಾಮರ್ಥ್ಯದ 4. ಕಿಂಡಿಗಳಿರುವ ಕಿಂಡಿ ಅಣೆಕಟ್ಟು ಸಹಿತ 3.50 ಮೀ. ಎತ್ತರದ ಸೇತುವೆ ನಿರ್ಮಾಣಗೊಳ್ಳಲಿದೆ. ಮಳೆಗಾಲದ ಭೂಕುಸಿತ ತಡೆಯಲು ತಡೆಗೋಡೆಗಳ ರಚನೆಯಾಗಲಿದೆ.

ರಸ್ತೆ ಅಭಿವೃದ್ಧಿ
ಸಂಸ್ಥೆ ಕಡೆಯಿಂದ ಬರುವ ರಸ್ತೆ, ಮಲವಂತಿಗೆ ಗ್ರಾಮ ಆರಂಭ ವಾಗುವ ಪ್ರದೇಶದಿಂದ ಎಳನೀರು- ದಿಡುಪೆ ರಸ್ತೆಯಲ್ಲಿ ಅರಣ್ಯ ಇಲಾಖೆ ವ್ಯಾಪ್ತಿ ಹೊಂದಿರದ ರಸ್ತೆಯನ್ನು ಅಭಿವೃದ್ಧಿಪಡಿಸಲು 5 ಕೋಟಿ ರೂ. ಅನುದಾನ ಮೀಸಲಿರಿಸಿದ್ದು ಈ ಕಾಮಗಾರಿ ಸದ್ಯದÇÉೇ ಆರಂಭವಾಗಲಿದೆ ಎಂದು ಶಾಸಕ ಹರೀಶ್‌ ಪೂಂಜ ತಿಳಿಸಿ¨ªಾರೆ. ಸದ್ಯ ಈ ಭಾಗದಲ್ಲಿ ಒಟ್ಟು 11 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದೆ. ಇದರಿಂದ ಗುತ್ಯಡ್ಕ, ಬಡಾಮನೆ, ಉಕ್ಕುಡ, ಬಂಗಾರಪಲ್ಕೆ ಸೇರಿದಂತೆ ಪರಿಸರದ ಜನರಿಗೆ ಅನುಕೂಲವಾಗಲಿದೆ.

ಉದಯವಾಣಿ ಧ್ವನಿ
ಎಳನೀರು ಪ್ರದೇಶಕ್ಕೆ ಮಂಗಳೂರು ಹಾಗೂ ಬೆಳ್ತಂಗಡಿಯಿಂದ 120 ಕಿ.ಮೀ. ದೂರ ಇದೆ. ಸಂಸೆ ತನಕ ಘನ ವಾಹನಗಳು ಸಂಚರಿಸಬಹುದು. ಸಾಮಗ್ರಿಗಳು, ಅಧಿಕಾರಿಗಳು ಮಂಗಳೂರು ಅಥವಾ ಬೆಳ್ತಂಗಡಿ ಯಿಂದ ಕಳಸ-ಸಂಸೆ ಅಥವಾ ಚಾರ್ಮಾಡಿ-ಕೊಟ್ಟಿಗೆಹಾರ ಮೂಲಕವೇ ಬರಬೇಕು. ಎಳನೀರು ಪ್ರದೇಶದ ಅಭಿವೃದ್ಧಿಗೆ ಪೂರಕ ಅನೇಕ ವರದಿಗಳನ್ನು ಉದಯವಾಣಿ ವರದಿ ಬಿತ್ತರಿಸಿ ಎಳನೀರು ಭಾಗದ ಜನರ ಧ್ವನಿಯಾಗಿತ್ತು. ಇದೀಗ ಬೆಳ್ತಂಗಡಿ ಭಾಗದ ಕಾಶ್ಮೀರವಾದ ಎಳನೀರಿನ ಅಭಿವೃದ್ಧಿಗೆ ಮುಹೂರ್ತ ಇಡಲಾಗಿದೆ.

Advertisement

ಅಭಿವೃದ್ಧಿಗೆ ಇನ್ನಷ್ಟು ಯೋಜನೆ
ಮಲವಂತಿಗೆ ಗ್ರಾಮದ ಎಳನೀರು ಭಾಗದ ಅಭಿವೃದ್ಧಿಗೆ ಕಾಮಗಾರಿ ಆರಂಭಗೊಳ್ಳಲಿದೆ. ಇಲ್ಲಿನ ಮೂಲ ಸೌಕರ್ಯಗಳ ಕೊರತೆಗಳ ನಿವಾರಣೆಗಾಗಿ ಮುಂದಿನ ಹಂತದಲ್ಲಿ ಇನ್ನಷ್ಟು ಯೋಜನೆ ರೂಪಿಸಿ, ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು
– ಹರೀಶ್‌ ಪೂಂಜ, ಶಾಸಕರು

ಶಾಸಕರಿಂದ ಇಂದು ಶಿಲಾನ್ಯಾಸ
– ಎಳನೀರು ಪ್ರದೇಶದಲ್ಲಿ ಮಾ. 2ರಂದು ಶಾಸಕ ಹರೀಶ್‌ ಪೂಂಜ 11.20 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಮತ್ತು ಕಾಮಗಾರಿಗಳ ಉದ್ಘಾಟನೆ.
– 5 ಕೋ.ರೂ. ವೆಚ್ಚದ ಕಿಂಡಿ ಅಣೆಕಟ್ಟು ಸಹಿತ ಸೇತುವೆ ಕಾಮಗಾರಿ, 5 ಕೋ.ರೂ. ವೆಚ್ಚದ ಎಳನೀರು- ದಿಡುಪೆ ರಸ್ತೆ, 50 ಲಕ್ಷ ರೂ.ವೆಚ್ಚ ದಲ್ಲಿ ಎಳನೀರು- ಪ.ಪಂಗಡದ ಕಾಲನಿ ಕಿರು ಸೇತುವೆ ಕಾಮಗಾರಿಗೆ ಶಿಲಾನ್ಯಾಸ.
– 13 ಲಕ್ಷ ರೂ.ಯ ಗುತ್ಯಡ್ಕ ಅಂಗನವಾಡಿ,10 ಲಕ್ಷ ರೂ. ವೆಚ್ಚದ ಗುತ್ಯಡ್ಕ ಶಾಲೆ ಕಾಂಕ್ರೀಟ್‌, 10 ಲಕ್ಷ ರೂ. ವೆಚ್ಚದ ಕುರೆಕಲ್‌ ಕಾಂಕ್ರೀಟ್‌ ರಸ್ತೆ, 9 ಲಕ್ಷ ರೂ. ವೆಚ್ಚದ ಬಡಮನೆ ಕಾಂಕ್ರೀಟ್‌ ರಸ್ತೆ, 8 ಲಕ್ಷ ರೂ. ವೆಚ್ಚದ ಬ್ರಹ್ಮಸ್ಥಾನದ ತೂಗು ಸೇತುವೆ ಕಾಮಗಾರಿ ಉದ್ಘಾಟನೆ.
– 5 ಲಕ್ಷ ರೂ. ನಲ್ಲಿ ಎಳನೀರು ಸಮುದಾಯ ಭವನ ದುರಸ್ತಿ, 2 ಲಕ್ಷ ರೂ.ಯ ಎಳನೀರು ಅಂಗನವಾಡಿ ದುರಸ್ತಿ, 3 ಲಕ್ಷ ರೂ.ಯ ಗುತ್ಯಡ್ಕ ಶಾಲೆ ರಸ್ತೆಯಲ್ಲಿ ಮೋರಿ ರಚನೆ, ಬಂಗಾರ ಪಲ್ಕೆ ರಸ್ತೆ ಕಾಮಗಾರಿ ಪರಿಶೀಲನೆ.

Advertisement

Udayavani is now on Telegram. Click here to join our channel and stay updated with the latest news.

Next