ಸ್ಯಾನ್ ಸಾಲ್ವಡಾರ್: ಬಿಟ್ ಕಾಯಿನ್ ಮಾದರಿಯ ಕರೆನ್ಸಿಗೆ ಮಾನ್ಯತೆ ನೀಡಿದ ವಿಶ್ವದ ಮೊದಲ ರಾಷ್ಟ್ರವೆಂಬ ಹೆಗ್ಗಳಿಕೆಗೆ ಮಧ್ಯ ಅಮೆರಿಕದ ಎಲ್ ಸಾಲ್ವಡಾರ್ ದೇಶ ಪಾತ್ರವಾಗಿದೆ.
ಬಿಟ್ ಕಾಯಿನ್‌ಗೆ ಮಾನ್ಯತೆ ನೀಡುವ ಸಲುವಾಗಿ ರಚಿಸಲಾಗಿದ್ದ ಮಸೂದೆಯೊಂದಕ್ಕೆ ಅಲ್ಲಿನ ಸಂಸತ್ತು ಅಂಗೀಕಾರ ನೀಡಿದೆ.
ಮಸೂದೆ ಪರವಾಗಿ 62 ಮತಗಳು ಬಂದಿವೆ. ಇದನ್ನು ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ, ತಮ್ಮ ದೇಶದಲ್ಲಿ ಮೂರು ಮಾದರಿಯ ಬಿಟ್ ಕಾಯಿನ್‌ಗಳ ಮೂಲಕ ಹೂಡಿಕೆ ಮಾಡುವ ಇತರ ದೇಶಗಳ ನಾಗರಿಕರಿಗೆ ತಮ್ಮ ದೇಶದ ಪೌರತ್ವ ನೀಡಲಾಗುತ್ತದೆ ಎಂದೂ ಅವರು ಪ್ರಕಟಿಸಿದ್ದಾರೆ.
ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 20246 ಸೋಂಕಿತರು ಗುಣಮುಖ; 10959 ಹೊಸ ಪ್ರಕರಣ ಪತ್ತೆ
ತಜ್ಞರ ಪ್ರತಿಪಾದನೆ: ಎಲ್ ಸಾಲ್ವಡಾರ್ ರಾಷ್ಟ್ರ ಕೈಗೊಂಡಂತೆ, ಇತರ ರಾಷ್ಟ್ರಗಳು ಬಿಟ್ ಕಾಯಿನ್ ಅನ್ನು ಅಧಿಕೃತ ಕರೆನ್ಸಿಯೆಂದು ಘೋಷಿಸುವುದು ಸುಲಭವಲ್ಲ. ಏಕೆಂದರೆ, ಪ್ರತಿಯೊಂದು ರಾಷ್ಟ್ರಕ್ಕೂ ಅದರದ್ದೇ ಆದ ಅಧಿಕೃತ ಕರೆನ್ಸಿ ಇರುತ್ತವೆ. ಎಲ್ ಸಾಲ್ವಡಾರ್‌ಗೆ ತನ್ನದೇ ಆದ ಅಧಿಕೃತ ಕರೆನ್ಸಿ ಇರಲಿಲ್ಲ. ಹಾಗಾಗಿ, ಆ ದೇಶವು ತನ್ನ ಕರೆನ್ಸಿಯನ್ನಾಗಿ ಬಿಟ್ ಕಾಯಿನ್ ಅನ್ನು ಆಯ್ಕೆ ಮಾಡಿಕೊಳ್ಳಲು ಸುಲಭವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.