ಮುಂಬಯಿ : ಚಿತ್ರ ನಿರ್ಮಾಪಕಿ ಏಕತಾ ಕಪೂರ್ ಗಂಡು ಮಗವನ್ನು ಪಡೆದಿದ್ದಾರೆ. ಮಗು ಹೆತ್ತುಕೊಟ್ಟ ಬಾಡಿಗೆ ತಾಯಿಗೆ ಧನ್ಯವಾದಗಳು !
ಈ ವರ್ಷ ಜನವರಿ 7ರಂದು ಬಾಡಿಗೆ ತಾಯಿ ಹೆತ್ತು ಕೊಟ್ಟಿರುವ ಈ ಮಗವಿಗೆ ಏಕತಾ, ‘ರವೀ’ ಎಂದು ಹೆಸರಿಟ್ಟಿದ್ದಾರೆ. ಇದು ಆಕೆಯ ತಂದೆ, ಬಾಲಿವುಡ್ ಮಾಜಿ ನಟ, ಜೀತೇಂದ್ರ ಅವರ ನಿಜನಾಮ.
‘ದೇವರ ದಯೆಯಿಂದ ನಾನು ನನ್ನ ಜೀವನದಲ್ಲಿ ಅನೇಕ ಯಶಸ್ಸನ್ನು ಕಂಡಿದ್ದೇನೆ. ಆದರೆ ಈ ಅತ್ಯಂತ ಸುಂದರ ಜೀವ ನನ್ನ ಬದುಕೆಂಬ ಜಗತ್ತನ್ನು ಪ್ರವೇಶಿಸಿರುವುದರಿಂದ ನನಗಾಗಿರುವ ಆನಂದಕ್ಕೆ ಬೇರೆ ಯಾವುದೂ ಸಾಟಿ ಇಲ್ಲ. ನನ್ನ ಮಗು ಹುಟ್ಟಿರುವುದರಿಂದ ನನಗಾಗಿರುವ ಸಂತಸ, ಸಂಭ್ರಮವನ್ನು ನಾನು ಯಾವ ರೀತಿಯಲ್ಲೂ ವರ್ಣಿಸಲಾರೆ’ ಎಂದು ಏಕತಾ ಕಪೂರ್ ಇನ್‌ಸ್ಟಾಗ್ರಾಂ ನಲ್ಲಿ ತನ್ನ ಹೃದಯದಾಳದ ಮಾತುಗಳನ್ನು ಬರೆದಿದ್ದಾರೆ.
ಏಕತಾ ಕಳೆದ ಏಳು ವರ್ಷಗಳಿಂದಲೂ ಮಗುವಿಗೆ ಪ್ರಯತ್ನಿಸುತ್ತಲೇ ಇದ್ದರು ಎಂದು ಆಕೆಯ ಕುಟುಂಬ ಮೂಲಗಳು ಹೇಳಿವೆ.
‘ಬದುಕಿನಲ್ಲಿ ಎಲ್ಲವೂ ನಾವೆಣಿಸಿದಂತೆ ನಡೆಯುವುದಿಲ್ಲ. ಆದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ ಎನ್ನುವುದು ಸತ್ಯ. ಈಗ ನಾನು ನನ್ನ ಅಂದದ, ಮುದ್ದಿನ ಮಗುವನ್ನು ಪಡೆದಿದ್ದೇನೆ. ಮಗುವಿನ ತಾಯಿಯಾಗಿರುವುದಕ್ಕೆ ನಾನು ನಿಜಕ್ಕೂ ದೇವರ ಆಶೀರ್ವಾದ ಪಡೆದಿದ್ದೇನೆ’ ಎಂದು ಏಕತಾ ಕಪೂರ್ ಹೇಳಿದ್ದಾರೆ.
ಏಕತಾ ಕಪೂರ್ ಅವರ ಸಹೋದರ ತುಷಾರ್ ಕಪೂರ್ ಕೂಡ 2016ರಲ್ಲಿ ತನ್ನ ಮಗ Laksshya ನನ್ನು ಬಾಡಿಗೆ ತಾಯಿಯ ಮೂಲಕವೇ ಪಡೆದಿದ್ದರು.