Advertisement
ಶಿವಸೇನೆಯ ಪರಮೋಚ್ಛ ನಾಯಕ ಬಾಳಾ ಸಾಹೇಬ್ ಠಾಕ್ರೆ ಮತ್ತು ಅವರ ಗರಡಿಯಲ್ಲಿ ಪಳಗಿದ ಶಿಂಧೆ ರಾಜಕೀಯದಲ್ಲಿ ಹಂತ ಹಂತವಾಗಿ ಬಹುಬೇಗ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ.
Related Articles
Advertisement
ಬದುಕಿನಲ್ಲಿ ಮರೆಯಲಾಗದ ನೋವು
2 ಜೂನ್ 2000 ರಂದು ನಡೆದ ದುರಂತ ಶಿಂಧೆಯವರ ಬದುಕಿನಲ್ಲಿ ಎಂದು ಮರೆಯಲಾಗದ ಆಗಾಗ ನೆನಪಾಗುವ ದುರಂತ ದಿನವಾಗಿದೆ. ಅವರ ಮಕ್ಕಳಾದ ದಿಪೇಶ್ (11 ವರ್ಷ) ಮತ್ತು ಶುಭದಾ (7 ವರ್ಷ) ಹಳ್ಳಿಯ ಸಮೀಪವಿರುವ ಸರೋವರದಲ್ಲಿ ದೋಣಿ ವಿಹಾರಕ್ಕೆ ತೆರಳಿದ್ದಾಗ ದೋಣಿ ಮಗುಚಿ ಬಿದ್ದು ಇಬ್ಬರೂ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ದುರಂತದ ಬಳಿಕ ಶಿಂಧೆ ಹಲವು ತಿಂಗಳುಗಳ ಕಾಲ ಖಿನ್ನತೆಗೆ ಒಳಗಾಗಿದ್ದರು. ಶಿವಸೇನೆಯ ಹಿರಿಯ ನಾಯಕ ಆನಂದ್ ದಿಘೆ ಅವರು ಶಿಂಧೆಗೆ ಭಾವನಾತ್ಮಕ ಬೆಂಬಲವನ್ನು ನೀಡಿ ಅವರ ಮನಸ್ಸಿನ ನೋವನ್ನು ದೂರ ಮಾಡಲು, ಖಿನ್ನತೆಯಿಂದ ದೂರವಿರಿಸಲು ರಾಜಕೀಯವಾಗಿ ಹೆಚ್ಚು ಕ್ರೀಯಾಶೀಲರನ್ನಾಗಿಸಿದರು.
ನೋವಿನ ಗಳಿಗೆಯಲ್ಲಿ ನನ್ನ ಕುಟುಂಬಕ್ಕೆ ನನ್ನ ಅಗತ್ಯವಿತ್ತು. ಈ ವೇಳೆ ದಿಘೆ ಸಾಹೇಬರು, ‘ಈ ಸಮಾಜಕ್ಕೆ ನಿಮ್ಮ ಅವಶ್ಯಕತೆ ಬಹಳ ಇದೆ. ನಿಮ್ಮ ಕುಟುಂಬ ಅಷ್ಟು ಚಿಕ್ಕದಲ್ಲ, ದೊಡ್ಡ ಕುಟುಂಬ. ನೀವು ಜನರಿಗಾಗಿ ಕೆಲಸ ಮಾಡಲು ಬಯಸುವವರು ಎಂದು ಧೈರ್ಯ ತುಂಬಿದ್ದನ್ನು ಶಿಂಧೆ ಕಾರ್ಯಕ್ರಮವೊದರಲ್ಲಿ ಕಂಬನಿ ಸಹಿತ ಹೇಳಿಕೊಂಡಿದ್ದರು.
ಶಿಂಧೆಯವರ ಇನ್ನೋರ್ವ ಪುತ್ರ ಡಾ. ಶ್ರೀಕಾಂತ್ ಶಿಂಧೆ ಅವರು ಮೂಳೆ ಶಸ್ತ್ರಚಿಕಿತ್ಸಕರಾಗಿದ್ದು, ಅವರು 2014 ರಲ್ಲಿ ಕಲ್ಯಾಣ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದು, 2019 ರಲ್ಲಿ ಮರು ಆಯ್ಕೆಯಾಗಿದ್ದಾರೆ.