Advertisement

Eknath Shinde ಭ್ರಮೆಯಲ್ಲಿದ್ದಾರೆ, ನಮ್ಮ ಶಾಸಕರು ಮಾರಾಟವಾಗಲು ಸಿದ್ದರಿಲ್ಲ: ಸಿದ್ದರಾಮಯ್ಯ

06:24 PM May 13, 2024 | Team Udayavani |

ಬೆಂಗಳೂರು: ‘‘ಏಕನಾಥ್ ಶಿಂಧೆ ಅವರು ಭ್ರಮೆಯಲ್ಲಿದ್ದಾರೆ, ಹಗಲುಗನಸು ಕಾಣುತ್ತಿದ್ದಾರೆ. ನಮ್ಮ ಯಾವುದೇ ಶಾಸಕರು ಮಾರಾಟವಾಗಲು ಸಿದ್ಧರಿಲ್ಲ”ಎಂದು ಸಿಎಂ ಸಿದ್ದರಾಮಯ್ಯ ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Advertisement

ಮಹಾರಾಷ್ಟ್ರದ ಸತಾರಾದಲ್ಲಿ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಿಂಧೆ,”ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದೆ ಅಲ್ಲಿ ‘ಆಪರೇಷನ್ ನಾಥ್ (ಏಕನಾಥ್)’ ಕುರಿತು ಮಾತುಕತೆ ನಡೆದಿದ್ದು, ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಸರಕಾರ ಉರುಳಿಸಿದ ರೀತಿ ಅಲ್ಲಿ ಅದನ್ನು ಪುನರಾವರ್ತಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಇಂತಹ ಕಸರತ್ತಿಗೆ ತಮ್ಮ ಅನುಭವವು ಉಪಯುಕ್ತವಾಗಬಹುದು” ಎಂದು ಹೇಳಿದ್ದರು.

“ಬಿಜೆಪಿಯವರು ಸರಕಾರ ಉರುಳಿಸುವ ಪ್ರಯತ್ನಗಳನ್ನು ಮಾಡಿದ ನಂತರ ಅವರು ವಿಫಲರಾಗಿದ್ದಾರೆ, ಅವರು ಮತ್ತೊಮ್ಮೆ ಏಕೆ ಪ್ರಯತ್ನಿಸುತ್ತಾರೆ? ಕಳೆದ ಒಂದು ವರ್ಷದಿಂದ ಇಂತಹ ಪ್ರಯತ್ನಗಳನ್ನು ಮಾಡಿ ವಿಫಲರಾಗುತ್ತಿದ್ದಾರೆ. “ನನ್ನ ಮಾಹಿತಿಯ ಪ್ರಕಾರ, ನಮ್ಮ ಯಾವ ಶಾಸಕರೂ ಮಾರಾಟವಾಗಲು ಸಿದ್ಧರಿಲ್ಲ. ಮಹಾರಾಷ್ಟ್ರದಂತಹ ಬದಲಾವಣೆಗಳು ಇಲ್ಲಿ ನಡೆಯಲು ಯಾವುದೇ ಅವಕಾಶವಿಲ್ಲ” ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಶಿಂಧೆ ಸರಕಾರ ಉಳಿಯುವುದೇ ಅನುಮಾನ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿಂಧೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆಯ ನಂತರ, ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರಕಾರವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಮತ್ತು ಅದರ ಅಸ್ತಿತ್ವದ ಬಗ್ಗೆಯೇ ಅನುಮಾನವಿದೆ. ಶಿವಸೇನಾ (ಯುಟಿಬಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬಗ್ಗೆ ಮೋದಿ ಏಕೆ ಮಾತನಾಡಿದರು ಎಂದರೆ ಠಾಕ್ರೆ ಅವರಿಗೆ ಶಕ್ತಿ ಇದೆ. ನಾನು ಇದನ್ನು ದಾಖಲೆಯಲ್ಲಿ ಹೇಳುತ್ತಿದ್ದೇನೆ. ಮೂಲ ಶಿವಸೇನೆ ಮತ್ತು ಎನ್‌ಸಿಪಿಯ ಎಲ್ಲಾ ಶಾಸಕರು ತಮ್ಮ ಮೂಲ ಪಕ್ಷಗಳಿಗೆ ಹಿಂದೆ ಹೋಗುತ್ತಾರೆ, ಕಾಂಗ್ರೆಸ್ ಜತೆಗೆ ಎರಡೂ ಪಕ್ಷಗಳು ಬರುತ್ತವೆ ಮತ್ತು ಮತ್ತೊಮ್ಮೆ ನಮ್ಮ ಸರಕಾರ ಬರುತ್ತದೆ. ಅದಕ್ಕಾಗಿಯೇ ಅವರು ಭಯಪಡುತ್ತಿದ್ದಾರೆ, ”ಎಂದು ತಿರುಗೇಟು ನೀಡಿದ್ದಾರೆ. ಕಾರ್ಯಾಚರಣೆ ನಡೆಸಲು ಶಿಂಧೆ ಮಾದರಿಯ ನಾಯಕರು ಕರ್ನಾಟಕ ಕಾಂಗ್ರೆಸ್‌ನಲ್ಲಿ ಇಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next