Advertisement
ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆ ಸರಕಾರ ಮಾಡಿದಾಗ ಲಿಂದಲೂ, ತೀರಾ ಅಸಹನೆಯಲ್ಲಿದ್ದ ಶಿವಸೇನೆಯ ಹಿರಿಯ ನಾಯಕ, ಸದ್ಯ ಪಕ್ಷದ ವಿರುದ್ಧವೇ ಸಿಡಿದು ನಿಂತಿದ್ದಾರೆ. ಅಷ್ಟೇ ಅಲ್ಲ, ಉದ್ಧವ್ ಠಾಕ್ರೆಯ ಅತ್ಯಂತ ನಿಕಟವರ್ತಿಯಾಗಿದ್ದರೂ ಎಲ್ಲೋ ಒಂದು ಕಡೆ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅರಿತ ಕೂಡಲೇ ತಮ್ಮ ಪ್ರಭಾವ ತೋರಿಸಿದ್ದಾರೆ.
58 ವರ್ಷದ ಏಕನಾಥ ಶಿಂಧೆ, ಮಹಾರಾಷ್ಟ್ರದ ಸತಾರಾ ಮೂಲದವರು. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಆರಂಭಿಸಿ, ಬಳಿಕ ಆಟೋ ಡ್ರೈವರ್ ಆದ ಇವರು, 1980ರಲ್ಲಿ ತಮ್ಮ ಗುರು ಎಂದೇ ಹೇಳಿಕೊಳ್ಳುವ ಆನಂದ್ ದಿಘೆ ಸಾಹೇಬ್ ಅವರ ಕಣ್ಣಿಗೆ ಬಿದ್ದರು. ಶಿಂಧೆಯ ಪ್ರಮುಖ ಸಾಮರ್ಥ್ಯವೇ ಜನರನ್ನು ಸೇರಿಸುವುದಾಗಿತ್ತು. ಶಿವಸೇನೆಯ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದ ಇವರು, ದಿಘೆೆ ಅವರ ಸಮಾಜ ಕಲ್ಯಾಣ ಕೆಲಸದಲ್ಲಿ ಭಾಗಿಯಾಗುತ್ತಿದ್ದರು. ಅಷ್ಟೆ ಅಲ್ಲ, ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲೂ ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಇದಕ್ಕಾಗಿ ಬಂಧಿತರಾಗಿ ಬಳ್ಳಾರಿ ಜೈಲಿನಲ್ಲಿ 40 ದಿನ ಕಳೆದಿದ್ದರು. 2014ರಲ್ಲಿ ಬಿಜೆಪಿ- ಶಿವಸೇನೆ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸಿದರು. ಈಗ ಉದ್ಧವ್ ಠಾಕ್ರೆ ಸರಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
Related Articles
Advertisement