ಸಂಕ್ರಾಂತಿ ಸಂಭ್ರಮದಲ್ಲಿ ಕನ್ನಡದ ಹಲವು ಚಿತ್ರಗಳು ತಮ್ಮ ಪೋಸ್ಟರ್, ಟೀಸರ್, ಫಸ್ಟ್‌ಲುಕ್ ಮೂಲಕ ಪ್ರೇಕ್ಷಕರಿಗೆ ಗಿಫ್ಟ್ ಕೊಟ್ಟಿವೆ. ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಚಿತ್ರ ಕೂಡಾ ಸಂಕ್ರಾಂತಿ ದಿನ ಚಿತ್ರದ ಕುರಿತಾದ ಸುದ್ದಿಯೊಂದನ್ನು ನೀಡುವುದಾಗಿ ಹೇಳಿತ್ತು. ಈ ಮೂಲಕ ಅಭಿಮಾನಿಗಳು ಕುತೂಹಲಕ್ಕೆ ಕಾರಣವಾಗಿತ್ತು. ಈಗ ಕುತೂಹಲಕ್ಕೆ ತೆರೆಬಿದ್ದಿದೆ. ಮುಖ್ಯವಾಗಿ ಚಿತ್ರತಂಡ ಎರಡು ವಿಷಯವನ್ನು ಘೋಷಿಸಿಕೊಂಡಿದೆ. ಒಂದು ಪ್ಯಾನ್ ಇಂಡಿಯಾ ಹಾಗೂ ಇನ್ನೊಂದು ಚಿತ್ರದ ಸಾಂಗ್ ರಿಲೀಸ್ ದಿನಾಂಕ.
ಹೌದು, ಈಗಾಗಲೇ ಅನೇಕ ಸಿನಿಮಾಗಳು ಕನ್ನಡದ ಜೊತೆಗೆ ಪರಭಾಷೆಯಲ್ಲೂ ತಯಾರಾಗುತ್ತಿದೆ. ಈ ಸಾಲಿಗೆ ಈಗ ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಚಿತ್ರ ಕೂಡಾ ಸೇರಿದೆ.
“ಏಕ್ ಲವ್ ಯಾ’ ಚಿತ್ರ ನಾಲ್ಕು ಭಾಷೆಯಲ್ಲಿ ತಯಾರಾಗುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ತಯಾರಾಗುತ್ತಿದ್ದು, ಆಯಾ ಭಾಷೆಯಲ್ಲಿನ ಪೋಸ್ಟರ್ ಅನ್ನು ಚಿತ್ರತಂಡ ಸಂಕ್ರಾಂತಿ ಹಬ್ಬದಂದು ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಹೆಸರಿಲ್ಲದ ಪಾತ್ರ ಮತ್ತು ಹೆಸರು ಮಾಡುವ ‘ಹೀರೋ’: ಲಾಕ್‌ಡೌನ್‌ನಲ್ಲಿ ತಯಾರಾದ ರಿಷಭ್ ಚಿತ್ರ
ಇನ್ನು, ಚಿತ್ರದ ಕಡೆಯಿಂದ ಮತ್ತೂಂದು ಅಪ್‌ಡೇಟ್ ಕೂಡಾ ಬಂದಿದ್ದು, ಚಿತ್ರದ ಮೊದಲ ಹಾಡು ಫೆ.14 ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿದೆ. ಈ ಹಾಡು ಕೂಡಾ ನಾಲ್ಕು ಭಾಷೆಯಲ್ಲೂ ಬಿಡುಗಡೆಯಾಗಲಿದೆ.
ಈ ಮೂಲಕ ಪ್ರೇಮ್ ಮತ್ತೂಮ್ಮೆ ನಾಲ್ಕು ಭಾಷೆಯಲ್ಲಿ ಸದ್ದು ಮಾಡಲಿದ್ದಾರೆ. ಇನ್ನು “ಏಕ್ ಲವ್ ಯಾ’ ಚಿತ್ರದಲ್ಲಿ ನಟಿ ರಕ್ಷಿತಾ ಸೋದರ ರಾಣಾ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದು, ಚಿತ್ರದಲ್ಲಿ ರಚಿತಾ ರಾಮ್ ಮತ್ತು ರೀಷಾ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.