ಹುಮನಾಬಾದ್ : ತಾಲೂಕಿನ ಕೊಡಂಬಲ್ ಗ್ರಾಮದಲ್ಲಿ ಭಾನುವಾರ ಸಂಜೆ 6 ಗಂಟೆಯಿಂದ ಮೂರು ಭಾರಿ ಭೂಮಿಯಿಂದ ನಿಗೂಢ ಶಬ್ದಗಳು ಕೇಳಿಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಸಂಜೆ ಹೊತ್ತಿಗೆ ದೊಡ್ಡ ಪ್ರಮಾಣದಲ್ಲಿ ಶಬ್ದ ಕೇಳಿ ಬರುತ್ತಿದ್ದಂತೆ ಗ್ರಾಮಸ್ಥರು ಮನೆಯಿಂದ ಓಡಿ ಹೊರಬಂದಿದ್ದಾರೆ. ರಸ್ತೆಗೆ ಬಂದ ಗ್ರಾಮಸ್ಥರು ಭೂಮಿ ನಡುಗಿದ ಅನುಭವಾಗಿ ಎಂದು ಹೇಳಿಕೊಂಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಭೂಮಿಯಿಂದ ಶಬ್ದಗಳು ಕೇಳಿಬಂದಿದ್ದು ಗ್ರಾಮದ ಬಹುತೇಕ ಜನರು ಹೇಳಿದ್ದಾರೆ.
ಈ ಹಿಂದೆ ತಾಲೂಕಿನ ಹುಣಸನಾಳು ಗ್ರಾಮದಲ್ಲಿ ಹಾಗೂ ಹೊಸಳ್ಳಿ ಗ್ರಾಮದಲ್ಲಿ ಇಂತಹ ಶಬ್ದಗಳು ಕೇಳಿಬಂದಿದ್ದವು. ಅಲ್ಲದೆ ಹೈದರಾಬಾದ್ ಹಾಗೂ ಬೆಂಗಳೂರು ಮೂಲದ ಭೂಗರ್ಭ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಇಲ್ಲಿ ಸ್ಮರಿಸಬಹುದಾಗಿದೆ. ಮಳೆ ಹೆಚ್ಚಾದ ಪರಿಣಾಮ ಭೂಮಿಯಲ್ಲಿ ಸಹಜ ಪ್ರಕ್ರಿಯೆಗಳು ನಡೆದು ಇಂತಹ ಶಬ್ದಗಳು ಬರುತ್ತವೆ ಎಂದು ಈ ಹಿಂದೆ ತಜ್ಞರು ಮಾಹಿತಿ ನೀಡಿದರು. ಇದೀಗ ಕೊಡಬಲ್ ಗ್ರಾಮದಲ್ಲಿ ಕೂಡ ಭೂಮಿಯಿಂದ ಇಂತಹ ಶಬ್ದಗಳು ಕೇಳಿಬರುತ್ತಿದ್ದು ಇದು ಭೂಕಂಪ? ಅಥವಾ ಭೂಮಿಯಲ್ಲಿನ ಸಹಜ ಪ್ರಕ್ರಿಯೆ ಎಂದು ತಿಳಿದು ಬರಬೇಕಾಗಿದೆ.
ಮಾಹಿತಿ ಲಭ್ಯವಾದ ಕೂಡ ಗ್ರಾನಕ್ಕೆ ಭೇಟಿನೀಡಿದ ಚಿಟಗುಪ್ಪ ಪಿಎಸ್ಐ ಮಹೇಂದ್ರಕುಮಾರ ಭೇಟಿನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದು, ಗ್ರಾಮಸ್ಥರು ಯಾವುದಕ್ಕೆ ಭಯಭೀತಿ ಬೀಳಬಾರದು. ಇಂತಹ ಘಟನೆ ಇತರೆ ಕಡೆಗಳಲ್ಲಿ ನಡೆದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸುವುದಿಲ್ಲ ಆತಂಕ ಪಡಬೇಡಿ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಧಮ್ ಇದ್ದರೆ ಹನುಮಮಾಲಧಾರಿಗಳನ್ನು ತಡೆಯಿರಿ : ಕೊಪ್ಪಳ ಡಿಸಿಗೆ ಸಂಜೀವ ಮರಡಿ ಸವಾಲು