Advertisement

ಜಮ್ಮು ಕಾಶ್ಮೀರದ ಸೋಪೋರ್ ನಲ್ಲಿ ಸೆರೆ ಸಿಕ್ಕಿದರು ಎಂಟು ಲಷ್ಕರ್ ಉಗ್ರರು

09:20 AM Sep 10, 2019 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರ ಪೊಲೀಸರು ಎಂಟು ಜನ ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರರನ್ನು ಬಂಧಿಸಿದ್ದಾರೆ. ಬಂಧಿತರು ಸೊಪೋರ್ ಪ್ರದೇಶದಲ್ಲಿ ಸ್ಥಳೀಯರನ್ನು ಬೆದರಿಸುವ ಕೆಲಸ ಮಾಡುತ್ತಿದ್ದರು ಹಾಗೂ ಉಗ್ರಚಟುವಟಿಕೆಗೆ ಬೆಂಬಲ ಸೂಚಿಸುವ ಪೋಸ್ಟರ್ ಗಳನ್ನು ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಇದಕ್ಕೆ ಸಂಬಂಧಿಸಿದಂತೆ ಎಂಟೂ ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ.

ಆಯಿಜಾಝ್ ಮಿರ್ಜಾ, ಒಮರ್ ಮಿರ್, ತಸ್ವೀಫ್ ನಝರ್, ಇಮ್ತಿಯಾಝ್ ನಝರ್, ಒಮರ್ ಅಕ್ಬರ್, ಫೈಝಾನ್ ಲತೀಫ್, ದ್ಯಾನಿಶ್ ಹಬೀಬ್ ಮತ್ತು ಶೌಕತ್ ಅಹಮ್ಮದ್ ಮಿರ್ ಅವರನ್ನು ಬಂಧಿತರೆಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next