Advertisement

ಕೇರಳದಿಂದ ಪರಾರಿಯಾಗಿರುವ ಎಂಟು ಮಂದಿ ದಶಕಗಳು ಕಳೆದರೂ ಪತ್ತೆಯಿಲ್ಲ!

09:17 PM Feb 08, 2023 | Team Udayavani |

ತಿರುವನಂತಪುರ: ಘೋರ ಪಾತಕದಲ್ಲಿ ಪಾಲ್ಗೊಂಡು ಕೇರಳದಿಂದ ಪರಾರಿಯಾಗಿರುವ 8 ಆರೋಪಿಗಳು ಇವತ್ತಿಗೂ ಪೊಲೀಸರ ಕೈಗೆ ಸಿಕ್ಕಿಲ್ಲ. ಅಂತಾರಾಷ್ಟ್ರೀಯ ಪೊಲೀಸ್‌ ಸಂಸ್ಥೆಯೇ ಅವರ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ನೀಡಿದ್ದರೂ ಸುಳಿವು ಸಿಕ್ಕಿಲ್ಲ. ಕೆಲವರ ವಿರುದ್ಧವಂತೂ ದಶಕಗಳ ಹಿಂದೆಯೇ ಇಂಟರ್‌ಪೋಲ್‌ ನೋಟಿಸ್‌ ನೀಡಿದೆ.

Advertisement

ಹಾಗಿದ್ದರೂ ಅವರ ಸುಳಿವೇ ಸಿಕ್ಕಿಲ್ಲ.ಈ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಹೆಸರುಗಳು ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಸುಕುಮಾರ ಕುರುಪ್‌ ಮತ್ತು ಡಾ.ಎದಡಿ ಒಮಾನಾ. ಇನ್ನು ಉಗ್ರರ ಪಟ್ಟಿಗೆ ಸೇರಿರುವ ಕೊಚುಪೀಡಿಕಯಿಲ್‌ ಶಬ್ಬೀರ್‌, ಮೊಹಮ್ಮದ್‌ ಬಶೀರ್‌, ಮೊಹಮ್ಮದ್‌ ರಫೀಖ್‌ ಕೂಡ ಸಿಕ್ಕಿಲ್ಲ. ಮೊಹಮ್ಮದ್‌ ಹನೀಫಾ, ಸುಧಿನ್‌ ಕುಮಾರ್‌ ಶ್ರೀಧರನ್‌, ಚೆರಿಯವೀಟಿಲ್‌ ಸಾದಿಖ್‌ ಮೇಲೆ ಅತ್ಯಂತ ಗಂಭೀರ ಪ್ರಕರಣಗಳಿವೆ.

ಈ ಬಗ್ಗೆ ಸಿಬಿಐನ ಮೂಲಗಳು ಪ್ರತಿಕ್ರಿಯೆ ನೀಡಿ; ಇತರೆ ದೇಶಗಳು ಸರಿಯಾಗಿ ಸ್ಪಂದಿಸದೇ ಇರುವುದೇ ಆರೋಪಿಗಳು ಸಿಗದಿರಲು ಕಾರಣ, ಸ್ಥಳಗಳನ್ನು ತಿಳಿಸಿದರೂ ಬಹುತೇಕ ದೇಶಗಳು ಪ್ರತಿಕ್ರಿಯೆ ನೀಡುವುದಿಲ್ಲ ಅಥವಾ ಹತ್ತಾರು ಪ್ರಶ್ನೆಗಳನ್ನು ಹಾಕಿ ಮನವಿಯನ್ನು ಹಿಂತಿರುಗಿ ಕಳಿಸುತ್ತವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next