Advertisement

ಐಫೆಲ್‌ ಟವರ್‌ ಏರುತ್ತಿದ್ದ ಆಗಂತುಕ

01:18 AM May 21, 2019 | sudhir |

ಪ್ಯಾರಿಸ್‌: ವ್ಯಕ್ತಿಯೊಬ್ಬ ಪ್ಯಾರಿಸ್‌ನ ಐತಿಹಾಸಿಕ ಐಫೆಲ್‌ ಟವರ್‌ ಅನ್ನು ಅಕ್ರಮವಾಗಿ ಏರುತ್ತಿದ್ದ ದೃಶ್ಯವೊಂದು ಸೋಮವಾರ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಐಫೆಲ್‌ ಟವರ್‌ನಲ್ಲಿದ್ದ ಎಲ್ಲರನ್ನೂ ಹೊರಕಳಿಸಲಾಗಿದೆ ಎಂದು ಐಫೆಲ್‌ ಟವರ್‌ನ ನಿರ್ವಹಣೆ ನಡೆಸುತ್ತಿರುವ ಸಂಸ್ಥೆ ಸೋಮವಾರ ತಿಳಿಸಿದೆ. ಆಗಂತುಕನೊಬ್ಬ ಐಫೆಲ್‌ ಟವರ್‌ ಏರುತ್ತಿರುವುದು ನಮಗೆ ಕಂಡುಬಂದಿತು. ಕೂಡಲೇ ಉನ್ನತ ಕ್ರಮ ಕೈಗೊಂಡು ಪೊಲೀಸರ ಸಹಾಯದೊಂದಿಗೆ ಜನರನ್ನು ಹೊರ ಕಳಿಸಲಾಯಿತು ಎಂದು ಸಂಸ್ಥೆ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next