Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರಳ ಈದ್‌ ಉಲ್‌ ಫಿತ್ರ್

08:41 PM May 15, 2021 | Team Udayavani |

ಚಿಕ್ಕಬಳ್ಳಾಪುರ: ನಗರ ಸೇರಿ ಜಿಲ್ಲಾದ್ಯಂತಮುಸ್ಲಿಮರ ಪವಿತ್ರ ಹಬ್ಬ ಈದ್‌ ಉಲ್‌ ಫಿತ್ರ(ರಂಜಾನ್‌) ಕೋವಿಡ್‌ ಮುನ್ನೆಚ್ಚರಿಕೆ ಮಧ್ಯೆಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಲಾಯಿತು.ಶಾಂತಿ, ಸೌರ್ಹಾದತೆ ಮತ್ತು ಸಹಬಾಳ್ವೆ ಪ್ರತೀಕವಾಗಿರುವ ಈದ್‌ ಉಲ್‌ ಫಿತ್ರ (ರಂಜಾನ್‌)ಹಬ್ಬವನ್ನು ಸರ್ಕಾರದ ಆದೇಶದಂತೆ ಸರಳವಾಗಿಮನೆಯಲ್ಲಿ ಆಚರಿಸಲಾಯಿತು. ಕಳೆದ ಒಂದುತಿಂಗಳು ಉಪವಾಸ ವ್ರತ ಆಚರಿಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

Advertisement

ಮನೆಯಲ್ಲೇ ನಮಾಜ್‌:ಸಮಾಜದಲ್ಲಿರುವ ಎಲ್ಲಾಬಡವರು ಹಬ್ಬವನ್ನು ಆಚರಿಸಲು ಜಕಾತ್‌( ಆದಾಯದಲ್ಲಿನ ಒಂದು ಭಾಗ ದಾನ ಮಾಡುವುದು),ಫಿತರಾ ಮತ್ತು ಸದಾ (ಮನುಷ್ಯನ ಶ್ರೇಯಸ್ಸಿಗೆ ಇದೊಂದು ರೀತಿಯ ದಾನ) ನೆರವೇರಿಸಿಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಿದರು.ಕೋವಿಡ್‌ ನಿಯಂತ್ರಿಸಲು ಕಠಿಣ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ, ಜಿಲ್ಲಾದ್ಯಂತ ವಿವಿಧ ಮಸೀದಿ, ಈದ್ಗಾ ಮೈದಾನದಲ್ಲಿ ಪೊಲೀಸರನ್ನು ನಿಯೋಜಿಸಿ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸ ಲಾಗಿತ್ತು.ಕೆಲವೊಂದು ಪ್ರದೇಶಗಳಲ್ಲಿ ಕುಟುಂಬ ಸದಸ್ಯರುಸೇರಿ ಪ್ರಾರ್ಥನೆ ಸಲ್ಲಿಸಿದರು.

ಸರಳವಾಗಿ ಆಚರಣೆ:ಜಿಲ್ಲೆಯಲ್ಲಿ ಜನತಾ ಕಫೂÂìಮತ್ತು ಲಾಕ್‌ಡೌನ್‌ ಹಿನ್ನೆಲೆ ಬಟ್ಟೆ ಅಂಗಡಿಗಳನ್ನೂಮುಚ್ಚಿದ್ದರಿಂದ ಬಟ್ಟೆ ಖರೀದಿ ಮಾಡಲೂ ಪರದಾಡುವಂತಾಯಿತು. ಧಾರ್ಮಿಕ ಉಪನ್ಯಾಸಕರುಈ ಹಬ್ಬಕ್ಕೆ ಬಟ್ಟೆ ಖರೀದಿ ಮಾಡುವುದನ್ನು ತ್ಯಾಗಮಾಡಿ ಅದೇ ಹಣದಲ್ಲಿ ಕೊರೊನಾ ಸೋಂಕಿತರಿಗೆಕೈಲಾದಷ್ಟು ಸಹಾಯ ಮಾಡಬೇಕೆಂದು ಸೂಚನೆನೀಡಿದ್ದರಿಂದ ಬಹುತೇಕ ಜನ ಧಾರ್ಮಿಕಮುಖಂಡರ ಆದೇಶ ಪಾಲಿಸಿದರು. ಇನ್ನೂಕೆಲವರು ಹೊಸಬಟ್ಟೆ ಧರಿಸಿ ಮಕ್ಕಳಿಗೆ ಬಟ್ಟೆ ಖರೀದಿಮಾಡಿ ಸರಳವಾಗಿ ಹಬ್ಬ ಆಚರಿಸಿದರು.

ಸಂಬಂಧಿಕರ ಆಗಮನಕ್ಕೆ ಕಡಿವಾಣ: ಕೊರೊನಾಸೋಂಕು ವ್ಯಾಪಕವಾಗಿ ಹರಡಿ ಕೆಲವರುಮೃತಪಡುತ್ತಿರುವ ಘಟನೆಗಳನ್ನು ಕಣ್ಣಾರೆ ಕಂಡುಈ ಬಾರಿಯ ಹಬ್ಬವನ್ನು ಆಚರಿಸಿದ ಬಹುತೇಕಮುಸ್ಲಿಮರು ತಮ್ಮ ಸಂಬಂಧಿಕರ ಮನೆಗಳಿಗೆತೆರಳಲು ಹಿಂಜರಿದಿದ್ದು ವಿಶೇಷವಾಗಿತ್ತು.ರಂಜಾನ್‌ ಮತ್ತು ಬಕ್ರೀದ್‌ ಹಬ್ಬಗಳಲ್ಲಿ ಈದ್ಗಾಮೈದಾನಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆಸಲ್ಲಿಸುವ ಪದ್ಧತಿಗೆ ಕಡಿವಾಣ ಹಾಕಲಾಗಿತ್ತು.ಮನೆಯಲ್ಲಿ ಮಾತ್ರ ಪ್ರಾರ್ಥನೆ ಸಲ್ಲಿಸಿದರು

Advertisement

Udayavani is now on Telegram. Click here to join our channel and stay updated with the latest news.

Next