Advertisement

ದೇಶಾದ್ಯಂತ ಸಂಭ್ರಮದ ಈದ್‌ ಉಲ್‌ ಫಿತರ್‌

10:20 PM May 03, 2022 | Team Udayavani |

ನವದೆಹಲಿ: ದೇಶಾದ್ಯಂತ ಈದ್‌ ಉಲ್‌ ಫಿತರ್‌ ಅನ್ನು ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವಾಗಿ ನವದೆಹಲಿಯ ಜಹಾಂಗೀರ್‌ಪುರಿಯಲ್ಲಿ ಹಿಂದೂ ಮತ್ತು ಮುಸ್ಲಿಮರು ಒಗ್ಗೂಡಿ ಕುಶಾಲ್‌ ಚೌಕ್‌ನಲ್ಲಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

ಎರಡೂ ಸಮುದಾಯದ ಮುಖಂಡರು ಸಿಹಿ ವಿನಿಮಯ ಮಾಡಿಕೊಂಡರು. ಕಳೆದ ತಿಂಗಳು ಈ ಪ್ರದೇಶದಲ್ಲಿ ಅಹಿತಕರ ಘಟನೆ ನಡೆದಿತ್ತು. ಪೊಲೀಸರು ಮತ್ತು ಅರೆಸೇನಾ ಪಡೆಗಳ ಬಿಗಿ ಭದ್ರತೆಯ ನಡುವೆಯ ನಡುವೆ ಈ ಕಾರ್ಯಕ್ರಮ ನಡೆದಿದೆ. ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಹಬ್ಬದ ಸಂಭ್ರಮ ಕಳೆಗುಂದಿತ್ತು. ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಹೀಗಾಗಿ, ಅಲ್ಲಿ ಹಬ್ಬ ಕಳೆಗಟ್ಟಲಿಲ್ಲ.

ಅಟ್ಟಾರಿಯಲ್ಲಿರುವ ವಾಘಾ ಗಡಿಯಲ್ಲಿ ಬಿಎಸ್‌ಎಫ್ ಮತ್ತು ಪಾಕಿಸ್ತಾನ ರೇಂಜರ್ಸ್‌ ಹಾಗೂ ಭಾರತ ಮತ್ತು ಬಾಂಗ್ಲಾದೇಶದ ಬಾರ್ಡರ್‌ ಗಾರ್ಡ್‌ ಬಾಂಗ್ಲಾದೇಶ ಯೋಧರ ನಡುವೆ ಸಿಹಿ ವಿನಿಮಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next