Advertisement
2,500 ನೀರಿನ ಬಾಟಲಿ ವಿತರಣೆಮುಸ್ಲಿಮರು ನಡೆಸಿದ ಈದ್ ಮಿಲಾದ್ ಮೆರವಣಿಗೆಯು ಕಾಪು ಪೇಟೆಯನ್ನು ಹಾದು ಹೋಗುವ ಸಂದರ್ಭದಲ್ಲಿ ಕಾಪು ಪೇಟೆಯ ಹಿಂದೂಗಳು ಸುಮಾರು 2,500 ಬಾಟಲಿಗಳಷ್ಟು ಕುಡಿಯುವ ನೀರು ಮತ್ತು ಸಿಹಿ ತಿಂಡಿಗಳನ್ನು ಹಂಚಿ ಮೆರವಣಿಗೆಯನ್ನು ಬೀಳ್ಕೊಟ್ಟರು. ಕಾಪು ಪೇಟೆಯ ವರ್ತಕರು, ರಿಕ್ಷಾ, ಟೆಂಪೋ, ಕಾರು ಚಾಲಕರು ಮತ್ತು ಮಾಲಕರು ಹಾಗೂ ಕಾಪು ಪುರಸಭೆಯ ಜನಪ್ರತಿನಿಧಿಗಳು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ವಿವಿಧ ಸಂಘ – ಸಂಸ್ಥೆಗಳ ಪ್ರತಿನಿಧಿಗಳು ಸೌಹಾರ್ದ ಕಾರ್ಯಕ್ರಮದೊಂದಿಗೆ ಕೈ ಜೋಡಿಸಿದರು.
ಕಾಪು – ಪೊಲಿಪು ಮಸೀದಿಯಿಂದ ಪ್ರಾರಂಭಗೊಂಡ ಮಿಲಾದುನ್ನಬಿ ಮೆರವಣಿಗೆಯು ಕೊಪ್ಪಲಂಗಡಿಯವರೆಗೆ ಸಾಗಿ, ಮಲ್ಲಾರು – ಪಕೀರಣಕಟ್ಟೆಯಿಂದ ಮೆರವಣಿಗೆಯನ್ನು ಕೊಪ್ಪಲಂಗಡಿಯಲ್ಲಿ ಕೂಡಿಕೊಂಡು ಕಾಪು ಪೇಟೆಯ ಮೂಲಕ ಸಾಗಿ ಪೊಲಿಪು ಜಂಕ್ಷನ್‌ನಲ್ಲಿ ಸಮಾಪನಗೊಂಡಿತು. ಸಾವಿರಾರು ಮಂದಿ ಮುಸ್ಲಿಮರು ಪಾಲ್ಗೊಂಡಿದ್ದವು.