Advertisement
ಇತರೆ ದೇಶಗಳಂತೆ ಈಜಿಪ್ಟ್ ಕೋವಿಡ್-19ನ ಕೆನ್ನಾಲಗೆಗೆ ಬಲಿಯಾಗಿದ್ದು, ಲಾಕ್‌ಡೌನ್ ಜಾರಿಯಾದಾಗಿನಿಂದ ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿದೆ. ಈ ಕುರಿತು ಸಚಿವೆ ಮತ್ತು ಹಣಕಾಸು ಯೋಜನಾಧಿಕಾರಿ ಹಲಾ ಎಲ್-ಸಯೀದ್ ಮಾಹಿತಿ ಹಂಚಿ ಕೊಂಡಿದ್ದು, 2020-21ರ ಹಣಕಾಸು ವರ್ಷದ
ಖಾಸಗಿ ಹೂಡಿಕೆ ಚಟುವಟಿಕೆಗಳು ಕಡಿತವಾ ಗಲಿದ್ದು, ಸಾರ್ವಜನಿಕರು ಬಂಡವಾಳ ಹೂಡಿಕೆ ಯಿಂದ ದೂರ ಉಳಿಯುವ ಸಂಭವವಿದೆ. ಈ ಬೆಳವಣಿಗೆಯಿಂದಾಗಿ ದೇಶದ ಒಟ್ಟಾರೆ ಹೂಡಿಕೆ ಪ್ರಮಾಣ 740 ಶತಕೋಟಿ ಈಜಿಪ್ಟ್ ಪೌಂಡ್‌ನಷ್ಟು ಕುಸಿಯಬಹುದು . ಕುಸಿಯುತ್ತಿದೆ ಇಡೀ ಆರ್ಥಿಕ ಕ್ಷೇತ್ರ ಈಗಾಗಲೇ ದೇಶದ ಆರ್ಥಿಕ ಬೆಳವ ಣಿಗೆಯ ದರ ಶೇ.5.6ರಷ್ಟು ಕುಸಿದಿದ್ದು, ಸರಾಸರಿ ಹಣದುಬ್ಬರ ದರದ ಪ್ರಮಾಣ ಶೇ.5ರಷ್ಟಕ್ಕೆ ಇಳಿದಿದೆ. ಅಲ್ಲದೇ ತೈಲೇತರ ವ್ಯಾಪಾರದಲ್ಲಿಯೂ ಅನಿಶ್ಚಿತತೆ ಕಾಡಿದ್ದು, ಶೇ.24ರಷ್ಟು ಕಡಿಮೆಯಾಗಿದೆ. ಆರ್ಥಿಕ ತೆಯ ಕಾರ್ಯಕ್ಷಮತೆಯನ್ನು ಬಲ ಗೊಳಿಸು ವುದು ಅನಿವಾರ್ಯವಾಗಿದ್ದು, ಅಗತ್ಯ ಯೋಜ ನೆಗಳನ್ನು ರೂಪಿಸಲಾಗುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ಸರಕಾರಿ ಹೂಡಿಕೆಗಳ ಪ್ರಮಾಣವನ್ನು 211 ಬಿಲಿಯನ್‌ನಿಂದ 280.7 ಶತಕೋಟಿಗೆ ಅಂದರೆ ಶೇ.33ರಷ್ಟು ಹೆಚ್ಚಿಸಲು ಯೋಜನೆ ರೂಪಿಸಿದ್ದು, ಧನ ಸಹಾಯದ ಹೂಡಿಕೆಗಳ ಪ್ರಮಾಣವನ್ನು 140 ಬಿಲಿಯನ್‌ನಿಂದ 225 ಶತಕೋಟಿಗೆ (ಶೇ. 61ರಷ್ಟು) ಹೆಚ್ಚಿಸಲಾಗುತ್ತದೆ ಎಂದಿದೆ. ಇದರ ನಡುವೆಯೇ ಕೆಲವು ಸಮಾಧಾನಕರ ಬೆಳವಣಿಗೆಗಳು ನಡೆದಿದ್ದು, ನಿವ್ವಳ ವಿದೇಶಿ ನೇರ ಹೂಡಿಕೆಯ ಪ್ರಮಾಣದಲ್ಲಿ ಶೇ.19 ಮತ್ತು ಸ್ವದೇಶಿ ಮೊತ್ತ ವರ್ಗಾವಣೆ ಪ್ರಮಾಣ ದಲ್ಲಿ ಶೇ.13ರಷ್ಟು ಹೆಚ್ಚಾಗಿದೆ.