Advertisement
ಹೆಣ್ಣಿನ ಬದುಕು ಪರಿಪೂರ್ಣವಾಗುವುದು ತಾಯಿಯಾದಾಗ ಎನ್ನುವ ಮಾತಿದೆ. ಮದುವೆಯಾಗಿ ಒಂದೆರೆಡು ವರ್ಷದಲ್ಲೇ ಮಗು ಹೆತ್ತು ಪರಿಪೂರ್ಣತೆ ಪಡೆದುಕೊಳ್ಳುವ ಕಾಲ ಈಗಿಲ್ಲ. ಮದುವೆಯಾಗುವುದಕ್ಕೂ ತಮ್ಮ ಬದುಕಿನ ಕಂಫರ್ಟ್‌ನೆಸ್ ನೋಡುವ ಹೆಂಗಳೆಯರು ಮಗು ಮಾಡಿಕೊಳ್ಳುವುದಕ್ಕೂ ನಿರ್ದಿಷ್ಟ ಕಾಲಘಟ್ಟ ಬರಬೇಕೆಂದು ಕಾಯುತ್ತಾರೆ.ಈ ರೀತಿ ಭವಿಷ್ಯದ ಪ್ಲ್ರಾನಿಂಗ್ ಮಾಡಿಕೊಳ್ಳುವ ಹೆಣ್ಣು ಮಕ್ಕಳಿಗೆ ಸಮಸ್ಯೆಯಾಗಿ ಕಾಡುವುದು ಅಂಡಾಣು ಶಕ್ತಿ ಕ್ಷೀಣಿಸುವಿಕೆ. ಅದಕ್ಕೂ ವೈದ್ಯಕೀಯ ಲೋಕದಲ್ಲಿ ” ಎಗ್ ಫ್ರೀಜಿಂಗ್ ಎಂಬ ಪರಿಹಾರವಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಂಡುಬರುತ್ತಿದ್ದ ಈ ರೀತಿಯ ವ್ಯವಸ್ಥೆ ಇದೀಗ ಭಾರತಕ್ಕೂ ಕಾಲಿಟ್ಟಿದ್ದು ರಾಜಧಾನಿ ಬೆಂಗಳೂರಿನಲ್ಲಿಯೂ ಪ್ರಾರಂಭವಾಗಿದೆ. ಕೆಲಸದ ಒತ್ತಡ, ಭವಿಷ್ಯದ ಚಿಂತೆ ಸೇರಿ ಹಲವಾರು ಕಾರಣಗಳಿಂದಾಗಿಮಹಿಳೆಯರು ಈ ಟ್ರೆಂಡ್‌ಗೆ ಆಕರ್ಷಿತರಾಗುತ್ತಿದ್ದಾರೆ.
Related Articles
Advertisement
ನನಗೆ ಮಗು ಬೇಕು ಆದರೆ ಇವಾಗಲೇ ಮಗುವಿನ ಜವಾಬ್ದಾರಿ ಬೇಡ. ಮದುವೆಯಾಗಿ 5ತಿಂಗಳಾಗಿದೆ. ಮಗುವಿನ ಬಗ್ಗೆ ನಾವಿಬ್ಬರು ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದೇವೆ. ಆದರೆ ಈ ಕೂಡಲೆ ಮಗುವಾದರೆ ಅದನ್ನು ನೋಡಿಕೊಳ್ಳುವುದು ಕಷ್ಟ. ಮದುವೆಯ ಜೀವನವನ್ನು ಸವಿಯಬೇಕು. ಸ್ವತ್ಛಂದಹಕ್ಕಿಗಳ ತರಹ ಹಾರಾಡುವವರು ನಾವು. ಈ ನಡುವೆ ಗರ್ಭದಲ್ಲಿ ಮೂರು ತಿಂಗಳು ತುಂಬಿದ್ದ ಮಗು ಕೆಲಸ ಹಾಗೂ ಇತರೆ ಒತ್ತಡದಿಂದಾಗಿ ಅಬಾಷನ್ ಆಗಿತ್ತು. ಇದರಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಹಾಗಾಗಿ ಸದ್ಯದ ಜೀವನ ಶೈಲಿಯಲ್ಲಿ ಮಗು ಪಡೆಯಲು ಕಷ್ಟವಾಗುತ್ತಿದೆ. ನನಗೆ ಒಂದು 33 ವರ್ಷ ಆಗುವ ವೇಳೆ ಮಗು ಪಡೆಯಬೇಕು ಎನ್ನುವ ಇಚ್ಛೆ ಇದೆ. ಈ ವೇಳೆ ಅಂಡಾಣುಗಳು ಕ್ಷೀಣಿಸುತ್ತದೆ ಎನ್ನುವ ಭೀತಿ ಇರುವುದರಿಂದ26 ವರ್ಷಕ್ಕೆ ಅಂಡಾಣು ಶೇಖರಣೆ ಇಟ್ಟಿದ್ದೇನೆ. ಯಾವಾಗಬೇಕೋ ಆ ವೇಳೆ ಮಗುವನ್ನು ಯಾವುದೇ ಚಿಂತೆಯಲ್ಲಿದೆಪಡೆಯುತ್ತೇನೆ ಎನ್ನುವ ವಿಶ್ವಾಸವಿದೆ. ಇದಕ್ಕೆ ಕುಟುಂಬ, ಪತಿ ಸಹಕಾರವಿದೆ ಎನ್ನುತ್ತಾರೆ ಸರಕಾರಿ ಉದ್ಯೋಗಿ ಸ್ವಾತಿ( ಹೆಸರು ಬದಲಾಯಿಸಲಾಗಿದೆ).
ಚಿಕಿತ್ಸೆ ಬಳಿಕ ಮಗು :
ನನಗೀಗ 27 ವರ್ಷ. ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಮದುವೆ ಹಾಗೂ ಕುಟುಂಬ ಎನ್ನುವ ಸಾವಿರಾರು ಕನಸು ಇನ್ನೂ ಕನಸಾಗಿಯೂ ಉಳಿದುಕೊಂಡಿದೆ. ಶಿಕ್ಷಣ ಮುಗಿಸಿ,ಉದ್ಯೋಗಕ್ಕೆ ಸೇರಿದ ಮೂರು ವರ್ಷದಲ್ಲಿ ಕ್ಯಾನ್ಸರ್ ಸಿಡಿಲು ಭವಿಷ್ಯಕ್ಕೆ ಬೆಂಕಿ ಹಾಕಿದೆ. ಕ್ಯಾನ್ಸರ್ ಪ್ರಾರಂಭ ಹಂತದಲ್ಲಿ ಇದೆ.ಚಿಕಿತ್ಸೆ ಪಡೆದರೆ ಗುಣವಾಗುತ್ತದೆ ಎಂದಿದ್ದಾರೆ. ಆದರೆ ಅನಂತರಏನು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಈ ನಡುವೆ ಪ್ರಿಯಕರ ನನ್ನ ಚಿಕಿತ್ಸೆ ಬಳಿಕ ಮದುವೆಯಾಗುತ್ತೇನೆ ಎಂದು ಒಪ್ಪಿದ್ದಾರೆ. ಆದರೆಕೀಮೋಥೆರಪಿ ಒಳಗಾದರೆ ಮಗುವಾಗುವುದು ಕಷ್ಟ. ಆದರೆ ಮಗು ನನ್ನ ಜೀವನದ ಕನಸು. ಈ ನಿಟ್ಟಿನಲ್ಲಿ ನನ್ನ ಅಂಡಾಣುವನ್ನು ಎಗ್ ಫ್ರೀಜಿಂಗ್ ಮಾಡಿದ್ದೇನೆ. ಸುಮಾರು ಒಂದು ವರ್ಷ ಆಗಿದೆ. ಚಿಕಿತ್ಸೆ ಪಡೆದು ಗುಣ ಮುಖರಾದ ಬಳಿಕಮಗುವನ್ನು ಪಡೆಯುವ ಹಂಬಲವಿದೆ ಎನ್ನುತ್ತಾರೆ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಜ್ಞಾನ(ಹೆಸರು ಬದಲಾಯಿಸಲಾಗಿದೆ).
ಇನ್ನಷ್ಟು ಹಾರಾಡಬೇಕು– ಮಗು ಬೇಡ :
ವೃತ್ತಿಯಲ್ಲಿ ನಾನು ಗಗನ ಸಖೀ. ನಮ್ಮಲ್ಲಿ ದೈಹಿಕ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ. ಮದುವೆಯಾಗಿ 3 ವರ್ಷವಾಗಿದ್ದು, 30ರ ಸಮೀಪಿಸುತ್ತಿದೆ ವಯಸ್ಸು. ಇಷ್ಟು ದಿನ ಫ್ಯಾಮಿಲಿ ಪ್ಲ್ರಾನಿಂಗ್‌ನಲ್ಲಿದೆ. ಆದರೆ ಇದೀಗ ತೀವ್ರವಾದ ಭಯ ಕಾಡುತ್ತಿದೆ. ವಯಸ್ಸು ಹೆಚ್ಚಾದಂತೆಅಂಡಾಣು ಕ್ಷೀಣವಾಗುತ್ತದೆ ಎನ್ನಲಾಗುತ್ತಿದೆ. ಹಾಗಂತಮಗು ಕೂಡಲೇ ಪಡೆಯುವ ಮನಸ್ಸಿಲ್ಲ. ಇನ್ನಷ್ಟು ವರ್ಷಲೋಹದ ಹಕ್ಕಿಯ ಜಗತ್ತಿನಲ್ಲಿ ಹಾರಬೇಕು ಎನ್ನುವ ಆಸೆಇದೆ. ಜತೆಗೆ ಮಗುವಿನ ಆರೈಕೆಯಲ್ಲಿ ಜೀವನದ ಸುಖಪಡೆಯಬೇಕು. ವೃತ್ತಿ ಬದುಕಿಗೆ ಇನ್ನು 3ರಿಂದ 4 ವರ್ಷದ ಬಳಿಕ ಇತಿಶ್ರೀ ಹಾಡಿ, ಮಗು ಪಡೆಯಬೇಕು ಅಂತ ಇದ್ದೀನಿ. ಹಾಗಾಗಿ ಅಂಡಾಣು ಸಂಗ್ರಹಿಸಿ ಇಡುವುದು ಉತ್ತಮ ಎಂದು ಮನಗೊಂಡು, ಎಗ್ ಫ್ರೀಜಿಂಗ್ ಮಾಡಿಸಿದ್ದೇನೆ. ಇನ್ನು ಯಾವುದೇ ಚಿಂತೆಯಿಲ್ಲದೆ ಕೆಲಸದ ಕಡೆಗೆಗಮನ ನೀಡಬಹುದು ಎನ್ನುತ್ತಾರೆ ಗಗನ ಸಖಿ ಖ್ಯಾತಿ(ಹೆಸರು ಬದಲಾಯಿಸಲಾಗಿದೆ).
ನನಗೆ ನನ್ನದೇ ಮಗುಬೇಕು :
ನನಗೆ ಮಗು ಬೇಕು. ಆದರೆ ಇದೀಗ 9 ತಿಂಗಳು ಹೊತ್ತು, ಪ್ರಸವದ ನೋವು ಪಡೆದು ಮಗುವನ್ನು ಪಡೆಯುವ ಇಚ್ಛೆ ಇಲ್ಲ. ಮಗು ಬೇಕು ಎನ್ನುವ ನಿಟ್ಟಿನಲ್ಲಿ ನನ್ನ ಅಂಡಾಣು ಹಾಗೂ ಪತಿಯ ವೀರ್ಯವನ್ನು ಸಂಗ್ರಹಿಸಲಾಗಿತ್ತು. ಆದರೆ ವಿಧಿ ಆಟ ಬೇರೆ ಇತ್ತು. ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಪತಿ ತೀರಿಕೊಂಡರು. ಪ್ರಸ್ತುತ ಮಗುವನ್ನು ನನ್ನಗರ್ಭದಲ್ಲಿಟ್ಟು ಜನನ ಕೊಡುವ ಮನಸ್ಥಿತಿ ಇಲ್ಲ. ಇದರಿಂದ ಬಾಡಿಗೆ ತಾಯಿ ಮೂಲಕ ನನ್ನಹಾಗೂ ಪತಿಯ ಮಗುವನ್ನು ಪಡೆಯುವ ನಿರೀಕ್ಷೆಯಲ್ಲಿದ್ದೇನೆ. ಬಾಡಿಗೆ ತಾಯಿಗೆ ಇದೀಗ 7 ತಿಂಗಳು ಪೂರ್ಣಗೊಂಡಿದೆ. ಎರಡು ಬಾರಿ ಪ್ರಯತ್ನದ ಬಳಿಕ ಗರ್ಭ ನಿಂತಿದೆ. ಪತಿಯ ನೆನಪಿನಲ್ಲಿ ಮಗುವಿನ ಜತೆಗೆ ಜೀವನವನ್ನು ಕಳೆಯುತ್ತೇನೆ ಎನ್ನುತ್ತಾರೆ ನಿಸರ್ಗ( ಹೆಸರು ಬದಲಾಯಿಸಲಾಗಿದೆ).
ಯಾಕೆ ಎಗ್ ಫ್ರೀಜಿಂಗ್? :
- ಮಹಿಳೆ ಮಗುವನ್ನು ನಿಧಾನ ಪಡೆಯಲು ಇಚ್ಛಿಸಿದಾಗ
- ಅನಾರೋಗ್ಯದಿಂದ ಬಳಲುತ್ತಿದ್ದರೆ
- ಮಹಿಳೆಯರಲ್ಲಿ ಎಗ್ ಫ್ರೀಜಿಂಗ್ ಒಲವು ಹೆಚ್ಚಳ
- ಭವಿಷ್ಯದ ಮಗುವಿಗೆ ಈಗಲೇ ಅಂಡಾಣು ಸಂಗ್ರಹ
- ಮಾಡರ್ನ್ ತಾಯಿತನದ ಒಲವು
- 35+ ವಯಸ್ಸಿನಲ್ಲಿಯೂ ಮಗುವನ್ನು ಪಡೆಯಬಹುದು