Advertisement
ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಮಧ್ಯಾಹ್ನದ ಉಪಾಹಾರ ಯೋಜನೆಯ ದಾಸೋಹ ವಿಭಾಗದಿಂದ ಓರ್ವ ವಿದ್ಯಾರ್ಥಿಗೆ ಮೊಟ್ಟೆ ಅಥವಾ ಬಾಳೆಹಣ್ಣು ಯಾ ಚಿಕ್ಕಿ ಖರೀದಿಗೆ 6 ರೂ. ನೀಡಲಾಗುತ್ತದೆ. ವಿದ್ಯಾರ್ಥಿಗಳ ಆಯ್ಕೆಗೆ ಅನುಸಾರವಾಗಿ ಶಾಲಾ ಹಂತ ದಲ್ಲಿ ಖರೀದಿಸಿ ನೀಡಲಾಗುತ್ತಿದ್ದು, ಮೊಟ್ಟೆ ತಿನ್ನುವವರ ಸಂಖ್ಯೆಯೇ ಹೆಚ್ಚಿರು ವುದ ರಿಂದ ಶಾಲೆಗಳಿಗೆ ಹೆಚ್ಚುವರಿ ಹೊರೆ ಯಾಗುತ್ತಿದೆ. ಇದನ್ನು ಹೊಂದಿಸಲು ಶಿಕ್ಷಕರು ಬಹು ವಿಧದ ಕಸರತ್ತು ಮಾಡುತ್ತಿದ್ದಾರೆ.
Related Articles
ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಮೊಟ್ಟೆ ಯಾ ಬಾಳೆಹಣ್ಣು ಯಾ ಚಿಕ್ಕಿಯನ್ನು ಕಳೆದ ಸಾಲಿನಿಂದಲೇ ವಿತರಿಸುತ್ತಿದೆ. ಪ್ರಸಕ್ತ ಸಾಲಿನಿಂದ ಪ್ರೌಢಶಾಲಾ ವಿದ್ಯಾರ್ಥಿ ಗಳಿಗೂ ವಿಸ್ತರಿಸಿದೆ. ಉಡುಪಿ ಜಿಲ್ಲೆಯಲ್ಲಿ 1ರಿಂದ 8ನೇ ತರಗತಿಯಲ್ಲಿ 61 ಸಾವಿರ ಹಾಗೂ 9ರಿಂದ 10ನೇ ತರಗತಿಯಲ್ಲಿ 17 ಸಾವಿರ ವಿದ್ಯಾರ್ಥಿಗಳ ಸಹಿತ ಸುಮಾರು 78 ಸಾವಿರ ವಿದ್ಯಾರ್ಥಿಗಳು ಸರಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಸುಮಾರು 63 ಸಾವಿರ ವಿದ್ಯಾರ್ಥಿಗಳು ಊಟದ ಜತೆಗೆ ಮೊಟ್ಟೆ ಪಡೆಯುತ್ತಿದ್ದಾರೆ. ಸುಮಾರು 9 ಸಾವಿರ ವಿದ್ಯಾರ್ಥಿಗಳು ಬಾಳೆ ಹಣ್ಣು ಪಡೆಯುತ್ತಿದ್ದು, 4 ಸಾವಿರ ವಿದ್ಯಾರ್ಥಿಗಳು ಚಿಕ್ಕಿ ಪಡೆಯುತ್ತಿದ್ದಾರೆ. ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸುವ ದಿನ ಒಂದಿಷ್ಟು ವಿದ್ಯಾರ್ಥಿಗಳು ರಜೆ ಇರುತ್ತಾರೆ. ಹೀಗಾಗಿ ಶೇ. 99ರಷ್ಟು ಮಕ್ಕಳು ಸರಕಾರದ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
Advertisement
ಇಲಾಖೆಗೆ ಮನವಿಮೊಟ್ಟೆ ಯಾ ಬಾಳೆಹಣ್ಣು ಯಾ ಚಿಕ್ಕಿ ವಿತರಣೆಗೆ ನೀಡು ತ್ತಿರುವ ಘಟಕ ವೆಚ್ಚ ಸಾಕಾಗುತ್ತಿಲ್ಲ. ಮಾರು ಕಟ್ಟೆಯ ದರಕ್ಕೆ ಅನುಗುಣವಾಗಿ ಅನುದಾನ ಒದ ಗಿಸ ಬೇಕು. ಇಲ್ಲವಾದರೆ ವಿತರಣೆ ಕಷ್ಟವಾಗುತ್ತದೆ ಅಥವಾ ಹೆಚ್ಚುವರಿ ಹಣವನ್ನು ಮಕ್ಕಳ ಹೆತ್ತವರಿಂದ ಸಂಗ್ರಹಿಸ ಬೇಕಾಗುತ್ತದೆ. ಕೆಲವು ಎಸ್‌ಡಿಎಂಸಿಗಳು ಇದಕ್ಕೆ ಸಹಕಾರ ನೀಡಿದರೆ, ಕೆಲವರು ನೀಡುವು ದಿಲ್ಲ. ಮೊಟ್ಟೆ ಯಿಂದ ಹೆಚ್ಚುವರಿ ಕೆಲಸವೂ ಆಗುತ್ತಿದೆ. ಇದಕ್ಕೆಲ್ಲ ಇಲಾಖೆ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂಬ ದೂರನ್ನು ಕೆಲವು ಶಾಲಾಡಳಿತ ಮಂಡಳಿಯವರು ಇಲಾಖೆಯ ಉಪನಿರ್ದೇಶಕರಿಗೆ ತಲುಪಿಸಿದ್ದಾರೆ. ಮೊಟ್ಟೆ ಅಥವಾ ಬಾಳೆಹಣ್ಣು ಅಥವಾ ಚಿಕ್ಕಿ ಒಂದಕ್ಕೆ 6 ರೂ. ನೀಡಲಾಗುತ್ತಿದೆ. ಅನು ದಾನದ ಕೊರತೆಯಾದಲ್ಲಿ ಶಾಲಾ ಹಂತದಲ್ಲೇ ಖರೀದಿಯ ಮೂಲಕ ಸರಿದೂಗಿಸಿಕೊಳ್ಳಲು ತಿಳಿಸಿದ್ದೇವೆ. ಕೆಲವು ಶಾಲೆಗಳಿಂದ ಮನವಿಯೂ ಬಂದಿದೆ. ಸರಕಾರದ ಗಮನಕ್ಕೆ ತಂದಿದ್ದೇವೆ.
– ಕೆ. ಗಣಪತಿ, ಡಿಡಿಪಿಐ, ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಉಡುಪಿ