Advertisement

Army chief: ಚೀನ ಜತೆ ವಿಶ್ವಾಸ ಪುನಸ್ಥಾಪನೆಗೆ ಪ್ರಯತ್ನ: ಸೇನಾ ಮುಖ್ಯಸ್ಥ ದ್ವಿವೇದಿ

11:17 PM Oct 22, 2024 | Team Udayavani |

ಬೀಜಿಂಗ್‌/ಹೊಸದಿಲ್ಲಿ: ಚೀನ ಗಡಿಯಲ್ಲಿ ಆ ದೇಶದ ಸೇನೆಯ ಜತೆಗೆ ವಿಶ್ವಾಸ, ನಂಬಿಕೆ ಮತ್ತೆ ಸ್ಥಾಪಿಸಲು ಪ್ರಯತ್ನ ನಡೆಸಬೇಕಾಗಿದೆ ಎಂದು ಭೂಸೇನಾ ಮುಖ್ಯಸ್ಥ ಜ.ಉಪೇಂದ್ರ ದ್ವಿವೇದಿ ಹೇಳಿದ್ದಾರೆ.

Advertisement

ಗಡಿ ಗಸ್ತು ಒಪ್ಪಂದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 2020 ಏಪ್ರಿಲ್‌ಗಿಂತ ಮೊದಲಿದ್ದ ಸ್ಥಿತಿ ಮರುಕಳಿಸಬೇಕಾದರೆ ಉಭಯ ರಾಷ್ಟ್ರ ಗಳ ನಡುವೆ ವಿಶ್ವಾಸ ಮರುಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯಗತರಾಗಿದ್ದು, ಅದಕ್ಕೆ ಕೆಲವು ಸಮಯ ಬೇಕಿದೆ ಎಂದರು. ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಕೃಷ್ಣ ಸ್ವಾಮೀನಾಥನ್‌ ಪ್ರತಿಕ್ರಿಯಿಸಿ ಒಪ್ಪಂದ ಸಂತೋಷವೇ. ಆದರೆ ಭದ್ರತೆ ವಿಚಾರವಾದ ಕಾರಣ ಯಾವುದೇ ನಿರ್ಧಾರ ಸುಲಭವಲ್ಲ ಎಂದಿದ್ದಾರೆ.

ಸಕಾರಾತ್ಮಕ ಪರಿಹಾರ: ಒಪ್ಪಂದಕ್ಕೆ ಚೀನ ಬಣ್ಣನೆ

ಗಲ್ವಾನ್‌ ಬಿಕ್ಕಟ್ಟು ಪರಿಹಾರಕ್ಕೆ ಗಡಿ ಜಂಟಿ ಗಸ್ತು ತಿರುಗುವ ಬಗೆಗಿನ ಒಪ್ಪಂದವನ್ನು “ಸಕಾರಾತ್ಮಕ ಪರಿಹಾರ’ ಎಂದು ಚೀನ ಬಣ್ಣಿಸಿದೆ. ಅದನ್ನು ಕಾರ್ಯಗತಗೊಳಿಸಲು ಭಾರತದೊಂದಿಗೆ ಕೆಲಸ ಮಾಡುವುದಾಗಿಯೂ ಹೇಳಿದೆ. ಇತ್ತೀಚಿನ ಮಾತುಕತೆಗಳೇ ಇದಕ್ಕೆ ಕಾರಣವೆಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next