Advertisement

ಕಾಶ್ಮೀರವನ್ನು100% ಇಸ್ಲಾಮಿಕ್ ರಾಜ್ಯ ಮಾಡಲು ಪ್ರಯತ್ನ : ರಾಹುಲ್ ಕೌಲ್

01:21 PM Jun 16, 2022 | Team Udayavani |

ಪಣಜಿ: ಜಿಹಾದಿ ಭಯೋತ್ಪಾದಕರಿಂದ ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿ 32 ವರ್ಷಗಳು ಕಳೆದಿವೆ, ಆದರೆ ಇಂದಿಗೂ ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಅವರ ಭೀಕರ ಹತ್ಯೆಯ ಸರಣಿಯು ಮುಂದುವರಿದಿದೆ. ಹಿಂದೂಗಳನ್ನು ಅಕ್ಷರಶಃ ಹೆಕ್ಕಿಹೆಕ್ಕಿ ಕೊಲ್ಲಲಾಗುತ್ತಿದೆ ಯೂಥ್ ಫಾರ್ ಪನೂನ ಕಾಶ್ಮೀರ’ನ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಕೌಲ್ ಹೇಳಿದ್ದಾರೆ.

Advertisement

ಗೋವಾ ಪೊಂಡಾದ ಶ್ರೀ ರಾಮನಾಥಿಯಲ್ಲಿ ನಡೆಯುತ್ತಿರುವ ದಶಮ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ತಿಂಗಳುಗಳಲ್ಲಿ ಕಾಶ್ಮೀರದಲ್ಲಿ 10 ಹಿಂದೂಗಳ ಹತ್ಯೆಯಾಗಿದೆ. ಇದರಿಂದಾಗಿ ಇಂದಿಗೂ ಹಿಂದೂಗಳು ಜೀವ ಮತ್ತು ಧರ್ಮದ ರಕ್ಷಣೆಗಾಗಿ ಕಾಶ್ಮೀರದಿಂದ ಪಲಾಯನ ಮಾಡಬೇಕಾಗುತ್ತಿದೆ. ಭಾರತದಲ್ಲಿ ಸಂವಿಧಾನ ಮತ್ತು ಕಾನೂನಿನ ರಾಜ್ಯವಿದ್ದರೂ ಇದು ಏಕೆ ನಿಲ್ಲಲಿಲ್ಲ ? ಕಲಮ್ 370 ರದ್ದಾದರೂ ಕಾಶ್ಮೀರವನ್ನು ಹಿಂದೂರಹಿತ ಮಾಡಿ ಶೇ. 100 ಇಸ್ಲಾಮಿಕ್ ರಾಜ್ಯ ಮಾಡಲು ಪ್ರಯತ್ನಿಸಲಾಗುತ್ತಿದೆ. ಕಾಶ್ಮೀರಿ ಹಿಂದೂಗಳ ಹತ್ಯೆಯು ಅವರ ನರಮೇಧವಾಗಿದೆ ಎಂಬುದು ಸರಕಾರ ಒಪ್ಪಿಕೊಳ್ಳಬೇಕು. ಹಿಂದೂಗಳು ಕಾಶ್ಮೀರಕ್ಕೆ ಮರಳುವುದು ಎಂದರೆ ಕೆಲವು ಲಕ್ಷ ಜನರ ಮರಳುವಿಕೆ ಅಲ್ಲ, ಆದರೆ ಭಾರತದ, ಭಾರತಪ್ರೇಮಿಗಳ ಮರಳುವಿಕೆಯಾಗಿದೆ. 32 ವರ್ಷಗಳ ನಂತರವೂ ಕಾಶ್ಮೀರಿ ಹಿಂದೂಗಳ ಹತ್ಯಾಸರಣಿ ಮತ್ತು ಸ್ಥಳಾಂತರ ಮುಂದುವರಿದರೆ, ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಸಿಗುವುದು ಯಾವಾಗ ? ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.

ಯೂಥ ಫಾರ್ ಪನೂನ್ ಕಾಶ್ಮೀರ್ ಇದರ ರಾಷ್ಟ್ರೀಯ ಉಪಾಧ್ಯಕ್ಷ  ರೋಹಿತ ಭಟ್  ಮಾತನಾಡಿ, ಕಾಶ್ಮೀರದಲ್ಲಿ ಹಿಂದೂಗಳನ್ನು ಹತ್ಯೆ ಮಾಡುತ್ತಿರುವ ಭಯೋತ್ಪಾದಕರ ವಿರುದ್ಧ ಸರಕಾರ ಕಠಿಣ ಸೇನಾ ಕಾರ್ಯಾಚರಣೆ ಕೈಗೊಳ್ಳಬೇಕು. ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್‍ನಂತಹ ಇತರ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಬೇಕು ಮತ್ತು ಅವುಗಳನ್ನು ಬುಡಸಮೇತ ಕಿತ್ತೊಗೆಯಬೇಕು. 7 ಲಕ್ಷ ನಿರಾಶ್ರಿತ ಕಾಶ್ಮೀರಿ ಹಿಂದೂಗಳು ಕಾಶ್ಮೀರಕ್ಕೆ ಮರಳಲು, ಝೇಲಂ ನದಿಯ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿರುವ ಕಾಶ್ಮೀರ ಕಣಿವೆಯಲ್ಲಿ ಹಿಂದೂಗಳಿಗಾಗಿ ಪ್ರತ್ಯೇಕವಾದ ಕೇಂದ್ರಾಡಳಿತ ಪ್ರದೇಶ – ಪನೂನ್ ಕಾಶ್ಮೀರ ರಚಿಸಬೇಕು. ವಿಶ್ವಸಂಸ್ಥೆಯ ನರಮೇಧ ಕಾಯಿದೆಗೆ ಅನುಗುಣವಾಗಿ ಭಾರತ ಸರಕಾರವು ಕ್ರಮ ಕೈಗೊಳ್ಳಬೇಕು. ಕಾಶ್ಮೀರಿ ನರಮೇಧ ಮತ್ತು ದೌರ್ಜನ್ಯ ತಡೆ ಕಾಯಿದೆ 2020 ಅನ್ನು ಸಂಸತ್ತು ಅಂಗೀಕರಿಸಬೇಕು ಎಂದು ಹೇಳಿದರು.

ಈ ವೇಳೆ ತಮಿಳುನಾಡಿನ ಹಿಂದು ಮಕ್ಕಳ ಕತ್ಛಿಯ ಸಂಸ್ಥಾಪಕ ಅಧ್ಯಕ್ಷ  ಅರ್ಜುನ ಸಂಪಥ ಮಾತನಾಡುತ್ತಾ, ಪ್ರತಿಯೊಬ್ಬ ಕಾಶ್ಮೀರಿ ಹಿಂದೂಗಳಿಗೂ ಸಶಸ್ತ್ರ ರಕ್ಷಣೆ ನೀಡಬೇಕು. ಕೇಂದ್ರ ಸರಕಾರ ಕೂಡಲೇ ಪಾಕ್ ಆಕ್ರಮಿತ ಕಾಶ್ಮೀರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಭಾರತಕ್ಕೆ ಸೇರಿಸಬೇಕು ಎಂದು ಹೇಳಿದರು. ಈ ವೇಳೆ ಸಮಿತಿಯ  ರಮೇಶ ಶಿಂದೆ ಇವರು ಮಾತನಾಡುತ್ತಾ, ಕಾಶ್ಮೀರಿ ಹಿಂದೂಗಳು ಮತ್ತೊಮ್ಮೆ ತಮ್ಮ ದೇಶಕ್ಕೆ ಸ್ಥಳಾಂತರಗೊಳ್ಳುವ ಮುಜುಗರದ ಪ್ರಮೇಯ ಬಂದಿರುವುದು ಇದು ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳಿಂದ ಕೇಂದ್ರ ಸರಕಾರಕ್ಕೆ ಒಡ್ಡಿರುವ ಸವಾಲಾಗಿದೆ. ಇಂದು ಭಾರತದಲ್ಲಿ ಇಂತಹ ಕಾಶ್ಮೀರ ಸೃಷ್ಟಿಯಾಗದೇ ಇರಲು, ಹಿಂದೂಗಳು ಸರ್ವಧರ್ಮಸಮಭಾವ ಮತ್ತು ಸೆಕ್ಯುಲರವಾದ ಎಂಬ ಭ್ರಮೆಯ ಕಲ್ಪನೆಯಿಂದ ಹೊರಬಂದು ಹಿಂದೂ ಸಮಾಜವನ್ನು ರಕ್ಷಿಸಲು ತಮ್ಮನ್ನು ತಾವು ಸಿದ್ಧಪಡಿಸಬೇಕು ಎಂದರು.

ವ್ಯಾಸಪೀಠದ ಮೇಲೆ ಯೂಥ ಫಾರ್ ಪನೂನ್  ಕಾಶ್ಮೀರದ ರಾಷ್ಟ್ರೀಯ ಉಪಾಧ್ಯಕ್ಷ  ರೋಹಿತ ಭಟ್, ತಮಿಳುನಾಡಿನ ಹಿಂದೂ ಮಕ್ಕಳ ಕತ್ಛಿಯ ಸಂಸ್ಥಾಪಕ ಅಧ್ಯಕ್ಷ ಅರ್ಜುನ ಸಂಪಥ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next