Advertisement

ಸರಕಾರದ ಅನುದಾನಕ್ಕೆ ಯತ್ನ: ಪ್ರಮೋದ್‌, ಸೊರಕೆ

06:40 AM Nov 03, 2017 | Team Udayavani |

ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘ ಅಲೆವೂರು ಇದರ ಮಹತ್ವಾಕಾಂಕ್ಷಿ ಯೋಜನೆ ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿ ಸಭಾಭವನ ನಿರ್ಮಾಣದ ಮೂಲಕ ಆ ಭಾಗದ ಜನತೆಗೆ ಉತ್ತಮ ಸೇವೆ ದೊರಕುವ ಭರವಸೆ ಇರುವ ನೆಲೆಯಲ್ಲಿ ಮುಖ್ಯಮಂತ್ರಿ ಅವರಲ್ಲಿ ಚರ್ಚಿಸಿ ಸಭಾಭವನ ನಿರ್ಮಾಣಕ್ಕೆ ಸರಕಾರದ ಅನುದಾನ ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಮತ್ತು ಶಾಸಕ ವಿನಯ ಕುಮಾರ್‌ ಸೊರಕೆ ಭರವಸೆ ನೀಡಿದರು.

Advertisement

17 ಗ್ರಾಮಗಳ ಸುಮಾರು 2,500 ಮಂದಿ ಸದಸ್ಯರನ್ನು ಹೊಂದಿದ ಉಡುಪಿ ಗ್ರಾಮೀಣ ಬಂಟರ ಸಂಘ ಅಲೆವೂರು, ಮಣಿಪುರ ಗ್ರಾಮದ ಕುಂತಳನಗರದಲ್ಲಿ ಸಬಾಭವನ ನಿರ್ಮಾಣಕ್ಕೆ ಅಣಿಯಾಗಿದ್ದು, ಇದರ ಶಂಕು ಸ್ಥಾಪನೆ ಕಾರ್ಯಕ್ರಮ ಡಿ. 10ರಂದು ನಡೆಯಲಿದೆ. ಈ ಪ್ರಯಕ್ತ ಗ್ರಾಮೀಣ ಬಂಟರ ಸಂಘ ಮತ್ತು ಗ್ರಾಮೀಣ ಬಂಟರ ಸಂಘದ ಬಂಟರ ಸಭಾಭವನ ನಿರ್ಮಾಣ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಮತ್ತು ಶಾಸಕ ವಿನಯ ಕುಮಾರ್‌ ಸೊರಕೆ ಅವರನ್ನು ಭೇಟಿ ಮಾಡಿ ನೀಲನಕ್ಷೆ ತೋರಿಸಿ ವಿವರಿಸಿದರು.

ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಸಕಾರಾಮ ಶೆಟ್ಟಿ, ಕಟ್ಟಡ ಸಮಿತಿ ಅಧ್ಯಕ್ಷರಾದ ಅಶೋಕ ಕುಮಾರ್‌ ಶೆಟ್ಟಿ, ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ನವೀನಚಂದ್ರ ಶೆಟ್ಟಿ ಕಾಪು, ಹರೀಶ್‌ ಬೆಳ್ಳೆ, ಕುಶಲ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next