Advertisement
ಶುಕ್ರವಾರ ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿ, ಅನಂತ್ ಕುಮಾರ್ ಈ ಖಾತೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು, ಯೂರಿಯಾ ಬಳಕೆಯಲ್ಲಿ ಅಕ್ರಮ ತಡೆಯಲು ಬೇವು ಲೇಪನ ಕ್ರಾಂತಿಕಾರಿ ಹೆಜ್ಜೆ ಎಂದರು. ಅಡಿಕೆ ಕೊಳೆರೋಗಕ್ಕೆ ಪರಿಹಾರ ರಾಜ್ಯ ಸರಕಾರದ ಕೆಲಸ. ಕೇಂದ್ರ ಸರಕಾರವು ಧಾರಣೆ ಕುಸಿಯದಂತೆ ಮಾರುಕಟ್ಟೆ ವ್ಯವಸ್ಥೆಗೆ ಉತ್ತೇಜನವನ್ನು ನೀಡಬಹುದು. ಅಡಿಕೆ ನಿಷೇಧದ ಆತಂಕ ದೂರ ಮಾಡುವ ನಿಟ್ಟಿನಲ್ಲಿ ತಜ್ಞರು, ಕೇಂದ್ರಗಳ ಮೂಲಕ ಸಂಶೋಧನೆ ನಡೆಸಿದ್ದು, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದ್ದೇವೆ ಎಂದರು.
ಪುತ್ತೂರು ಜಿಲ್ಲೆಗಾಗಿ ಹೋರಾಟ ಆರಂಭವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ಪುತ್ತೂರು ಜಿಲ್ಲೆ ಹೋರಾಟ ಆರಂಭ ಮಾಡಿದ್ದೇ ನಾವು.ಸಮಿತಿ ಮಾಡಿದ್ದೆವು ಮತ್ತು ವಿಧಾನಸಭೆಯಲ್ಲಿಯೂ ವಿಷಯ ಪ್ರಸ್ತಾಪಿಸಿದ್ದೆವು. ಪುತ್ತೂರು ಜಿಲ್ಲಾ ಕೇಂದ್ರ ಆಗುವುದರಿಂದ ಹೆಚ್ಚು ಅನುದಾನ ಬರುತ್ತದೆ. ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.