ರಾಯಚೂರು: ಐತಿಹಾಸಿಕವಾಗಿ ಮಹತ್ವದ ಸ್ಥಾನ ಪಡೆದಿರುವ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆಯಲು ಪ್ರಯತ್ನ ಮಾಡುವುದಾಗಿ ಜಿಲ್ಲಾಧಿ ಕಾರಿ ಆರ್. ವೆಂಕಟೇ‚ಶ ಕುಮಾರ್ ತಿಳಿಸಿದರು.
ನಗರದ ಡಿಸಿ ಕಚೇರಿ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ನಿಮಿತ್ತ ಪ್ರವಾಸೋದ್ಯಮ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಕಷ್ಟು ಐತಿಹಾಸಿಕ ತಾಣಗಳಿದ್ದು, ನಿರ್ವಹಣೆಗೆ ಒತ್ತು ನೀಡಲಾಗುವುದು. ರಾಯಚೂರು ಕೋಟೆ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸತೀಶ ಮಾತನಾಡಿ, ನಗರದ ಕೋಟೆ, ಮಾನವಿ, ಕಲ್ಲೂರು, ಮುದಗಲ್, ಮಸ್ಕಿ, ಮಲಿಯಾಬಾದ್ ಸೇರಿ 10 ಪ್ರಮುಖ ಪ್ರವಾಸೋದ್ಯಮ ತಾಣ ಸರ್ಕಾರ ಗುರುತಿಸಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತಿ ವರ್ಷ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ಸ್ಥಳಗಳಲ್ಲಿ ಯಾತ್ರಿ ನಿವಾಸ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಪ್ರವಾಸೋದ್ಯಮ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಸ್ವಚ್ಛತಾ ಪಕ್ವಾಡ-2020 ಘೋಷ ವಾಕ್ಯದಡಿ ಸೈಕಲ್ ಜಾಥಾ ನಡೆಸಲಾಯಿತು. ಜಾಥಾ ಡಿಸಿ ಕಚೇರಿಯಿಂದ ಶುರುವಾಗಿ ಬಸವೇಶ್ವರ- ಅಂಬೇಡ್ಕರ್ ವೃತ್ತದ ಮೂಲಕ ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಕೋಟೆಗೆ ತಲುಪಿತು. ಬಳಿಕ ಕೋಟೆಯಲ್ಲಿ ಸ್ವತ್ಛತಾ ಅಭಿಯಾನ ಮಾಡಲಾಯಿತು.
ಈ ವೇಳೆ ಜಿಪಂ ಸಿಇಒ ಜಿ. ಲಕ್ಷ್ಮೀಕಾಂತ ರೆಡ್ಡಿ, ಎಡಿಸಿ ದುರಗೇಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ರಾಮಕೃಷ್ಣ, ಡಿಯುಡಿಸಿ ಪಿಡಿ ಮಹೇಂದ್ರಕುಮಾರ್, ನಗರಸಭೆ ಪೌರಾಯುಕ್ತ ದೊಡ್ಡಮನಿ, ಡಾ| ವಿಜಯ ಶಂಕರ, ತ್ರಿವಿಕ್ರಮ ಜೋಷಿ, ಶ್ರೀನಿವಾಸ ರಾಯಚೂರಕರ್, ರಾಜೇಂದ್ರ ಜಲ್ದಾರ್, ರಾಜೇಂದ್ರ ಶಿವಾಳೆ ಹಾಗೂ ರೆಡ್ ಕ್ರಾಸ್ ಸಂಸ್ಥೆ ಮುಖಂಡರು ಇದ್ದರು