Advertisement

ಬಹುತ್ವ ನಾಶಪಡಿಸುವ ಯತ್ನ

03:26 PM Dec 17, 2017 | Team Udayavani |

ಬೆಂಗಳೂರು: ಒಂದು ದೇಶ, ಒಂದು ಭಾಷೆ, ಒಂದು ಧರ್ಮದ ಮೂಲಕ ಬಹುತ್ವ ನಾಶಗೊಳಿಸುವ ಪ್ರಯತ್ನ ಮೂಲಭೂತವಾದಿಗಳಿಂದ ನಡೆಯುತ್ತಿದ್ದು, ಇದರಿಂದ ದೇಶದ ವಿವಿಧ ಸಮುದಾಯಗಳ ಬದುಕಿಗೆ ಗಂಡಾಂತರ ಎದುರಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಖೀಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ 3ನೇ ರಾಜ್ಯ ಅಧಿವೇಶನ “ಮಂಥನ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದ ಸಾಮರಸ್ಯ ಹಾಳುಮಾಡದೆ, ದೇಶದ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯ ಕಲ್ಪಿಸುವುದು ಸಂವಿಧಾನದ ಆಶಯವಾಗಿದೆ. ಆದರೆ,
ಇತ್ತೀಚಿನ ದಿನಗಳಲ್ಲಿ ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಈ ರೀತಿಯ ಬದುಕು ನಿರೂಪಿಸಲು ಮೂಲಭೂತವಾದ ಪ್ರಯತ್ನಿಸುತ್ತಿದೆ. ಇದರಿಂದ ದೇಶಕ್ಕೆ ಗಂಡಾಂತರ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜಕೀಯ ಬೀಗದ ಕೈ: ಈ ಎಲ್ಲ ಸಮಸ್ಯೆಗಳ ಬೀಗದ ಕೈ ಇರುವುದು ರಾಜಕೀಯದಲ್ಲಿ. ಶಿಕ್ಷಣ, ಹೋರಾಟ ಮತ್ತು ಸಂಘಟನೆ ಮೂಲಕ ಈ ರಾಜಕೀಯವನ್ನು ನಿಯಂತ್ರಿಸಬಹುದು. ಕಳೆದುಹೋಗುತ್ತಿರುವ ನಮ್ಮ ಹಕ್ಕುಗಳನ್ನು ರಕ್ಷಿಸಬಹುದು. ಈ ನಿಟ್ಟಿನಲ್ಲಿ
ಮತದಾನದ ಹಕ್ಕನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ವಿವೇಚನೆಯುಳ್ಳ ಯೋಗ್ಯವಾದವರ ಕೈಯಲ್ಲಿ ಆಡಳಿತದ ಸೂತ್ರ ಕೊಡಬೇಕು ಎಂದು ಹೇಳಿದರು.

ಭಾವಸಾರ ಕ್ಷತ್ರಿಯ ಸಮಾಜಕ್ಕಾಗಿ ಪ್ರತ್ಯೇಕ ನಿಗಮ ಸ್ಥಾಪನೆ, ಕುಲದೇವತೆಯ ದೇವಸ್ಥಾನ, ವಸತಿ ನಿಲಯ ಮತ್ತಿತರ
ಸೌಲಭ್ಯಗಳನ್ನು ಒಳಗೊಂಡ ಸಮಾಜದ ಸಮುತ್ಛಯಕ್ಕಾಗಿ ಜಾಗ ಸೇರಿದಂತೆ ವಿವಿಧ ಬೇಡಿಕೆಗಳು ಸಂವಿಧಾನದ ಆಶಯಕ್ಕೆ
ಪೂರಕವಾಗಿದ್ದು, ಅವುಗಳ ಈಡೇರಿಕೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಯಾವುದೇ ಸಮುದಾಯ ಹೆಚ್ಚು ಸೌಲಭ್ಯಗಳನ್ನು ಪಡೆಯಬೇಕಾದರೆ, ರಾಜಕೀಯ ಶಕ್ತಿ ಇರಬೇಕು. ಆದರೆ, ಭಾವಸಾರ ಸಮುದಾಯದಲ್ಲಿ ಅಂತಹ ಪ್ರತಿನಿಧಿಗಳಿದ್ದರೂ, ಅವಕಾಶಗಳು ಸಿಕ್ಕಿಲ್ಲ. ಆದ್ದರಿಂದ ಸಂಘಟನೆ ಮೂಲಕ ಸಮಾಜ ತನ್ನ ಹಕ್ಕು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

Advertisement

ಪ್ರತ್ಯೇಕ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಮನವೊಲಿಸುವ ಪ್ರಯತ್ನ ಮಾಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಪಂಡರಾಪುರದ ಬೋಧಲೆ ಬುವಾ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಮಹಾಸಭಾ ಅಧ್ಯಕ್ಷ ಸುಧೀರ ಎಸ್‌. ನವಲೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ
ಮಲತೇಶ್‌ ವೈ. ಅಣ್ಣಿಗೇರಿ ಮತ್ತಿತರರು ಉಪಸ್ಥಿತರಿದ್ದರು. ಅನುಭವಿಸಿದ್ದೇನೆ; ಅನುಭವಿಸುತ್ತಾ ಇದ್ದೆನೆ “ಅಧಿವೇಶನ ಉದ್ಘಾಟಿಸಿ ಮಾತನಾಡಿದ ಸಭಾಪತಿ ಡಿ.ಎಚ್‌. ಶಂಕರಮೂರ್ತಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ರಂಗದ ದೊಡ್ಡದಿದೆ.

ಆ ದೊಡ್ಡ ರಂಗದಲ್ಲಿ ಸಣ್ಣ-ಸಣ್ಣ ಸಮುದಾಯಗಳ ನಾಯಕರು ಚುನಾವಣೆಯಲ್ಲಿ ನಿಂತು, ಗೆಲ್ಲುವುದು ತುಂಬಾ ಕಷ್ಟ. ನಿಮ್ಮಂತಹದ್ದೇ (ಭಾವಸಾರ ಸಮುದಾಯಕ್ಕೆ) ಕಡಿಮೆ ಜನಸಂಖ್ಯೆ ಇರುವ ಸಮುದಾಯ ದಿಂದ ಬಂದ ನಾನು, ಇದನ್ನು ಕಳೆದ 40-50 ವರ್ಷಗಳಿಂದ ಅನುಭವಿಸಿದ್ದೇನೆ; ಈಗಲೂ ಅನುಭವಿಸುತ್ತಿದ್ದೇನೆ,’ ಎಂದು ಸೂಚ್ಯವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next